ಆತ್ಮಹತ್ಯೆ ಮಾಡಿಕೊಂಡ ಮಗಳ ಮೃತದೇಹವನ್ನು ಉಪ್ಪಿನ ಹೊಂಡದಲ್ಲಿ ಮುಚ್ಚಿದ ತಂದೆ!
ಮಹಾರಾಷ್ಟ್ರ: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಗಳ ಮೃತದೇಹವನ್ನು ವ್ಯಕ್ತಿಯೋರ್ವ ಉಪ್ಪಿನ ಹೊಂಡದಲ್ಲಿ 44 ದಿನಗಳ ಕಾಲ ಹೂತಿಟ್ಟ ಘಟನೆ ಮಹಾರಾಷ್ಟ್ರದ ನಂದೂರುಬಾರ್ ನಲ್ಲಿ ನಡೆದಿದೆ.
ನಂದೂರುಬಾರ್’ನಲ್ಲಿ ಆಗಸ್ಟ್ 1ರಂದು 21 ವರ್ಷದ ಯುವತಿಯ ಮೃತದೇಹ ಆಕೆಯ ಮನೆಯಿಂದ 20 ಕಿ.ಮೀ. ದೂರದಲ್ಲಿರುವ ಕುಗ್ರಾಮ ವಾವಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.
ಇದಾದ ಬಳಿಕ ಅಂತ್ಯಕ್ರಿಯೆ ವೇಳೆ ಯುವತಿಯ ತಂದೆ ಮಗಳ ಮೃತದೇಹವನ್ನು ಉಪ್ಪಿನ ಹೊಂಡದಲ್ಲಿ ಮುಚ್ಚಿಟ್ಟು ಮೃತದೇಹ ಕೊಳೆತು ಹೋಗದಂತೆ ಸಂರಕ್ಷಿಸಿದ್ದು, 44 ದಿನಗಳ ಬಳಿಕ ಮಗಳ ಸಾವಿನ ಬಗ್ಗೆ ಅನುಮಾನಗಳಿದ್ದು, ಆಕೆಯನ್ನು ನಾಲ್ವರು ಅತ್ಯಾಚಾರ ನಡೆಸಿದ್ದು, ಇದರಿಂದ ನೊಂದು ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಈ ದೂರಿನಂತೆಯೇ ಇದೀಗ ಮತ್ತೊಮ್ಮೆ ಯುವತಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಆರಂಭದಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಮಗಳ ಮೃತದೇಹವನ್ನು ಉಪ್ಪಿನಗುಂಡಿಯಲ್ಲಿ ಸಂರಕ್ಷಿಸಿಡಲು ಕುಟುಂಬಸ್ಥರು ನಿರ್ಧರಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka