ಮಗುಚಿ ಬಿದ್ದ ಬೈಕ್ ಗೆ ಹತ್ತಿಕೊಂಡ ಬೆಂಕಿ: ಇಬ್ಬರು ಸವಾರರಿಗೆ ತೀವ್ರ ಗಾಯ
ಮೈಸೂರು; ಇಬ್ಬರು ವ್ಯಕ್ತಿಗಳು ಸ್ಕೂಟರ್ ನಲ್ಲಿ ಮೈಸೂರಿನಿಂದ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಡಿಯಿಂದ ಪೆಟ್ರೋಲ್ ಸುರಿದ ಪರಿಣಾಮ ಕ್ಷಣಾರ್ಧದಲ್ಲೆ ಸ್ಕೂಟರ್ ಹೊತ್ತಿ ಉರಿದ ಘಟನೆ ಮೈಸೂರು ತಾಲೂಕಿನ ದರಸಗುಪ್ಪೆ ಬಳಿ ನಡೆದಿದೆ.
ಘಟನೆಯಲ್ಲಿ ಮೈಸೂರು ಮೂಲದ ಶಿವರಾಮು ಬಿನ್ ಲೇಟ್ ನಾರಾಯಣ (73) ಹಾಗೂ ಅನಂತರಾಮು ಬಿನ್ ಲೇಟ್ ವಾಸುವೇವಮೂರ್ತಿ (50) ಅಪಘಾತಕ್ಕೀಡಾದ ವ್ಯಕ್ತಿಗಳು
ಈ ಇಬ್ಬರು ತಮ್ಮ ಸಂಬಂಧಿಕರ ಗೃಹ ಪ್ರವೇಶ ನಿಮಿತ್ತ ಜುಪಿಟರ್ ಸೂಟರ್ ನಲ್ಲಿ ಮೈಸೂರಿನಿಂದ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದಸರಗುಪ್ಪೆ ಬಳಿ ಆಯ ತಪ್ಪಿ ಬಿದ್ದಿದ್ದಾರೆ.
ಬಿದ್ದ ರಬಸಕ್ಕೆ ರಸ್ತೆ ಸ್ಕೂಟರ್ ನಿಂದ ಪೆಟ್ರೋಲ್ ಸುರಿದಿದ್ದ ಪರಿಣಾಮವಾಗಿ ಏಕಾಏಕಿ ಬೈಕ್ ಹೊತ್ತಿಕೊಂಡು, ಸಂಪೂರ್ಣವಾಗಿ ಭಸ್ಮವಾಗಿದೆ.
ಘಟನೆಯಿಂದ ಶಿವರಾಮು ಸ್ಕೂಟರ್ ಕೆಳಗೆ ಸಿಲುಕಿ ಹಾಕಿಕೊಂಡ ಪರಿಣಾಮ ಅವರ ದೇಹ ಭಾಗಶಃ ಸುಟ್ಟ ಗಾಯಗಳಾದ್ದು, ಅನಂತರಾಮು ಅವರಿಗೆ ಎಡಗಾಲು ಮುರಿತಗೊಂಡಿದೆ ಎಂದು ತಿಳಿದು ಬಂದಿದೆ.
ಸ್ಥಳೀಯರು ಶಿವರಾಮು ಅವರನ್ನು ಬೆಂಕಿ ಜ್ವಾಲೆಯಿಂದ ಎಳೆದು ಬಟ್ಟೆಯಿಂದ ಬಡಿದು ಬೆಂಕಿ ಹಾರಿಸಿ ಆಂಬ್ಯೂಲೆಸ್ಸ್ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ಪೋಲಿಸರು ಪ್ರಕರಣ ನಡೆದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬಿಎಸ್ ಪಿ ಬೆಂಬಲ
ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಜರ್ಮನಿಗೆ!
ತರಕಾರಿ ಮಾರಾಟದ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಅರೆಸ್ಟ್
ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವರ: ಅತಿಥಿ ಸಾವು
ಇಂಗ್ಲಿಷ್ ಮಾತನಾಡದಿದ್ದಕ್ಕೆ 4 ವರ್ಷದ ಬಾಲಕನಿಗೆ ಥಳಿತ: ಶಿಕ್ಷಕ ಅರೆಸ್ಟ್