ಪೊಲೀಸ್ ಪರೀಕ್ಷೆಗೆ ಮಗನ ಬದಲು ಬೇರೆ ವ್ಯಕ್ತಿಯನ್ನು ಕೂರಿಸಿದ ಕಾನ್ಸ್ ಟೇಬಲ್, ಆತನ ಪುತ್ರನ ಬಂಧನ

06/01/2021

ನವದೆಹಲಿ:  ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ತನ್ನ ಮಗನ ಪರವಾಗಿ ಬೇರೆ ವ್ಯಕ್ತಿಯ ಬಳಿಯಲ್ಲಿ ಪರೀಕ್ಷೆ ಬರೆಸಿದ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಕಾನ್ಸ್ ಟೇಬಲ್ ವಿನೀತ್ ಹಾಗೂ ಪುತ್ರ ಕಾಶಿಕ್ (21) ಬಂಧಿತ ಆರೋಪಿಗಳಾಗಿದ್ದಾರೆ. ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ  ತನ್ನ ಮಗನ ಪರವಾಗಿ ಬೇರೊಬ್ಬರ ಬಳಿಯಲ್ಲಿ ಪರೀಕ್ಷೆ ಬರೆಸಿ ಮೋಸ  ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಹಾರದ ಮುಜಾಫರ್ಪುರದಲ್ಲಿ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆ ನಡೆಸಲಾಗಿತ್ತು. ಕಾನ್ಸ್ ಟೇಬಲ್ ವಿನೀತ್ ಅವರ ಪುತ್ರ ಪರೀಕ್ಷೆ ಬರೆಯಬೇಕಿತ್ತು. ಆದರೆ, ಆತನ ಬದಲಾಗಿ ಬೇರೆ ವ್ಯಕ್ತಿಯಿಂದ ಪರೀಕ್ಷೆ ಬರೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎಸ್ ಎಸ್ ಸಿಯಿಂದ ದೂರು ಬಂದಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಕ್ರೈಮ್ ಬ್ರಾಂಚ್ ನಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಸಿದಾಗ  ಕಾಶಿಸ್ ಪ್ರಸ್ತುತ ಬಿ.ಕಾಂ.ಓದುತ್ತಿದ್ದಾನೆ.  ಈತನ ಸ್ಥಾನದಲ್ಲಿ ಹೈದರಾಬಾದ್ ನಿಂದ ಅಭ್ಯರ್ಥಿಯೊಬ್ಬನನ್ನು ಕರೆಸಿ, ಪರೀಕ್ಷೆಗೆ ಹಾಜರುಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version