ಮದುವೆಯಾದ ಬಳಿಕ ನರಕ ತೋರಿಸಿದ ಪತಿ | ಹಿಂಸೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಮಹಿಳೆ
ಪುಣೆ: ಮಗಳಿಗೋ ಮಗನಿಗೋ ಮದುವೆ ಮಾಡುವಾಗ ಪೋಷಕರು, ಹುಡುಗ/ಹುಡುಗಿಯ ಜಾತಿ ಯಾವುದು? ಧರ್ಮ ಯಾವುದು? ಅವನಿಗೆ ಏನು ಕೆಲಸ? ಅಂತ ಮಾತ್ರವೇ ನೋಡುತ್ತಾರೆ. ಆದರೆ ಹುಡುಗನ ಹಿನ್ನೆಲೆ ಏನು? ಹುಡುಗನ ವ್ಯಕ್ತಿತ್ವ ಎಂತಹದ್ದು, ಮದುವೆಯಾದ ಬಳಿಕ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಎಂದು ಯೋಚಿಸದೇ ಕೇಳಿದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿಸುತ್ತಾರೆ. ಮದುವೆಯ ಬಳಿಕ ವರನ ಅಸಲಿ ಮುಖ ಬಯಲಾಗುತ್ತದೆ. ಮಗಳ/ಮಗನ ಬದುಕು ನರಕವಾಗುತ್ತದೆ.
ಇಷ್ಟೆಲ್ಲ ಪೀಠಿಕೆ ಯಾಕೆ ಹಾಕಬೇಕಾಯಿತು ಅಂದರೆ, ಸಾಕಷ್ಟು ಚಿನ್ನ, ವರದಕ್ಷಿಣೆ ನೀಡಿದರೂ, ಮದುವೆಯ ಬಳಿಕವೂ ಪತಿ ಹಣಕ್ಕಾಗಿ ನಿರಂತರವಾಗಿ ಪೀಡಿಸಿದ್ದು, ಇದೀಗ ಈ ಹಿಂಸೆ ತಾಳಲಾರೆ ಕೇರಳದ ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
29 ವರ್ಷ ವಯಸ್ಸಿನ ಪ್ರೀತಿ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇವರ ಪತಿಯ ಪುಣೆಯಲ್ಲಿರುವ ಮನೆಯಲ್ಲಿ ಇವರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಪ್ರೀತಿ ಅವರು 5 ವರ್ಷಗಳ ಹಿಂದೆ ಅಖಿಲ್ ಎಂಬಾತನನ್ನು ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಪ್ರೀತಿಯ ಕುಟುಂಬಸ್ಥರು 85 ಲಕ್ಷ ರೂಪಾಯಿ ಹಾಗೂ ದುಬಾರಿ ಬೆಲೆಯ ಚಿನ್ನಾಭರಣಗಳನ್ನು ನೀಡಿದ್ದರು. ಇಷ್ಟೊಂದು ಹಣವನ್ನು ನೀಡಿದ್ದರೂ, ಪತಿ ಅಖಿಲ್ ಗೆ ಸಂಸಾರಕ್ಕಿಂತಲೂ ದುಡ್ಡೆ ಮುಖ್ಯವಾಗಿತ್ತು. ಹೀಗಾಗಿ ಹಣಕ್ಕಾಗಿ ಪತ್ನಿಗೆ ನಿತ್ಯ ನರಕ ತೋರಿಸುತ್ತಿದ್ದ ಎನ್ನಲಾಗಿದೆ.
ಇನ್ನೂ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೀತಿಯ ತಂದೆ, ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅವಳನ್ನು ಕೊಲೆ ಮಾಡಲಾಗಿದೆ. ಆಕೆ ಮೃತಪಟ್ಟಿರುವ ವಿಚಾರವನ್ನು ಕೂಡ ನಮಗೆ ಆತ ತಿಳಿಸಿಲ್ಲ. ಬೇರೆಯವರು ನೀಡಿದ ಮಾಹಿತಿಯಿಂದ ನಮಗೆ ತಿಳಿಯಿತು. ಮಗಳ ಮೃತದೇಹದ ಮೇಲೆ ಬಹಳಷ್ಟು ಗಾಯಗಳಿವೆ ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಆತ್ಮಹತ್ಯೆ ಮಾಡುವುದಾಗಿ ಶಿವಮೊಗ್ಗದಿಂದ ನಾಪತ್ತೆಯಾಗಿದ್ದ ನೌಕರ ಧರ್ಮಸ್ಥಳದಲ್ಲಿ ಪತ್ತೆ!
ಸುಬ್ರಮಣಿಯನ್ ಸ್ವಾಮಿ, ವರುಣ್ ಗಾಂಧಿಗೆ ಕಾರ್ಯಕಾರಿಣಿಯಿಂದ ಗೇಟ್ ಪಾಸ್ ನೀಡಿದ ಬಿಜೆಪಿ!
ಬಿಜೆಪಿ ನಾಯಕರು ಕಾರಿನಲ್ಲಿ ಬರುವ ವೇಳೆ ಎಚ್ಚರವಾಗಿರಿ | ಸಾರ್ವಜನಿಕರಿಗೆ ಡಿ.ಕೆ.ಶಿವಕುಮಾರ್ ಸಲಹೆ
ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟ ಕಿಡಿಗೇಡಿ
ದೇವಿ ವೇಷ ಧರಿಸಿ ತ್ರಿಶೂಲ ಹಿಡಿದು ನಿಂತ ಸಂಜನಾ ಗಲ್ರಾನಿ: ಏನ್ ವಿಶೇಷ?
ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು
ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ: ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು
ದೂರವಾಗಿದ್ದ ಪತ್ನಿಯ ಬಳಿಗೆ ಬಂದು ಅಪ್ಪಿಕೊಂಡ ಪತಿ | ಕ್ಷಣ ಮಾತ್ರದಲ್ಲಿ ಇಬ್ಬರ ದೇಹವೂ ಛಿದ್ರಛಿದ್ರ!