ಮಗುಚಿ ಬಿದ್ದ 10 ಜನರು ಪ್ರಯಾಣಿಸುತ್ತಿದ್ದ ದೋಣಿ: ಇಬ್ಬರು ನೀರುಪಾಲು - Mahanayaka

ಮಗುಚಿ ಬಿದ್ದ 10 ಜನರು ಪ್ರಯಾಣಿಸುತ್ತಿದ್ದ ದೋಣಿ: ಇಬ್ಬರು ನೀರುಪಾಲು

madhyapradesh
30/01/2022

ಭೋಪಾಲ್: 10 ಜನರಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ನೀರುಪಾಲಾಗಿರುವ ಘಟನೆ ಮಧ್ಯಪ್ರದೇಶದ ಸಿಂಧ್ ನದಿಯಲ್ಲಿ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋ ಬೆಚ್ಚಿ ಬೀಳಿಸುವಂತಿದೆ.

ವರದಿಗಳ ಪ್ರಕಾರ ಧಾರ್ಮಿಕ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ದೋಣಿಯಲ್ಲಿ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಘಟನೆಯ ದೃಶ್ಯವನ್ನು ಅಲ್ಲೇ ಇದ್ದ ಇತರರು ವಿಡಿಯೋ ಮಾಡಿದ್ದಾರೆ. ದೋಣಿ ಮಗುಚಿ ಬಿದ್ದ ವೇಳೆ, ಸುತ್ತಲಿದ್ದವರು ಆತಂಕದಿಂದ ಜೋರಾಗಿ ಕೂಗುವ ಧ್ವನಿ ಎದೆ ನಡುಗಿಸುವಂತಿದೆ. ಘಟನೆಯಲ್ಲಿ 8 ಮಂದಿಯನ್ನು ರಕ್ಷಿಸಲಾಗಿದ್ದು, ಒಬ್ಬ ಹುಡುಗ ಹಾಗೂ ಮತ್ತೋರ್ವಳು ಹದಿಹರೆಯದ ಹುಡುಗಿ ನೀರುಪಾಲಾಗಿರುವುದಾಗಿ ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆತಂಕಕಾರಿ ಸುದ್ದಿ: ಆಹಾರಕ್ಕಾಗಿ ಕಿಡ್ನಿಯನ್ನು ಮಾರಾಟ ಮಾಡುತ್ತಿರುವ ಅಫ್ಘಾನ್ನರು

ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ​: ಎ ಎಸ್ ಐ ಮೇಲಿನ ಆರೋಪ ಸಾಬೀತು

ಲಕ್ಷಾಂತರ ರೂಪಾಯಿ ವಂಚನೆ: ಆರೋಪಿಯ ಬಂಧನ

ಸುಶಾಂತ್ ಸಿಂಗ್ ರಜಪೂತ್ ಡೆತ್​ ಕೇಸ್​: ಎನ್ ​ಸಿ ಬಿ ಯಿಂದ ಮತ್ತೋರ್ವ ಆರೋಪಿಯ ಬಂಧನ

ವಿದ್ಯಾರ್ಥಿನಿಯೊಂದಿಗೆ ರೊಮಾನ್ಸ್​ ಪ್ರಕರಣ: ಸೇವೆಯಿಂದ ಮುಖ್ಯಶಿಕ್ಷಕ ವಜಾ

 

ಇತ್ತೀಚಿನ ಸುದ್ದಿ