ಮಗನ ತಪ್ಪಿನಿಂದ 3.30 ಲಕ್ಷ ರೂಪಾಯಿ ದಂಡ ಪಾವತಿಸಿದ ತಂದೆ!
ಹಾಂಕಾಂಗ್: ಹಾಂಕಾಂಗ್‌ನಲ್ಲಿ ತಂದೆಯೊಬ್ಬರು ತಮ್ಮ ಮಗನ ತುಂಟಾಟದ ಕೃತ್ಯಕ್ಕೆ ದೊಡ್ಡ ಬೆಲೆ ತೆರಬೇಕಾದಾದ ಘಟನೆ ನಡೆದಿದೆ.
ಶಾಪಿಂಗ್ ಮಾಲ್ ನಲ್ಲಿ ಆಟಿಕೆ ಒಡೆದ ಆರೋಪದ ಮೇಲೆ ಅಂಗಡಿ ಮಾಲಿಕನು ಮಗುವಿನ ತಂದೆಯಿಂದ 3.30 ಲಕ್ಷ ರೂ. ವಸೂಲು ಮಾಡಿದ್ದು, ಹಾಂಗ್ ಕಾಂಗ್ ನ ಶಾಪಿಂಗ್ ಮಾಲ್ ನ ಆಟಿಕೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಭಾನುವಾರ ಸಂಜೆ, ಚೆಂಗ್ ತನ್ನ ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ಲ್ಯಾಂಗ್ ಹ್ಯಾಮ್ ಪ್ಲೇಸ್ ಮಾಲ್ ನಲ್ಲಿರುವ ಕೆ.ಕೆ.ಪ್ಲಸ್ ಎಂಬ ಅಂಗಡಿಗೆ ತೆರಳಿದ್ದಾರೆ. ಈ ವೇಳೆ ಚೆಂಗ್ ಅವರು ಒಂದು ಫೋನ್ ಕರೆಯನ್ನು ತೆಗೆದುಕೊಳ್ಳಲು ಹೊರಗೆ ಹೋಗುತ್ತಾರೆ. ಈ ವೇಳೆ ದೊಡ್ಡ ಶಬ್ಧ ಕೇಳಿದ್ದರಿಂದ ಶಾಪ್ ನೊಳಗೆ ಓಡಿ ಬಂದಿದ್ದಾರೆ. ಈ ವೇಳೆ ಅವರ ಪುತ್ರ ಗೊಂಬೆಯೊಂದನ್ನು ಒಡೆದು ಹಾಕಿರುವುದು ಕಂಡು ಬಂದಿದೆ.
ಚೆಂಗ್ ಅವರ ಹಿರಿಯ ಮಗ 1.8 ಮೀಟರ್ ಎತ್ತರದ ಗೊಂಬೆಯನ್ನು ಒಡೆದು ಹಾಕಿದ್ದ. ಹೀಗಾಗಿ ಅಂಗಡಿ ಮಾಲಿಕರು, ಗೊಂಬೆಯ ಮೊತ್ತವನ್ನು ನಮಗೆ ಪಾವತಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇನ್ನೂ ಘಟನೆಯಲ್ಲಿ ತನ್ನ ಮಗನ ತಪ್ಪಿದೆ ಎಂದು ಅರಿತ ಚೆಂಗ್ ಗೊಂಬೆಯ ಬೆಲೆ 3,30,168 ರೂ. ಪಾವತಿ ಮಾಡಲು ಒಪ್ಪಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು