ಮದುವೆಯ ಮರು ದಿನ ಗರ್ಲ್ ಫ್ರೆಂಡ್ ಜೊತೆ ವಧು ಪರಾರಿ: ವರನಿಗೆ ಹೃದಯಾಘಾತ! - Mahanayaka
10:17 PM Thursday 12 - December 2024

ಮದುವೆಯ ಮರು ದಿನ ಗರ್ಲ್ ಫ್ರೆಂಡ್ ಜೊತೆ ವಧು ಪರಾರಿ: ವರನಿಗೆ ಹೃದಯಾಘಾತ!

marriage
04/11/2021

ತ್ರಿಶೂರ್: ಮನುಷ್ಯನ ಭಾವನೆಗಳೇ ವಿಚಿತ್ರ. ಕೆಲವೊಮ್ಮೆ ಸಲಿಂಗಿಗಳ ಮೇಲೆಯೇ ಪ್ರೀತಿ ಹುಟ್ಟಿ ಬಿಡುತ್ತದೆ. ಆದರೆ, ಭಾರತದಲ್ಲಿ ಸಲಿಂಗ ವಿವಾಹಕ್ಕೆ ಸಾಮಾಜಿಕ ವಿರೋಧ ಕೂಡ ಇದೆ. ಇದೀಗ ಕೇರಳದ ತ್ರಿಶೂರ್ ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಮದುವೆಯ ಮರು ದಿನವೇ ಯುವತಿಯೋರ್ವಳು ತನ್ನ ಗರ್ಲ್ ಫ್ರೆಂಡ್ ಜೊತೆಗೆ ಓಡಿ ಹೋದ ಘಟನೆ ನಡೆದಿದೆ.

ತ್ರಿಶೂರ್​ ನ ಪಝುವಿಲ್​ ನ 23 ವರ್ಷದ ಮಹಿಳೆ ತನ್ನ ಗೆಳತಿಯೊಂದಿಗೆ ಪರಾರಿಯಾದಾಕೆ ಎಂದು ಹೇಳಲಾಗಿದೆ. ಮದುವೆಯ ಮರು ದಿನ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗುವುದಾಗಿ ತೆರಳಿದ್ದ ವಧು ಮರಳಿ ಬಂದಿರಲಿಲ್ಲ. ತೀವ್ರ ಹುಡುಕಾಟದ ಬಳಿಕವೂ ಆಕೆ ಪತ್ತೆಯಾಗದಿದ್ದಾಗ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿಯು ಮದುವೆಗೆ ಮೊದಲೇ ತನ್ನ ಗೆಳತಿಯೊಂದಿಗೆ ಓಡಿಹೋಗಲು ಯತ್ನಿಸಿದ್ದಳು. ಆದರೆ, ಮನೆಯಲ್ಲಿ ತನ್ನ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಓಡಿಹೋಗಲು ನಿರ್ಧರಿಸಿದ್ದ ಆಕೆ ಅದಕ್ಕಾಗಿಯೇ ಮದುವೆಯಾಗಿದ್ದಳು ಎನ್ನಲಾಗಿದೆ.

ಮದುವೆಯಾದ ಮರುದಿನವೇ ವಧು ನಾಪತ್ತೆಯಾಗಿದ್ದರಿಂದ ತೀವ್ರವಾಗಿ ಆಘಾತಗೊಂಡಿದ್ದ ವರನಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ಆದರೆ ಅವರ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ತ್ರಿಶೂರ್ ನಿಂದ ಪರಾರಿಯಾಗಿದ್ದ ಈ ಯುವತಿಯರು ಬಸ್ ಮೂಲಕ ಕೊಟ್ಟಾಯಂಗೆ ಹೋಗಿ ಅಲ್ಲಿಂದ ಚೆನ್ನೈಗೆ ರೈಲಿನಲ್ಲಿ ಹೋಗಿದ್ದರು. ಅಲ್ಲಿಂದ ಹೋಟೆಲ್​ನಲ್ಲಿ ರೂಮ್​ ಬುಕ್ ಮಾಡಿಕೊಂಡು ಇದ್ದರು. ಅಂದ ಹಾಗೆ ಈಕೆಯ  ಜೊತೆಗಿದ್ದ ಇನ್ನೋರ್ವಳು ಯುವತಿಗೆ ಕೂಡ ಕೆಲವು ದಿನಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನೂ ಮಧುರೈನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ