ಪ್ರಿಯಕರನ ಜೊತೆ ಮಾತನಾಡುವಾಗ ಅತ್ತ ಮಗುವನ್ನು ಗೋಡೆಗೆ ಗುದ್ದಿಕೊಂದ ತಾಯಿ!

30/01/2021

ಚನ್ನರಾಯಪಟ್ಟಣ: ಮಹಿಳೆಯೊಬ್ಬರು ತಮ್ಮ 2 ವರ್ಷದ ಮಗುವನ್ನು ಗೋಡೆಗೆ ಗುದ್ದಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಸುಮಾ ಈ ದುಷ್ಕೃತ್ಯ ಎಸಗಿದ ಮಹಿಳೆಯಾಗಿದ್ದಾಳೆ.

ಜ.19ರಂದು ಮಗು ಸಾವನ್ನಪ್ಪಿತ್ತು. ಮಗುವಿನ ಸಾವಿನ ಬಗ್ಗೆ ಪತಿ ನಂಜಪ್ಪ ಅನುಮಾನಗೊಂಡು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರಿಗೆ ಮನವಿ ಮಾಡಿದ್ದರು.  ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಸಾವು ಸಂಭವಿಸಿದೆ ಎಂದು ವರದಿ ಬಂದಿದೆ. ವರದಿಯ ಹಿನ್ನೆಲೆಯಲ್ಲಿ ಸುಮಾಳನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ.

ಮದುವೆಗೂ ಮೊದಲು ತಾನು ತುರುವೇಕೆರೆ ತಾಲೂಕಿನ ಹರಿದಾಸಹಳ್ಳಿಯ ಮನೋಹರ ಎಂಬಾತನನ್ನು ಪ್ರೀತಿಸುತ್ತಿದ್ದೆ.  ಆತನ ಜೊತೆಗೆ ತಾನು ಮಾತನಾಡುತ್ತಿದ್ದೆ. ಈ ವಿಚಾರ ಪತಿಗೆ ತಿಳಿದು ಜಗಳವಾಗಿತ್ತು. ಗಂಡನ ಜೊತೆಗೆ ಸಂಸಾರ ನಡೆಸಲು ನನಗೆ ಇಷ್ಟ ಇರಲಿಲ್ಲ. ಹೀಗಾಗಿ ಮನೋಹರನ ಜೊತೆಗೆ ಓಡಿ ಹೋಗಬೇಕು ಎಂದು ಯೋಚಿಸುತ್ತಿದ್ದ ವೇಳೆ ಮಗು ಜೋರಾಗಿ ಅತ್ತಿದ್ದು, ಈ ವೇಳೆ ಕೋಪಗೊಂಡು ಮಗುವನ್ನು ಮೂಗು-ಬಾಯಿ ಮುಚ್ಚಿ 2-3 ಬಾರಿ ಗೋಡೆಗೆ ಗುದ್ದಿರುವುದಾಗಿ ಆಕೆ ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾಳೆ.

ಇತ್ತೀಚಿನ ಸುದ್ದಿ

Exit mobile version