ಮದುವೆಯಾಗುವುದಿಲ್ಲ ಎಂದ ಯುವತಿ! | ಗ್ರಾಮಕ್ಕೆ ಓಡಿ ಬಂದ ಅಧಿಕಾರಿಗಳ ದಂಡು - Mahanayaka
3:05 AM Wednesday 11 - December 2024

ಮದುವೆಯಾಗುವುದಿಲ್ಲ ಎಂದ ಯುವತಿ! | ಗ್ರಾಮಕ್ಕೆ ಓಡಿ ಬಂದ ಅಧಿಕಾರಿಗಳ ದಂಡು

bindu
16/09/2021

ದಾವಣಗೆರೆ:  ತನ್ನ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡದೇ ನಾನು ಮದುವೆಯಾಗುವುದಿಲ್ಲ ಎಂದು ಯುವತಿಯೊಬ್ಬಳು ಶಪಥ ಮಾಡಿದ್ದು, ಈ ಸುದ್ದಿ ರಾಜ್ಯ ಮಾತ್ರವಲ್ಲದೇ ರಾಷ್ಟ್ರದಾದ್ಯಂತ ವ್ಯಾಪಿಸಿದ್ದು, ಇದೀಗ ಯುವತಿಯ ಹೇಳಿಕೆಯಿಂದಾಗಿ ದಾವಣಗೆರೆ ಜಿಲ್ಲಾಡಳಿತಕ್ಕೆ ಬಿಸಿಮುಟ್ಟಿದ್ದು, ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ್ದಾರೆ.

ದಾವಣಗೆರೆ ತಾಲೂಕಿನ ಮಾಯಕೊಂಡದ ಎಚ್.ರಾಂಪುರದ ಯುವತಿ ಬಿಂದು ತನ್ನ ಗ್ರಾಮದಲ್ಲಿ ರಸ್ತೆ ಅವ್ಯವಸ್ಥೆಯ ಬಗ್ಗೆ ಸಿಡಿದೆದ್ದಿದ್ದು, ಇದೀಗ ಅವರ ಹೋರಾಟಕ್ಕೆ  ಅಲ್ಪಮಟ್ಟಿನ ಜಯ ದೊರಕಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ಎಚ್. ರಾಂಪುರ ಗ್ರಾಮಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ರಸ್ತೆ ಅವ್ಯವಸ್ಥೆ ಹಾಗೂ ಗ್ರಾಮಗಳ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಭೇಟಿಯ ವೇಳೆ ಗ್ರಾಮಸ್ಥರು,  ಕಾಡು ಪ್ರಾಣಿಗಳ ಕಾಟ, ನೆಟ್ ವರ್ಕ್ ತೊಂದರೆಗಳು, ಗುಡ್ಡಗಾಡು ಪ್ರದೇಶಗಳ ಸಂಕಷ್ಟಗಳು, ರಸ್ತೆ ಹಾಳಾಗಿ ಬಸ್ ಕೂಡ ಬಾರದೇ ಇರುವುದು ಇವೇ ಮೊದಲಾದ ಸಂಕಷ್ಟಗಳನ್ನು ಅಧಿಕಾರಿಗಳ ಬಳಿಯಲ್ಲಿ ತೋಡಿಕೊಂಡರು.

ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಬಿಂದು ಅವರು ಪ್ರಧಾನಿಗೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿರಲಿಲ್ಲ. ಹಾಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರಬರೆದು ಮನವಿ ಮಾಡಿಕೊಂಡಿದ್ದರು.  ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ರಾತ್ರೋ ರಾತ್ರಿ ಇಬ್ಬರು ಹುಡುಗರ ಖಾತೆಗೆ ಜಮಾ ಆಯಿತು 900 ಕೋಟಿಗೂ ಅಧಿಕ ಹಣ!

ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರಿಗೆ ‘ಶಿಕ್ಷಕ ರತ್ನ ಪ್ರಶಸ್ತಿ’

ಟ್ರಾಫಿಕ್ ಸಿಗ್ನಲ್ ನಲ್ಲಿ ಡಾನ್ಸ್ ಮಾಡಿ ಸಂಕಷ್ಟಕ್ಕೀಡಾದ ಯುವತಿ!

ಮಕ್ಕಳಿಗೆ ಎರಡು ದಿನಗಳಿಗಿಂತ ಹೆಚ್ಚುಕಾಲ ಕೊವಿಡ್ ಲಕ್ಷಣಗಳಿದ್ದರೆ ತಪ್ಪದೇ ಪರೀಕ್ಷೆ ನಡೆಸಿ

ಹೃದಯ ವಿದ್ರಾವಕ ಘಟನೆ: ಹುಟ್ಟುಹಬ್ಬದಂದೇ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಮಗು

ಶಾಕಿಂಗ್ ನ್ಯೂಸ್: ಭಾರತದಲ್ಲಿ ಪ್ರತಿದಿನ 80 ಕೊಲೆ, 77 ಅತ್ಯಾಚಾರ ಪ್ರಕರಣಗಳು ದಾಖಲಾಗ್ತಿವೆ!

ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು!

ಇತ್ತೀಚಿನ ಸುದ್ದಿ