ಮಗ ಹಾಗೂ ಮಗನ ಇಡೀ ಕುಟುಂಬವನ್ನೇ ಸುಟ್ಟು ಹಾಕಿದ ಪಾಪಿ ತಂದೆ!

edukki
19/03/2022

ಇಡುಕ್ಕಿ: ಆಸ್ತಿ ಕೊಟ್ಟರೂ ಮಗ ತನ್ನನ್ನು ನೋಡಿಕೊಂಡಿಲ್ಲ ಎಂದು ಕೇರಳದ ಚೀನಿಕುಝಿಯಲ್ಲಿಮಗ ಹಾಗೂ ಕುಟುಂಬದವರಿಗೆ ತಂದೆ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಪುತ್ರ ಮೊಹಮ್ಮದ್ ಪೈಸಲ್ ಹಾಗೂ ಆತನ ಪತ್ನಿ ಹಾಗೂ ಆತನ ಇಬ್ಬರು ಮಕ್ಕಳನ್ನು ತಂದೆ ಹಮೀದ್ ಸ್ವಲ್ಪವೂ ಕರುಣೆ ತೋರದೇ ಮನೆಯೊಳಗೆಯೇ ಸುಟ್ಟು ಹಾಕಿದ್ದಾನೆ. ಹಮೀದ್ ತನ್ನ ಆಸ್ತಿಯನ್ನೆಲ್ಲ ತನ್ನ ಇಬ್ಬರು ಗಂಡುಮಕ್ಕಳಿಗೆ ಹಂಚಿದ್ದು, ಆಸ್ತಿ ಪಡೆದ ನಂತರ ಮಕ್ಕಳು ತನ್ನನ್ನು ನೋಡಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾನೆ.

ಪುತ್ರ ಮೊಹಮ್ಮದ್ ಫೈಸಲ್ ಗೆ ಪೂರ್ವಿಕರ ಮನೆ ಹಾಗೂ ಪಕ್ಕದ ಜಮೀನು ನೀಡಲಾಗಿತ್ತು. ತಂದೆಯ ಆರೈಕೆ  ಮತ್ತು ಜಮೀನಿನ ಆದಾಯವನ್ನು ತೆಗೆದುಕೊಳ್ಳಬಹುದೆಂಬ ಷರತ್ತಿನ ಮೇಲೆ ಫೈಸಲ್‌ ಗೆ ಮನೆ ಮತ್ತು ಜಮೀನು ನೀಡಲಾಯಿತು.  ಆದರೆ, ಫೈಸಲ್  ಇತ್ತೀಚಿನ ದಿನಗಳಲ್ಲಿ ತಂದೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಲ್ಲ ಎಂದು ಹಮೀದ್ ಆಕ್ರೋಶಕ್ಕೀಡಾಗಿದ್ದಎನ್ನಲಾಗಿದೆ.  ಇದರಿಂದ ಬೇಸತ್ತು  ಹಮೀದ್ ಬೆಳಗಿನ ಜಾವ ಈ ಕೃತ್ಯ ಎಸಗಿದ್ದಾನೆ.

ಹಮೀದ್ ತನ್ನ ಮಗ ಮತ್ತು ಅವನ ಕುಟುಂಬಕ್ಕೆ ಬೆಂಕಿ ಹಚ್ಚಲು ಐದು ಬಾಟಲಿ ಪೆಟ್ರೋಲ್‌ನೊಂದಿಗೆ ಮನೆ ಕಡೆ ಬಂದಿದ್ದ ಅದರಲ್ಲಿ  ಎರಡು ಬಾಟಲಿ ಪೆಟ್ರೋಲ್ ಮನೆಯೊಳಗೆ ಸುರಿದು ಬೆಂಕಿ ಹಚ್ಚಿದ್ದಾನೆ.  ಆರೋಪಿಯು  ಮನೆಯ ನೀರಿನ ಟ್ಯಾಂಕ್ ನಲ್ಲಿದ್ದ ನೀರು ಸಂಪೂರ್ಣ ಚೆಲ್ಲಿದ ನಂತರ  ಬಾಗಿಲು ಹೊರಗಿನಿಂದ ಲಾಕ್ ಮಾಡಲಾಗಿತ್ತು  ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚೀನಿಕುಝಿಯಲ್ಲಿ ಮೂಲದ ಮೊಹಮ್ಮದ್ ಫೈಸಲ್ ಅವರ ಪತ್ನಿ ಶೀಬಾ, ಮಕ್ಕಳಾದ ಮೆಹ್ರಾ ಮತ್ತು ಆಸ್ನಾ ಮತ್ತು ಫೈಸಲ್ ಮೃತರಾದ ನಾಲ್ವರು.ಮೊಹಮ್ಮದ್ ಫೈಸಲ್                ತರಕಾರಿ ಅಂಗಡಿ ನಡೆಸುತ್ತಿದ್ದ   ಮತ್ತು ಹಿರಿಯ ಮಗಳು ಮೆಹ್ರಾ ತೊಡುಪುಳದ ಎಪಿಜೆ ಅಬ್ದುಲ್ ಕಲಾಂ ಶಾಲೆಯ ದ್ವಿತೀಯ ಪಿಯುಸಿ  ವಿದ್ಯಾರ್ಥಿನಿ ಕಿರಿಯ ಮಗಳು ಅಸ್ನಾ ಕೊಡುವೆಲಿ ಸಂಜೋ ಸಿಎಂಐ ಶಾಲೆಯ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಂದು ಬಿ.ಸಿ.ರೋಡ್‌ನಲ್ಲಿ ಯುವಕರ ನಡೆ ಸಾಮರಸ್ಯದ ಕಡೆ ಕಾರ್ಯಕ್ರಮ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ: ಮಾಜಿ ಶಾಸಕ ರಮಾನಾಥ ರೈ ಮಾಹಿತಿ

ಟಿಬೆಟಿಯನ್ ಬೋಧಿಸತ್ವ ಪ್ರತಿಜ್ಞೆ ಸಮಾರಂಭ ನೆರವೇರಿಸಿದ ಬೌದ್ಧ ಧರ್ಮ ಗುರು 14ನೇ ದಲೈ ಲಾಮಾ

ಬೈಕ್‌ ಗೆ KSRTC ಬಸ್​ ಡಿಕ್ಕಿ: ಸಹೋದರರಿಬ್ಬರು ಸ್ಥಳದಲ್ಲೇ ಸಾವು

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬಸ್ ಮಗುಚಿ ಬಿದ್ದು 6 ಮಂದಿಯ ದಾರುಣ ಸಾವು

ಇತ್ತೀಚಿನ ಸುದ್ದಿ

Exit mobile version