ಮಗುವಿನ ಪ್ರಾಣ ಉಳಿಸಲು ಹೋಗಿ ತನ್ನ ಪ್ರಾಣ ಕಳೆದುಕೊಂಡ ಯುವತಿ
30/04/2021
ತಿರುವನಂತಪುರಂ: ನದಿಗೆ ಬಿದ್ದ ನೆರೆಮನೆಯ ಮಗುವನ್ನು ಕಾಪಾಡಲು ಹೋದ ಯುವತಿಯೋರ್ವಳು ನೀರಿನಲ್ಲಿ ಮುಳುಗಿ ಪ್ರಾಣವನ್ನು ಕಳೆದುಕೊಂಡಿರುವ ದಾರುಣ ಘಟನೆ ಕೇರಳದ ಮಟ್ಟನೂರ್ ನಲ್ಲಿ ನಡೆದಿದೆ.
25 ವರ್ಷ ವಯಸ್ಸಿನ ಅಮೃತ ಮೃತಪಟ್ಟ ಯುವತಿಯಾಗಿದ್ದಾಳೆ. ನಿನ್ನೆ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ನೆರೆಮನೆಯ ಮಗುವಿನ ಪ್ರಾಣ ಉಳಿಸಲು ಅಮೃತ ನೀರಿಗೆ ಹಾರಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನೀರಿಗೆ ಬಿದ್ದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಮಗುವನ್ನು ಕಾಪಾಡಲು ನೀಡರಿಗೆ ಹಾರಿದ ಅಮೃತಾ ನೀರಿನ ಸುಳಿಯೊಳಗೆ ಸಿಲುಕಿ ಮೇಲೆ ಬರಲಾಗದೇ ಮೃತಪಟ್ಟಿದ್ದಾರೆ.
ಮೃತ ಅಮೃತಾ ಮುಂಡೇರಿ ಲ್ಯಾಬ್ ಸಹಾಯಕ ಸಿ ಬಾಲಕೃಷ್ಣನ್ ಅವರ ಪುತ್ರಿಯಾಗಿದ್ದಾರೆ. ಇವರನ್ನು ಕಳೆದುಕೊಂಡಿದ್ದರಿಂದ ಕುಟುಂಬ ಶೋಕಸಾಗರದಲ್ಲಿ ಮುಳುಗಿದ್ದು, ಮೌನ ಆವರಿಸಿದೆ.