ಮಗಳು ಅನ್ಯ ಜಾತಿಯವನ ಜೊತೆ ಪರಾರಿಯಾಗಿದ್ದಕ್ಕೆ ನೊಂದು ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ! - Mahanayaka
12:18 PM Wednesday 5 - February 2025

ಮಗಳು ಅನ್ಯ ಜಾತಿಯವನ ಜೊತೆ ಪರಾರಿಯಾಗಿದ್ದಕ್ಕೆ ನೊಂದು ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ!

chikkaballapura
04/10/2022

ಚಿಕ್ಕಬಳ್ಳಾಪುರ: ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಆತನ ಜೊತೆಗೆ ಪರಾರಿಯಾದಳು ಅನ್ನೋ ಕಾರಣಕ್ಕೆ ತಂದೆ, ತಾಯಿ ಹಾಗೂ ಮಗ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ಶ್ರೀರಾಮಪ್ಪ(63), ಸರೋಜಮ್ಮ(60), ಮನೋಜ್(24) ಆತ್ಮಹತ್ಯೆಗೆ ಶರಣಾದವರು ಎಂದು ತಿಳಿದು ಬಂದಿದೆ. ಅರ್ಚನಾ ಎಂಬ ಯುವತಿ ಅನ್ಯ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದು, ಆತನ ಜೊತೆಗೆ ಪರಾರಿಯಾಗಿದ್ದಳು. ಮಗಳು ನಾಪತ್ತೆಯಾದ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ತನಿಖೆ ನಡೆಸುವುದಕ್ಕೂ ಮೊದಲೇ ಶ್ರೀರಾಮಪ್ಪ ಡೆತ್ ನೋಟ್ ಬರೆದಿಟ್ಟಿದ್ದು, ಮನೆ ಬಿಟ್ಟು ಹೋದ ಮಗಳಿಗೆ ಆಸ್ತಿ ನೀಡದಂತೆ ಹಾಗೂ ತನ್ನ ಸಾವಿಗೆ ಮಗಳ ನಿರ್ಧಾರವೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ