3 ತಿಂಗಳ ಮಗುವಿನ ಮೇಲೆ ಮೃಗೀಯ ದಾಳಿ ನಡೆಸಿದ ದುಷ್ಟ! - Mahanayaka
11:23 PM Wednesday 11 - December 2024

3 ತಿಂಗಳ ಮಗುವಿನ ಮೇಲೆ ಮೃಗೀಯ ದಾಳಿ ನಡೆಸಿದ ದುಷ್ಟ!

11/02/2021

ನ್ಯೂಕ್ಯಾಸಲ್:  ಹುಟ್ಟಿ 3 ತಿಂಗಳಾಗುವ ಮೊದಲೇ ಹೆಣ್ಣು ಮಗುವಿನ ಮೇಲೆ ಕಾಮುಕನೋರ್ವ ದಾಳಿ ಮಾಡಿದ್ದು, ಮಗುವನ್ನು ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದಾನೆ.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್ ಸಿಟಿಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಜೇಮ್ಸ್ ರುಡಾಲ್ಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ

ಅತ್ಯಾಚಾರ ನಡೆದ ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದೆ. ಘಟನೆಗೆ  ಸಂಬಂಧಿಸಿದಂತೆ ಆರೋಪಿಯನ್ನು ಡಿಸೆಂಬರ್ 16ರಂದೇ ಆರೋಪಿಯನ್ನು ಪೊಲೀಸರು  ಬಂಧಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ನ್ಯೂಕ್ಯಾಸೆಲ್ ನಲ್ಲಿ ತೀವ್ರ ಜನಾಕ್ರೋಶ ಕೇಳಿ ಬಂದಿದ್ದು, ಪೊಲೀಸರು ಈ ಘಟನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ನಾಲ್ಕು ವಾರದೊಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.

ಇತ್ತೀಚಿನ ಸುದ್ದಿ