ಮದುವೆಯಾದ ಮೂರೇ ದಿನದಲ್ಲಿ ಮದುಮಗಳು ಸಾವು: ಸಂಭ್ರಮದ ಮನೆಯಲ್ಲಿ ಮಡುಗಟ್ಟಿದ ಶೋಕ - Mahanayaka
8:13 PM Wednesday 11 - December 2024

ಮದುವೆಯಾದ ಮೂರೇ ದಿನದಲ್ಲಿ ಮದುಮಗಳು ಸಾವು: ಸಂಭ್ರಮದ ಮನೆಯಲ್ಲಿ ಮಡುಗಟ್ಟಿದ ಶೋಕ

mounika
28/08/2021

ಹೈದರಾಬಾದ್: ಮದುವೆಯಾದ ಮೂರೇ ದಿನದಲ್ಲಿ ಮದುಮಗಳು ಸಾವನ್ನಪ್ಪಿದ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯಲ್ಲಿ ನಡೆದಿದ್ದು, ಈ ಅಪಘಾತದಲ್ಲಿ ಮದುಮಗಳ ತಂದೆ ಕೂಡ ಸಾವನ್ನಪ್ಪಿದ್ದಾರೆ.

25 ವರ್ಷ ವಯಸ್ಸಿನ ಮೌನಿಕಾ ಮೃತಪಟ್ಟಿರುವ ನವವಿವಾಹಿತೆಯಾಗಿದ್ದು, ಆಕೆಯ ತಂದೆ 50 ವರ್ಷ ವಯಸ್ಸಿನ ರಾಜಯ್ಯ ಕೂಡ ಸಾವನ್ನಪ್ಪಿದ್ದಾರೆ.  ನಿರ್ಮಲ ಜಿಲ್ಲೆಯ ಕೊಡೆಮ್ ವಲಯದ ಪಾಂಡವಪುರ್ ಬಳಿಯ ಕಣಿವೆಯೊಂದಕ್ಕೆ ಇವರು ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದ್ದು, ಪರಿಣಾಮವಾಗಿ ಈ ದುರಂತ ಸಂಭವಿಸಿದೆ.

ಮಹಾರಾಷ್ಟ್ರದ ಬಲಹರ್ಷಾದಲ್ಲಿರುವ ವರನ ಮನೆಯಲ್ಲಿ ರಿಸೆಪ್ಷನ್ ಮುಗಿಸಿಕೊಂಡು ತವರಿಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದ ತಿಳಿದು ನಂದಿದೆ. ಆಗಸ್ಟ್ 25ರಂದು ಮೌನಿಕಾಳ ಮದುವೆ ನಡೆದಿತ್ತು. ಇದಾದ ಮೂರೇ ದಿನದಲ್ಲಿ ಮೌನಿಕ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ಮದುವೆ ಸಂಭ್ರಮದಲ್ಲಿದ್ದ ಇಡೀ ಕುಟುಂಬದಲ್ಲೀಗ ದುಃಖ ಮುಡುಗಟ್ಟಿದೆ. ಇನ್ನೊಂದೆಡೆ ಕಾರಿನಲ್ಲಿದ್ದ ವರ ಜನಾರ್ದನ್ ಗೂ ಗಂಭಿರವಾದ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಯೋಗಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದಿದ್ದ ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್!

ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಗಳು ಇನ್ನಷ್ಟು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ!

ಹಾಡಹಗಲೇ ಗನ್  ತೋರಿಸಿ ಮಹಿಳೆಯ ಸರ ಎಳೆದ ಸರಗಳ್ಳರು!

ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!

126 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ವಿಮಾನದ ಪೈಲಟ್ ಗೆ ಹೃದಯಾಘಾತ: ಮುಂದೆ ನಡೆದದ್ದೇನು?

ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಸವರ್ಣಿಯರಿಂದ ಸಾಮಾಜಿಕ ಬಹಿಷ್ಕಾರ

ಕಾಬುಲ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟ | ಸಾಕಷ್ಟು ಜನರು ಅಪಾಯಕ್ಕೆ ಸಿಲುಕಿರುವ ಶಂಕೆ

ಇತ್ತೀಚಿನ ಸುದ್ದಿ