ಮಗಳ ಮೇಲೆಯೇ ಅತ್ಯಾಚಾರ ನಡೆಸುತ್ತಿದ್ದ ತಂದೆಯನ್ನು ಕೊಚ್ಚಿ ಕೊಂದ ಮಗಳ ಸ್ನೇಹಿತರು! - Mahanayaka
1:13 AM Wednesday 11 - December 2024

ಮಗಳ ಮೇಲೆಯೇ ಅತ್ಯಾಚಾರ ನಡೆಸುತ್ತಿದ್ದ ತಂದೆಯನ್ನು ಕೊಚ್ಚಿ ಕೊಂದ ಮಗಳ ಸ್ನೇಹಿತರು!

deepak kumar
23/11/2021

ಬೆಂಗಳೂರು: ಮಗಳ ಸ್ನೇಹಿತರೇ ಆಕೆಯ ತಂದೆಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮೀರ್ ಸಾಗರ್ ರಸ್ತೆಯಲ್ಲಿ ನಡೆದಿದ್ದು, ಇಬ್ಬರು ಹೆಣ್ಣು ಮಕ್ಕಳ ಕಣ್ಣ ಮುಂದೆಯೇ ಈ ಘಟನೆ ನಡೆದಿದೆ.

46 ವರ್ಷ ವಯಸ್ಸಿನ ದೀಪಕ್ ಕುಮಾರ್ ಸಿಂಗ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ತಡರಾತ್ರಿ 1:30ರ ವೇಳೆಗೆ ದೀಪಕ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಲಾಗಿದೆ.

ಬಿಹಾರ ಮೂಲದವನಾಗಿದ್ದ ದೀಪಕ್ ಕುಮಾರ್ ಜಿಕೆವಿಕೆನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ವಾಸವಿದ್ದ ಈತ, ತನ್ನ ಮಗಳಿಗೆ ಕಳೆದ 1 ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.

ತಂದೆ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮಗಳು ಸಾಕಷ್ಟು ಬಾರಿ ತನ್ನ ತಾಯಿಯ ಬಳಿಯಲ್ಲಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ನೊಂದ ಆಕೆ, ತನ್ನ ಸ್ನೇಹಿತರ ಬಳಿಯಲ್ಲಿ ಈ ವಿಚಾರ ಹೇಳಿಕೊಂಡಿದ್ದಳು.

ಈ ವಿಚಾರ ತಿಳಿದ ಸ್ನೇಹಿತರು ಆಕ್ರೋಶಗೊಂಡಿದ್ದು, ತಡರಾತ್ರಿ ಮನೆಗೆ ನುಗ್ಗಿ ದೀಪಕ್ ಕುಮಾರ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆನ್ನಲಾಗಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗಾಗಿ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜ್ಯ ಪ್ರವಾಹ ಸಂಕಷ್ಟದಲ್ಲಿರುವಾಗ ಬಿಜೆಪಿ—ಕಾಂಗ್ರೆಸ್ ನ ಬೇಜವಾಬ್ದಾರಿಯ ಜನ‘ಜಾತ್ರೆ’

ಮಾಂಸಾಹಾರದ ಬಗ್ಗೆ ಹಿರಿಯ ಪೇಜಾವರ ಶ್ರೀಗಳು ಏನು ಹೇಳಿದ್ದರು? | ವಿಡಿಯೋ ವೈರಲ್

ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07

ನನ್ನ ಕಾರು ಅಪಘಾತವಾಗಿಲ್ಲ, ನಾನು ಸುರಕ್ಷಿತವಾಗಿದ್ದೇನೆ | ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ

ಬಿಜೆಪಿಗೆ ಮಳೆ ನಿಲ್ಲಿಸೋಕೆ ಬರುತ್ತಾ? | ಸಚಿವ ಈಶ್ವರಪ್ಪ ಬೇಜವಾಬ್ದಾರಿಯ ಹೇಳಿಕೆ!

ಕ್ಷಮೆ ಕೇಳದಿದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿ ಚಪ್ಪಲಿಯಲ್ಲಿ ಹೊಡೆಯುತ್ತೇವೆ | ಸ್ವಾಮೀಜಿ ಎಚ್ಚರಿಕೆ

 

ಇತ್ತೀಚಿನ ಸುದ್ದಿ