ಹೆಣ್ಣು  ಮಗು ಎಂದು, ಕೊರಳಿಗೆ ನೇಣು ಬಿಗಿದು ಶೌಚಾಲಯದ ಕಿಟಕಿಯಿಂದ ಎಸೆದರು! - Mahanayaka

ಹೆಣ್ಣು  ಮಗು ಎಂದು, ಕೊರಳಿಗೆ ನೇಣು ಬಿಗಿದು ಶೌಚಾಲಯದ ಕಿಟಕಿಯಿಂದ ಎಸೆದರು!

chinthamani
03/07/2021

ಚಿಕ್ಕಬಳ್ಳಾಪುರ: ಹೆಣ್ಣು ಮಗು ಎನ್ನುವ ಕಾರಣಕ್ಕಾಗಿ ಮಗುವಿನ ಕೊರಳಿಗೆ ನೇಣು ಬಿಗಿದು ಕಿಟಕಿಯಲ್ಲಿ ಎಸೆದಿರುವ ಅಮಾನವೀಯ ಘಟನೆ  ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ ಶೌಚಾಲಯ ಸ್ವಚ್ಛಗೊಳಿಸಲು ಬಂದ ವೇಳೆ ಕಿಟಕಿಯಲ್ಲಿ ಶಿಶುವನ್ನು ಎಸೆದಿರುವುದು ಕಂಡು ಬಂದಿದೆ. ತಕ್ಷಣವೇ ಚಿಕಿತ್ಸೆ ಕೊಡಿಸಲು ವೈದ್ಯರು ಮುಂದಾದರಾದರೂ ಆ ವೇಳೆಗೆ ಮಗು ಮೃತಪಟ್ಟಿತ್ತು ಎಂದು ತಿಳಿದು ಬಂದಿದೆ.

ಶಿಶುವಿನ ಕತ್ತಿಗೆ ಚೈನ್ ಹುರಿಯಿಂದ ನೇಣು ಬಿಗಿದು ಶೌಚಾಲಯದ ಕಿಟಕಿಯಿಂದ ಎಸೆಯಲಾಗಿದ್ದು,  ಪರಿಣಾಮವಾಗಿ ಮಗು ಮೃತಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಶಿಶುವನ್ನು ಯಾರೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ಸಿಸಿ ಕ್ಯಾಮರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಮೂಲಕ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ