ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಪರಾರಿ
ಮಲಪ್ಪುರಂ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ನಿರಂತವಾಗಿ ಅತ್ಯಾಚಾರವೆಸೆಗಿದ ಯುವಕನ ಮನೆಯ ಮುಂದೆ ಸಂತ್ರಸ್ತ ಯುವತಿಯ ಧರಣಿ ಕುಳಿತಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತೃಕ್ಕಲಂಗೋಡ್ ಎಂಬಲ್ಲಿ ನಡೆದಿದೆ.
ಕೇರಳದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಚೆನ್ನೈ ಯಲ್ಲಿ ನೆಲೆಸಿದ್ದ 22 ವರ್ಷದ ಯುವಕ ಪಳನಿಯ ಯುವತಿಯ ಜೊತೆ ಸಲುಗೆಯಿಂದ ವರ್ತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸೆಗಿದ್ದಾನೆ. ಸಂತ್ರಸ್ತ ಯುವತಿಯು ಚೆನ್ನೈಯ ಖಾಸಗಿ ಬ್ಯಾಂಕ್ ನ 24 ವರ್ಷದ ಉದ್ಯೋಗಿದ್ದಾರೆ.
ಆರೋಪಿ ಯುವಕ ತನ್ನ ಮನೆಯವರನ್ನು ಮದುವೆಗೆ ಒಪ್ಪಿಸುವುದಾಗಿ ಯುವತಿಯನ್ನು ನಂಬಿಸಿ ಚೆನ್ನೈಯಿಂದ ಕೇರಳಕ್ಕೆ ತೆರಳಿ ಬಳಿಕ ಕುಟುಂಬ ಸಮೇತ ನಾಪತ್ತೆಯಾಗಿದ್ದಾನೆ.
ಆದರೆ ಕೇರಳಕ್ಕೆ ಆಗಮಿಸಿದ ಯುವತಿ ಮದುವೆಯಾಗದೆ ತಾನು ಊರಿಗೆ ವಾಪಸ್ ಹೊಗುವುದಿಲ್ಲ ಎಂದು ಹಠಹಿಡಿದಿದ್ದು,ಮಂಜೇರಿ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿ ಯನ್ನು ಬುಧವಾರ ಮಧ್ಯಾಹ್ನ ಠಾಣೆಗೆ ಕರೆತಂದಿದ್ದಾರೆ.
ಈ ನಡುವೆ ಚೆನ್ನೈನಲ್ಲಿ ಘಟನೆ ನಡೆದಿರುವುದರಿಂದ ತಮಿಳುನಾಡು ಪೊಲೀಸರಿಗೆ ದೂರು ನೀಡುವಂತೆ ಕೇರಳ ಪೊಲೀಸರು ಸಂತ್ರಸ್ತೆಗೆ ಸೂಚಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮರಕ್ಕೆ ಡಿಕ್ಕಿ ಹೊಡೆದ ಬೊಲೆರೋ: ಮದುವೆ ಮುಗಿಸಿ ಬರುತ್ತಿದ್ದ 6 ಮಂದಿ ಸಾವು
ಶಿವಮೊಗ್ಗ ಏರ್ ಪೋರ್ಟ್ ಗೆ ಯಡಿಯೂರಪ್ಪ ಹೆಸರು ಇಡಲು ನಿರ್ಧಾರ: ಸಿಎಂ ಬೊಮ್ಮಾಯಿ
ರಾತ್ರೋ ರಾತ್ರಿ ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾನಿ ಅರೆಸ್ಟ್!
ಆಟವಾಡುತ್ತಿದ್ದ ಬಾಲಕನಿಗೆ ಟಿಪ್ಪರ್ ಡಿಕ್ಕಿ: ಬಾಲಕನ ದಾರುಣ ಸಾವು