ಮಗಳಿಗೆ ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಇರುವುದಿಲ್ಲ: ಸುಪ್ರೀಂಕೋರ್ಟ್ - Mahanayaka
8:06 AM Thursday 14 - November 2024

ಮಗಳಿಗೆ ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಇರುವುದಿಲ್ಲ: ಸುಪ್ರೀಂಕೋರ್ಟ್

father daughter
18/03/2022

ನವದೆಹಲಿ: ಮಗಳಿಗೆ ಅಪ್ಪ ಎನ್ನುವ ಸಂಬಂಧ ಬೇಡ ಎಂದು ಅನಿಸಿದರೆ, ಆಕೆಗೆ ಅವನ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಬಗ್ಗೆ ವರದಿಯಾಗಿದೆ.

ಪಂಜಾಬ್-ಹರಿಯಾಣ ಹೈಕೋರ್ಟ್‍ನಲ್ಲಿ ಪತಿ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದು, ಆದರೆ ಆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಹೆಂಡತಿಯೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಹಿನ್ನೆಲೆ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಇವರ ವಿಚಾರಣೆ ಮಾಡಿದ್ದಾರೆ.

ವಿಚಾರಣೆ ವೇಳೆ ಮಹಿಳೆಯು, ತನ್ನ ಮಗಳಿಗೆ ಶಿಕ್ಷಣ ನೀಡಲು ಮತ್ತು ಮದುವೆ ಮಾಡಿಸಲು ಗಂಡ ಹಣವನ್ನು ನೀಡಬೇಕು ಎಂದು ವಾದ ಮಾಡಿದ್ದಾಳೆ. ಇದನ್ನು ನ್ಯಾಯಮೂರ್ತಿಗಳು ಆಲಿಸಿದ್ದು, ತಾಯಿಯ ಜೊತೆಗೆ ಈ ಯುವತಿ 20 ವರ್ಷ ಕಳೆದಿದ್ದಾಳೆ. ಈ ನಡುವೆ ಆಕೆ ತನ್ನ ತಂದೆಯನ್ನು ಸಂಪರ್ಕ ಮಾಡಲು ಬಯಸಿಲ್ಲ. ಆಕೆಗೆ ‘ಅಪ್ಪ’ ಎನ್ನುವ ಸಂಬಂಧವೇ ಬೇಡ ಎಂದ ಮೇಲೆ ಆಕೆಯ ಜವಾಬ್ದಾರಿ ತಂದೆಯ ಮೇಲೆ ಇರುವುದಿಲ್ಲ. ಅವಳಿಗೆ ಈ ಸಂಬಂಧವೇ ಬೇಡ ಎಂದ ಮೇಲೆ ಆಕೆಯ ಶಿಕ್ಷಣ ಮತ್ತು ಮದುವೆಗೆ ತಂದೆಯಿಂದ ಹಣ ಪಡೆಯಲು ಅರ್ಹತೆ ಇರುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.

ಅಲ್ಲದೆ, ಮಹಿಳೆಯ ಜೀವನ ನಿರ್ವಹಣೆಗೆ ಪರಿಹಾರವಾಗಿ ತಿಂಗಳಿಗೆ 8 ಸಾವಿರ ರೂ. ಮತ್ತು ಅಂತಿಮವಾಗಿ 10 ಲಕ್ಷ ರೂ. ನೀಡಬೇಕು ಎಂದು ತೀರ್ಪು ನೀಡಿದ್ದಾರೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಂದಿನ ತಿಂಗಳಿನಲ್ಲಿ  ಅಪ್ಪಳಿಸಲಿದೆ ಈ ವರ್ಷದ ಮೊದಲ ಚಂಡಮಾರುತ

18 ಸರ್ಕಾರಿ ಕಚೇರಿ ಅಧಿಕಾರಿಗಳ ಅಕ್ರಮ ಆಸ್ತಿ ಬಯಲಿಗೆಳೆದ ಎಸಿಬಿ

ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ‘ಜೇಮ್ಸ್’ಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು?

ಬಾಲಕಿಯ  ಮೇಲೆ ಲೈಂಗಿಕ ದೌರ್ಜನ್ಯ: ಪಾದ್ರಿಯ  ಬಂಧನ

ಪಡೀಲ್- ಕುಲಶೇಖರ ಜೋಡಿ ರೈಲು ಮಾರ್ಗ ಕಾಮಗಾರಿ: ಮಾರ್ಚ್​ 20ರವರೆಗೆ  ರೈಲು ಸಂಚಾರ ಸ್ಥಗಿತ

ಇತ್ತೀಚಿನ ಸುದ್ದಿ