ಮಗುವಿಗೆ ವಿಷ ನೀಡಿ ಕೊಂದು, ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿದ ತಾಯಿ!
ಲಕ್ನೋ: ಮಹಿಳೆಯೋರ್ವರು ತನ್ನ 13 ತಿಂಗಳ ಮಗುವನ್ನು ವಿಷ ನೀಡಿ ಕೊಂದು ಬಳಿಕ ತನ್ನ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಬುಲಂದರ್ ಶಹರ್ ಜಿಲ್ಲೆಯಲ್ಲಿ ನಡೆದಿದೆ.
23 ವರ್ಷ ವಯಸ್ಸಿನ ಜೀತೆಂದ್ರಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಜಿತೇಂದ್ರಿಯ ಪತಿ ರಾಜಸ್ಥಾನದಲ್ಲಿ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದರು. ಜಿತೇಂದ್ರಿ ಬುಲಂದರ್ ಶಹರ್ ಜಿಲ್ಲೆಯ ಹಳ್ಳಿಯಲ್ಲಿ ವಾಸವಿದ್ದರು.
ಮನೆಯ ಛಾವಣಿಯಿಂದ ಯಾರೋ ಹಾರಿದಂತಯೆ ಶಬ್ದ ಬಂದಿದ್ದು, ಈ ವೇಳೆ ಜಿತೇಂದ್ರಿಯ ರೂಮ್ ಬಳಿ ಹೋಗಿ ನೋಡಿದಾಗ ಜಿತೇಂದ್ರಿ ಮತ್ತು ಮಗು ರೂಮ್ ಒಳಗೆ ಲಾಕ್ ಮಾಡಿಕೊಂಡಿದ್ದು, ಬಾಗಿಲು ತೆರೆಯುವಂತೆ ಎಷ್ಟೇ ಕೂಗಿದರೂ ಬಾಗಿಲು ತೆರೆಯಲಿಲ್ಲ.
ಕೊನೆಗೆ ಮನೆಯವರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಮಗು ಸತ್ತು ಬಿದ್ದಿದ್ದು, ಜಿತೇಂದ್ರಿ ತನ್ನ ಕತ್ತುಕೊಯ್ದುಕೊಂಡು ಬೆಡ್ ನಲ್ಲಿ ನರಳುತ್ತಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಪ್ರಯತ್ನಿಸಿದರು. ಆದರೆ, ಮಾರ್ಗ ಮಧ್ಯೆ ಆಕೆ ಕೊನೆಯಿಸಿರೆಳೆದಿದ್ದಾಳೆ.