ಮಗ ಗಲಾಟೆ ಮಾಡಿದ ಎಂದು ಬೆಲ್ಟ್ ನಿಂದ ಥಳಿಸಿ ಕೊಂದ ತಂದೆ

nelamangala
15/05/2021

ನೆಲಮಂಗಲ: ಮಲತಂದೆಯೋರ್ವ  6 ವರ್ಷದ ಮಗುವನ್ನು ಬೆಲ್ಟ್ ನಿಂದ ಥಳಿಸಿ ಹತ್ಯೆ ಮಾಡಿರುವ ಘಟನೆ  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದ್ದು, ಮಗ ಗಲಾಟೆ ಮಾಡುತ್ತಾನೆ ಎನ್ನುವ ಕಾರಣಕ್ಕೆ ಥಳಿಸಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

ನೆಲಮಂಗಲದ ಬಿನ್ನಮಂಗಲದಲ್ಲಿ ಈ ಘಟನೆ ನಡೆದಿದ್ದು,. 6 ವರ್ಷ ವಯಸ್ಸಿನ ಹರ್ಷವರ್ದನ್ ಮೃತಪಟ್ಟ ಬಾಲಕನಾಗಿದ್ದಾನೆ. ಬಾಲಕನ ತಾಯಿ ನೇತ್ರಾ ಎಂಬವರು ತಮ್ಮ ಮೊದಲ ಪತಿಯನ್ನು ತೊರೆದು 23 ವರ್ಷ ವಯಸ್ಸಿನ ಕಾರ್ತಿಕ್ ಎಂಬಾತನನ್ನು ವಿವಾಹವಾಗಿದ್ದರು.

ಮಗು ವಿಪರೀತವಾಗಿ ಗಲಾಟೆ ಮಾಡುತ್ತದೆ ಎಂದು ಕೋಪಗೊಂಡ ಮಲತಂದೆ ಕಾರ್ತಿಕ್  ಬೆಲ್ಟ್ ನಿಂದ ಮನಸೋ ಇಚ್ಛೆ ಥಳಿಸಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಕಾರ್ತಿಕ್ ನನ್ನು ನೆಲಮಂಗಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version