ಮದ್ಯ ಕುಡಿಯುವ ಸ್ಪರ್ಧೆ: ಗೆದ್ದವ ಕೆಲವೇ ಕ್ಷಣಗಳಲ್ಲಿ ಸತ್ತ!

ಜೋಹಾನ್ಸ್‌ಬರ್ಗ್: ಮದ್ಯ ಕುಡಿಯುವ ಸ್ಪರ್ಧೆಯಲ್ಲಿ ಗೆದ್ದ ಯುವಕನೋರ್ವ ಕೆಲವೇ ನಿಮಿಷಗಳಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ ಲಿಂಪೊಪೊದಲ್ಲಿ ನಡೆದಿದೆ.
ಮದ್ಯ ಕುಡಿಯುವ ಸ್ಪರ್ಧೆ ಆಯೋಜಿಸಿದ್ದ ಆಯೋಜಕರು, ಗೆದ್ದವರಿಗೆ 10 ಯುರೋ ಬಹುಮಾನ ಘೋಷಿಸಿದ್ದರು. ಈ ಸ್ಪರ್ಧೆಯಲ್ಲಿ 25ರಿಂದ 30 ವರ್ಷದೊಳಗಿನ ಯುವಕ ಕೂಡ ಭಾಗಿಯಾಗಿದ್ದ.
ಸ್ಪರ್ಧೆ ಗೆಲ್ಲಲು ವಿಪರೀತವಾಗಿ ಯಾಗರ್ ಮೈಸ್ಟರ್ ಮದ್ಯ ಸೇವಿಸಿದ್ದ ಯುವಕ ಗೆಲುವು ಸಾಧಿಸಿದ್ದ. ಆದರೆ, ಗೆಲುವು ಸಾಧಿಸಿದ ಕೆಲವೇ ನಿಮಿಷಗಳಲ್ಲಿ ಯುವಕ ಕುಸಿದು ಬಿದ್ದಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka