ಮಗಳ ರುಂಡವನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಪಾಪಿ ತಂದೆ! - Mahanayaka
1:03 PM Thursday 12 - December 2024

ಮಗಳ ರುಂಡವನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಪಾಪಿ ತಂದೆ!

04/03/2021

ಲಕ್ನೋ:  ತನ್ನ 17 ವರ್ಷದ ಮಗಳು ಪ್ರೇಮಿಯ ಜೊತೆಗೆ ಇದ್ದಳು ಎಂಬ ಕಾರಣಕ್ಕೆ ತಂದೆ ಆಕೆಯ ರುಂಡವನ್ನೇ ಕತ್ತರಿಸಿದ ಘಟನೆ ಉತ್ತರಪ್ರದೇಶದ ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ನಡೆದಿದೆ.

ಮಗಳ ರುಂಡವನ್ನು ಕತ್ತರಿಸಿ, ರುಂಡ ಸಹಿತ ಪೊಲೀಸ್ ಠಾಣೆಗೆ ಹೋಗಿದ್ದಾನೆ. ನಿನ್ನೆ ಸುಮಾರು 3 ಗಂಟೆಯ ವೇಳೆಗೆ ಮಗಳು ಪ್ರಿಯತಮನ ಜೊತೆಗೆ ಇರುವುದನ್ನು ಕಂಡು, ಆಕ್ರೋಶದಲ್ಲಿ ತಂದೆ ಈ ಕೆಲಸ ಮಾಡಿದ್ದಾನೆ.

ಮಗಳ  ತಲೆ ಕತ್ತರಿಸಿ ಎರಡು ಕಿ.ಮೀ.ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಈತ ಕೈಯಲ್ಲಿ ಮಗಳ ರುಂಡ ಹಿಡಿದುಕೊಂಡು ಹೋಗುವುದನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.

ಮಗಳು ಪ್ರೀತಿದ್ದಕ್ಕೆ ತಾನು ಕೊಂದೆ ಎನ್ನುವ ದುರಾಂಹಾರಿ ತಂದೆ ಅದೊಂದು ದೊಡ್ಡ ಸಾಧನೆ ಎಂಬಂತೆ ತಲೆಯನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ತೆರಳಿದ್ದಾನೆ. ತನ್ನ ಮಗಳಿಗಿಂತಲೂ ತಂದೆಗೆ ಆತನ ಮರ್ಯಾದೆಯೇ ಪ್ರಶ್ನೆಯಾಗಿತ್ತು. ಹೀಗಾಗಿ ಸ್ವಾರ್ಥಿ ಪಾಪಿ ತಂದೆ ಇಂತಹದ್ದೊಂದು ಕೃತ್ಯವನ್ನು ಎಸಗಿದ್ದಾನೆ.

ಮಗಳು ಪ್ರೀತಿಸುತ್ತಿರುವ ವಿಚಾರಕ್ಕೆ ತಿಳಿದು ತಾನು ಆಕೆಯನ್ನು ಕೊಂದಿರುವುದಾಗಿ ಪಾಪಿ ತಂದೆ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ. ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳೆಲ್ಲ ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇದೆ.

whatsapp

ಇತ್ತೀಚಿನ ಸುದ್ದಿ