ನವಜಾತ ಶಿಶುವನ್ನು ಪೊದೆಗೆ ಎಸೆದು ಹೋಗಿದ್ದ ಪೋಷಕರ ಬಂಧನ
ಉಡುಪಿ: ನವಜಾತ ಶಿಶುವನ್ನು ಪೊದೆಗೆ ಎಸೆದು ತಪ್ಪಿಸಿಕೊಂಡಿದ್ದ ಪೋಷಕರನ್ನು ಪೊಲೀಸರು ಬಂಧಿಸಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಗುವನ್ನು ಎಸೆದು ಹೋಗಿರುವುದು ಇದೀಗ ಬಯಲಾಗಿದೆ.
ಕೊಲ್ಲೂರು ಜಡ್ಕಲ್ ನ 40 ವರ್ಷ ವಯಸ್ಸಿನ ರಾಧಾ ಹಾಗೂ 43 ವರ್ಷ ವಯಸ್ಸಿನ ಸತೀಶ್ ಎಂಬವರು ಬಂಧಿತ ಆರೋಪಿಗಳಾಗಿದ್ದು, ಇವರನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಎಸ್ಟೇಟ್ ವೊಂದರಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಎನ್ನಲಾಗಿದೆ.
ಆರೋಪಿಗಳಿಬ್ಬರಿಗೂ ಪ್ರತ್ಯೇಕ ಮದುವೆಯಾಗಿತ್ತು. ಆದರೆ, ತಮ್ಮ ಪತಿ, ಪತ್ನಿಯಿಂದ ದೂರವಿದ್ದ ಸತೀಶ್ ಹಾಗೂ ರಾಧಾ ಅಕ್ರಮ ಸಂಬಂಧ ಹೊಂದಿದ್ದು, ಪರಿಣಾಮವಾಗಿ ರಾಧಾ ಗರ್ಭಿಣಿಯಾಗಿದ್ದರು. ಬಳಿಕ ಹಾಲಾಡಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು ಎಂದು ವರದಿಯಾಗಿದೆ.
ಬಳಿಕ ಮಗು ಬೇಡವೆಂದು ನಿರ್ಧರಿಸಿದ ಇವರು, ದ್ವಿಚಕ್ರವಾಹನದಲ್ಲಿ ಬಂದು ಮಗುವನ್ನು ಪೊದೆಗೆ ಎಸೆದು ಹೋಗಿದ್ದರು ಎನ್ನಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸರು ತೀವ್ರ ತನಿಖೆ ನಡೆಸಿದಾಗ ಸತ್ಯ ಹೊರ ಬಂದಿತ್ತು. ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯಡಿಯೂರಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿಯಾಗಿದೆ | ಹೆಚ್.ಡಿ.ಕುಮಾರಸ್ವಾಮಿ
ಬೊಮ್ಮಾಯಿಯನ್ನು ಕಿತ್ತು ಹಾಕಲು ಈಶ್ವರಪ್ಪ ಓಡಾಡುತ್ತಿದ್ದಾರೆ | ಸಿದ್ದರಾಮಯ್ಯ
ತಮಿಳು ಗೊತ್ತಿದ್ದವರಿಗೆ ಮಾತ್ರ ಸರ್ಕಾರಿ ನೌಕರಿ | ತಮಿಳುನಾಡು ಸರ್ಕಾರದಿಂದ ಮಹತ್ವದ ನಿರ್ಧಾರ
ಹಿರಿಯ ನಟ ಶಿವರಾಮ್ ಪಂಚಭೂತಗಳಲ್ಲಿ ಲೀನ: ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ
ನಂಬರ್ ಪ್ಲೇಟ್ ನಲ್ಲಿ SEX ಪದ ಬಳಕೆ: ಸಾರಿಗೆ ಇಲಾಖೆಗೆ ಮಹಿಳಾ ಆಯೋಗ ನೋಟಿಸ್