ಮಗಳನ್ನು ಕೊಂದು, ಬಾವಿಗೆ ಹಾರಿದ ತಾಯಿ, ಬದುಕುವ ಆಸೆಯಿಂದ ಬೊಬ್ಬಿಟ್ಟಳು | ಬಳಿಕ ನಡೆದದ್ದೇನು ಗೊತ್ತಾ?

well kerala
27/06/2021

ಕೊಟ್ಟಾಯಂ: ತನ್ನ 12 ವರ್ಷ ವಯಸ್ಸಿನ ಮಗಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ತಾಯಿ, ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆಸಿದ್ದು, ಮಹಿಳೆಯನ್ನು ರಕ್ಷಿಸಲಾಗಿದೆ.

ಕೊಟ್ಟಾಯಂ ಜಿಲ್ಲೆಯ ಮುಂಡಕ್ಕಾಯಂ ಬಳಿಯಲ್ಲಿ ಈ ಘಟನೆ ನಡೆದಿದ್ದು, ಲೈಜೀನಾ ಎಂಬ ಮಹಿಳೆ ಈ ಕೃತ್ಯ ನಡೆಸಿದ್ದಾಳೆ. ತನ್ನ 12 ವರ್ಷ ವಯಸ್ಸಿನ ಮಗಳು ಶಮ್ನಾಳನ್ನು ಕತ್ತು ಹಿಸುಕಿ ಕೊಂದ ಬಳಿಕ ಈಕೆ ಬಾವಿಗೆ ಹಾರಿದ್ದಳು. ಬಾವಿಗೆ ಹಾರಿದ ಬಳಿಕ ಬದುವ ಆಸೆಯಿಂದ ಬೊಬ್ಬೆ ಹಾಕಿದ್ದಾಳೆ. ಈಕೆಯ ಬೊಬ್ಬೆ ಕೇಳಿ ನೆರೆ ಹೊರೆಯವರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.

ಲೈಜೀನಾಳ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಇನ್ನೂ ಮಗಳನ್ನು ತಾನೇ ಕೊಂದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಸದ್ಯ ಘಟನೆಗೆ ಕಾರಣ ಏನು ಎಂಬ ಬಗ್ಗೆ  ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ನನ್ನ ಸಾವಿಗೆ ಬಿಜೆಪಿಯ ಮಾಜಿ ಶಾಸಕ ಕಾರಣ ಎಂದು ಡೆತ್ ನೋಟ್ ಬರೆದು ಶಿಕ್ಷಕ ಆತ್ಮಹತ್ಯೆ!

ಇತ್ತೀಚಿನ ಸುದ್ದಿ

Exit mobile version