ಮಗಳನ್ನು ಚುಡಾಯಿಸಬೇಡ ಎಂದಿದ್ದಕ್ಕೆ ಬಾಲಕಿಯ ತಂದೆಗೆ ಮಾರಣಾಂತಿಕ ಹಲ್ಲೆ!
ಹಾಸನ: ಮಗಳನ್ನು ಚುಡಾಯಿಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಬಾಲಕಿಯೋರ್ವಳ ತಂದೆಯ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಜಯಂತಿನಗರದಲ್ಲಿ ನಡೆದಿದೆ.
ಆಲೂರು ತಾಲ್ಲೂಕಿನ ಹಲಸೂರು ಗ್ರಾಮದ ಪ್ರದೀಪ್ ಎಂಬವರ ಪುತ್ರಿಯನ್ನು ಯುವಕನೋರ್ವ ಒಂದು ತಿಂಗಳ ಹಿಂದೆ ರೇಗಿಸಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರದೀಪ್ ಅವರು ಆ ಯುವಕನಿಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೊಸಮಠ ಗ್ರಾಮದ ಕಾರ್ತಿಕ್ ಹಾಗೂ ಅರ್ಜುನ್ ಎಂಬುವವರು ಹಲ್ಲೆ ನಡೆಸಿದ್ದಾರೆ.
ಇನ್ನೂ ಮಗಳನ್ನು ರೇಗಿಸಲು ಬಂದಿದ್ದ ಆರೋಪಿಗಳನ್ನು ಪ್ರದೀಪ್ ಪ್ರಶ್ನಿಸಿ ಎಚ್ಚರಿಕೆ ನೀಡಿದ್ದರು. ಆಗ ಅವರು ಹಲ್ಲೆ ನಡೆಸಿದ್ದರು. ಅದೇ ವೇಳೆ ಪ್ರದೀಪ್ ಅವರು ಸಹ ತಿರುಗೇಟು ನೀಡಿದ್ದರು. ಈ ಬಗ್ಗೆ ಎರಡು ಕಡೆಯವರಿಂದ ಆಲೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪರಸ್ಪರ ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳಿಸಿದ್ದರು. ಆದರೆ ನಿನ್ನೆ ಪ್ರದೀಪ್ ಅವರು ಕಾರಿನಲ್ಲಿ ಹೋಗುತ್ತಿರುವಾಗ ಆರೋಪಿ ಗ್ರಾ.ಪಂ.ಸದಸ್ಯ ಕಾರ್ತಿಕ್ ಹಾಗು ಅರ್ಜುನ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರದೀಪ್ ಅವರ ತಲೆ, ಕುತ್ತಿಗೆ, ಕೈ, ಎದೆಗೆ ಮನಸೋ ಇಚ್ಚೆ ಹಲ್ಲೆ ನಡೆಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಪ್ರದೀಪ್, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ಬಿಗ್ ಬ್ರೇಕಿಂಗ್ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಬೋರ್ ವೇಲ್ ದುರಂತ
ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಈ ಕ್ರಮಗಳನ್ನು ಅನುಸರಿಸಿ!
12 ವರ್ಷಗಳ ಬಳಿಕ ಒಂದಾದ ತಾಯಿ ಮಗ | ವಿಶ್ವಾಸದ ಮನೆಯಲ್ಲೊಂದು ಭಾವನಾತ್ಮಕ ಸನ್ನಿವೇಶ
JCI: “ಕ್ಷಯ ಮುಕ್ತ ಭಾರತ” ಜಾಗೃತಿ ಮೂಡಿಸಲಿರುವ ‘ಹೆಜ್ಜೆ ಬದಲಾದಾಗ’ ಕಿರುಚಿತ್ರ
ದೇವಸ್ಥಾನದಲ್ಲಿ ಕೇಳಬಾರದ ಪ್ರಶ್ನೆ ಕೇಳಿದ ಪತ್ರಕರ್ತನ ವಿರುದ್ಧ ನಟಿ ಸಮಂತಾ ಆಕ್ರೋಶ!
ಪ್ರಧಾನಿ ಮೋದಿಗೆ ಪರ್ಯಾಯ ರಾಹುಲ್ ಅಲ್ಲ, ಮಮತಾ ಬ್ಯಾನರ್ಜಿ | ಜಾಗೋ ಬಾಂಗ್ಲಾ ವರದಿ