ಮಗುವಿನ ಗ್ರಹಗತಿ ಸರಿಯಿಲ್ಲ ಎಂದು ಜಲಾಶಯಕ್ಕೆ ಎಸೆದುಕೊಂದ ಪಾಪಿ ತಾಯಿ! - Mahanayaka
3:19 PM Wednesday 5 - February 2025

ಮಗುವಿನ ಗ್ರಹಗತಿ ಸರಿಯಿಲ್ಲ ಎಂದು ಜಲಾಶಯಕ್ಕೆ ಎಸೆದುಕೊಂದ ಪಾಪಿ ತಾಯಿ!

tamilnadu
26/03/2022

ಇಡೀ ಪ್ರಪಂಚವೇ ಡಿಜಿಟಲ್ ಆಗುತ್ತಿದ್ದರೂ, ರಾಶಿ, ಭವಿಷ್ಯ, ಗ್ರಹಗತಿಗಳು ಎಂದು ಭಾರತದಲ್ಲಿ ಇನ್ನೂ ವಿಲಕ್ಷಣ ಘಟನೆಗಳು ನಡೆಯುತ್ತಲೇ ಇದೆ. ತಮಿಳುನಾಡಿನಲ್ಲೊಬ್ಬಳು ಮಹಿಳೆ ಮೂಢನಂಬಿಕೆಯಿಂದ ತನ್ನ ಮಗುವನ್ನು ಜಲಾಶಯಕ್ಕೆ ಎಸೆದುಕೊಂದ ಘಟನೆ ನಡೆದಿದೆ.

ತಮಿಳುನಾಡಿನ ದಿಂಡಿಗಲ್ ನಲ್ಲಿ ಈ ಘಟನೆ ನಡೆದಿದ್ದು,  ಲತಾ ಹಾಗೂ ಮಹೇಶ್ವರನ್ ಅವರಿಗೆ ನಾಲ್ಕು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿಗೆ ಗೋಕುಲ್ ಎಂದು ಹೆಸರಿಟ್ಟಿದ್ದರು. ಇತ್ತ ಲತಾಗೆ ಮಗುವಿನ ರಾಶಿ, ಭವಿಷ್ಯ ಗ್ರಹಗತಿಗಳದ್ದೇ ಚಿಂತೆಯಾಗಿತ್ತು. ಹೀಗಾಗಿ ಆಕೆ ವಿಚಿತ್ರ ವರ್ತನೆ ತೋರುತ್ತಿದ್ದಳು ಎನ್ನಲಾಗಿದೆ.

ನಿನ್ನೆ ಪತಿ ಮಹೇಶ್ವರನ್ ಕೆಲಸಕ್ಕೆ ಹೋಗಿದ್ದ ವೇಳೆ ಲತಾ ತನ್ನ ಮಗುವನ್ನು ಜಲಾಶಯಕ್ಕೆ ಎಸೆದು ಪರಾರಿಯಾಗಿದ್ದಾಳೆ ಎನ್ನಲಾಗಿದೆ. ವಿಚಾರ ತಿಳಿದು ಪಳನಿ ಪೊಲೀಸರು ಆರೋಪಿ ಲತಾಳನ್ನು ಬಂಧಿಸಿದ್ದಾರೆ.

ಇನ್ನೂ ಮಗನ ರಾಶಿ, ಭವಿಷ್ಯ, ಗ್ರಹಗತಿಗಳು ಸರಿಯಿಲ್ಲದ ಕಾರಣ ಹತ್ಯೆ ಮಾಡಿರುವುದಾಗಿ ಮಹಿಳೆ ಪೊಲೀಸರ ವಿಚಾರಣೆಯ ವೇಳೆ ಹೇಳಿದ್ದಾಳೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನನ್ನನ್ನು ಜೈಲ್‌ಗೆ ಕಳುಹಿಸಲು ಬಿಜೆಪಿ ಕೆಟ್ಟದಾರಿ ಹಿಡಿಯುತ್ತಿದೆ: ಉದ್ಧವ್ ಠಾಕ್ರೆ

ಚಾಮುಂಡಿ ಬೆಟ್ಟದಲ್ಲೂ ಮುಸ್ಲಿಂ ವ್ಯಾಪಾರಿಗಳ ಅಂಗಡಿ ತೆರವಿಗೆ ವಿಹೆಚ್‌ಪಿ ಒತ್ತಾಯ

ಸ್ವಾಮೀಜಿಗಳಿಗೆ ಅವಮಾನಿಸಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು: ಉಡುಪಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷನ ಹೊಟೇಲ್ ತೆರವು

‘RRR’ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಡುವೆಯೇ ಅಭಿಮಾನಿಗಳಿಗೆ ದುಃಖದ ಸುದ್ದಿ!

 

ಇತ್ತೀಚಿನ ಸುದ್ದಿ