ಮಗನ ಸಾಕು ನಾಯಿಂದಲೇ ದುರಂತ ಅಂತ್ಯ ಕಂಡ ತಾಯಿ
ಲಕ್ನೋ: 82 ವರ್ಷದ ಮಹಿಳೆಯನ್ನು ಪಿಟ್ ಬುಲ್ ಜಾತಿಗೆ ಸೇರಿದ ನಾಯಿ ಕಚ್ಚಿ ಹತ್ಯೆ ಮಾಡಿದ ಘಟನೆ ಲಖ್ನೋದ ಕೈಸರ್ ಬಾಗ್ ನಲ್ಲಿ ನಡೆದಿದ್ದುಇ, ನಿವೃತ್ತ ಶಿಕ್ಷಕಿಯ ಮಗನೇ ಸಾಕಿದ್ದ ಪಿಟ್ ಬುಲ್ ನಾಯಿಗೆ ತಾಯಿ ಬಲಿಯಾಗಿದ್ದಾರೆ.
ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಇವರ ಮಗ ಅಮಿತ್, ಪಿಟ್ ಬುಲ್ ಮತ್ತು ಲ್ಯಾಬ್ರಡಾರ್ ತಳಿಯ ಎರಡು ಸಾಕು ನಾಯಿಗಳನ್ನು ಸಾಕುತ್ತಿದ್ದ. ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಶೀಲಾ ಅವರನ್ನು ಬಲರಾಂಪುರ್ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ನೆರೆಹೊರೆಯವರ ಪ್ರಕಾರ, ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾಯಿಗಳು ಬೊಗಳುವುದು, ಸುಶೀಲಾ ಅವರ ಮೇಲೆ ದಾಳಿ ಮಾಡಿದ್ದರಿಂದ ಸಹಾಯಕ್ಕಾಗಿ ಕೂಗುವುದು ಕೇಳಿಸಿದೆ. ಅವರ ಮನೆಗೆ ಧಾವಿಸಿದರೂ ಒಳಗಿನಿಂದ ಬೀಗ ಹಾಕಿದ್ದರಿಂದ ಬಾಗಿಲು ತೆರೆಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಂತೆ ಸುಶೀಲಾ ಅವರ ದೇಹದ ಮೇಲೆ ಕುತ್ತಿಗೆಯಿಂದ ಹೊಟ್ಟೆಯವರೆಗೆ ಒಟ್ಟು 12 ತೀವ್ರ ಗಾಯಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka