ತನ್ನ ಸ್ವಂತ ಮಗಳನ್ನು 30 ಜನರಿಂದ ರೇಪ್ ಮಾಡಿಸಿದ ತಾಯಿ! - Mahanayaka
3:10 AM Wednesday 11 - December 2024

ತನ್ನ ಸ್ವಂತ ಮಗಳನ್ನು 30 ಜನರಿಂದ ರೇಪ್ ಮಾಡಿಸಿದ ತಾಯಿ!

sringeri
24/03/2021

ಶೃಂಗೇರಿ: ಸ್ವಂತ ತಾಯಿಯೇ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ 30ಕ್ಕೂ ಅಧಿಕ ಪುರುಷರಿಂದ ಅತ್ಯಾಚಾರ ನಡೆಸಿದ ಘಟನೆ ಪ್ರಕರಣವೊಂದರ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ತಾಯಿ ತನ್ನನ್ನು ತಾನು ಈ ಬಾಲಕಿಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದಳು. ಆದರೆ ಆಕೆಯೇ ಈ ಬಾಲಕಿಯ ತಾಯಿ ಎನ್ನುವುದು ಪತ್ತೆಯಾಗಿದೆ.

2021ರ ಜನವರಿ 30ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸುಮಾರು 30ಕ್ಕೂ ಅಧಿಕ ಮಂದಿ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ವರದಿಯಾಗಿತ್ತು.  ಈ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

2020ರ ಸೆ.1ರಿಂದ 2021ರ ಜನವರಿ 27ರವರೆಗೆ 30ಕ್ಕೂ ಅಧಿಕ ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು 15 ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ 32 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣದ ತನಿಖೆಯ ವೇಳೆ ಸತ್ಯ ತಿಳಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬಾಲಕಿಯ ಸ್ವಂತ ತಾಯಿ, ತಾನು ಈಕೆಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. ಈ ಮಹಿಳೆಗೆ ಉತ್ತರ ಕರ್ನಾಟಕ ಜಿಲ್ಲೆಯೊಂದರಲ್ಲಿ ಮದುವೆ ಆಗಿದ್ದು ಮಗು ಜನಿಸಿದ್ದಳು. ಬಳಿಕ ಶೃಂಗೇರಿ ತಾಲೂಕಿನ ವ್ಯಕ್ತಿಯೊಬ್ಬರೊಂದಿಗೆ ವಿವಾಹವಾಗಿತ್ತು. ವಿವಾಹವಾದ ಕೆಲ ದಿನಗಳ ಬಳಿಕ ಆಕೆ ತನ್ನ ಮಗಳನ್ನು ಶೃಂಗೇರಿಗೆ ಕರೆಸಿಕೊಂಡು ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ.

ಎರಡು ಪತಿಯರಿಂದ ದೂರವಾಗಿದ್ದ ಪತ್ನಿ ತನ್ನ ಮಗಳನ್ನು ಅನೈತಿಕ ಚಟುವಟಿಕೆಗೆ ಎಳೆಯುವ ಉದ್ದೇಶದಿಂದ ಆಕೆಯ ಮೇಲೆ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾಳೆ ಎನ್ನುವುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎನ್ನುವುದು ತಿಳಿದು ಬಂದಿದೆ. ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ವಿಧಾನಸೌಧದಲ್ಲಿಯೂ ಈ ಬಗ್ಗೆ ವಿಪಕ್ಷಗಳು ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದರು. ಇದೀಗ ಈ ಪ್ರಕರಣದ ಸತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಇದನ್ನೂ ಓದಿ:

ಸಿಎಂ ಯಡಿಯೂರಪ್ಪ ಮಹಿಳೆಯ ಕೈ ಹಿಡಿದುಕೊಂಡಿರುವ ವಿಡಿಯೋ ವೈರಲ್!

ಇತ್ತೀಚಿನ ಸುದ್ದಿ