ಮಗುವನ್ನೂ ಹೆತ್ತಳು, ಪರೀಕ್ಷೆಯನ್ನೂ ಬರೆದಳು | ಗರ್ಭಿಣಿ ವಿದ್ಯಾರ್ಥಿನಿಯ ಛಲ ಹೇಗಿದೆ ನೋಡಿ - Mahanayaka
8:01 PM Wednesday 11 - December 2024

ಮಗುವನ್ನೂ ಹೆತ್ತಳು, ಪರೀಕ್ಷೆಯನ್ನೂ ಬರೆದಳು | ಗರ್ಭಿಣಿ ವಿದ್ಯಾರ್ಥಿನಿಯ ಛಲ ಹೇಗಿದೆ ನೋಡಿ

13/02/2021

ಬಿಹಾರ: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಿದ್ಧಳಾಗಿದ್ದ ಮಹಿಳೆ ಪಿಯು ಪರೀಕ್ಷೆಗೆಂದು ತೆರಳುತ್ತಿದ್ದ ವೇಳೆ, ಮಾರ್ಗ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಮಗುವಿಗೆ ಜನ್ಮ ನೀಡಿದ ಬಳಿಕ ಆಕೆ ಪರೀಕ್ಷೆ ಬರೆದು ಸಾಧನೆ ಬರೆದಿದ್ದಾರೆ.

ಈ ಘಟನೆ ನಡೆದಿರುವುದು ಬಿಹಾರದ ಮೋತಿಹಾರ ಜಿಲ್ಲೆಯಲ್ಲಿ. ಕಾಜಲ್ ಎಂಬ ಮಹಿಳೆಗೆ ಪರೀಕ್ಷೆ ದಿನವೇ ಡಾಕ್ಟರ್ ಹೆರಿಗೆ ದಿನಾಂಕವನ್ನು ಕೂಡ ನೀಡಿದ್ದರು. ಆದರೆ ಕಾಜಲ್ ಅವರು, ಒಂದೆರಡು ದಿನ ಮುಂದೆ ಹೆರಿಗೆ ಆಗಬಹುದು ಅಂದುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಆದರೆ ಮಾರ್ಗ ಮಧ್ಯೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರು ಆಸ್ಪತ್ರೆಗೆ ದಾಖಲಾದರು.

ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದು, ತಮ್ಮ ಗುರಿಯನ್ನು ಅವರು ಇಂತಹ ಸಂದರ್ಭದಲ್ಲಿಯೂ ಅವರು ಮರೆಯಲಿಲ್ಲ. ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಕಾಜಲ್ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು.

ಇತ್ತೀಚಿನ ಸುದ್ದಿ