ಮಗುವಿನ ತಾಯಿಗಾಗಿ ಆಕೆಯ 6 ವರ್ಷದ ಮಗನನ್ನೇ ಕೊಂದ ಪಾಪಿ! - Mahanayaka
4:03 AM Wednesday 11 - December 2024

ಮಗುವಿನ ತಾಯಿಗಾಗಿ ಆಕೆಯ 6 ವರ್ಷದ ಮಗನನ್ನೇ ಕೊಂದ ಪಾಪಿ!

ramanji
29/03/2021

ಚಿಕ್ಕಬಳ್ಳಾಪುರ: 6 ವರ್ಷದ ಮಗು ಹತ್ಯೆಯಾಗಿರುವ ಘಟನೆ ಗೌರಿಬಿದನೂರು ತಾಲೂಕಿನಲ್ಲಿ ಸಂಭವಿಸಿದ್ದು, ತಾಯಿಯ ಪರಿಚಿತನೇ ಬಾಲಕನನ್ನು ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.

6 ವರ್ಷ ವಯಸ್ಸಿನ ವಿಷ್ಣುವರ್ಧನ್ ಎಂಬ ಬಾಲಕ ಮಾರ್ಚ್ 16ರಂದು ನಾಪತ್ತೆಯಾಗಿದ್ದ. ಎಲ್ಲಿ ಹುಡುಕಿದರೂ ಬಾಲಕ ಪತ್ತೆಯಾಗಿರಲಿಲ್ಲ. ಇದರಿಮದಾಗಿ ಪಾಲಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಈ ಪ್ರಕರಣದ ತನಿಖೆ ನಡೆಸುತ್ತಾ ಹೋದ ಪೊಲೀಸರಿಗೆ ಮಗುವಿನ ತಾಯಿ ಪ್ರಭಾವತಿಗೆ  ರಾಮಾಂಜಿ ಎಂಬ ವ್ಯಕ್ತಿಯ ಪರಿಚಯವಿತ್ತು ಎನ್ನುವುದು ತಿಳಿದು ಬಂದಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ಬಾಯ್ಬಿಟ್ಟಿದ್ದಾನೆ.

ಪ್ರಭಾವತಿ ಹಾಗೂ ರಾಮಾಂಜಿಗೆ ಪರಿಚಯವಿತ್ತು. ಆದರೆ ಇವರಿಬ್ಬರ ನಡುವೆ ಇತ್ತೀಚೆಗೆ ವೈಮನಸ್ಸು ಉಂಟಾಗಿತ್ತು. ಇದಾದ ಬಳಿಕ ಪ್ರಭಾವತಿ ರಾಮಾಂಜಿಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಕೋಪಗೊಂಡ ಆತ ಆಕೆಯ ಮಗನನ್ನು ಅಪಹರಿಸಿದ್ದು, ಬಳಿಕ ಆಕೆಯನ್ನು ಓಲೈಸಬಹುದು ಎಂದು ಅಂದುಕೊಂಡಿದ್ದ.

ಆದರೆ ರಾಮಾಂಜಿಯ ಲೆಕ್ಕಚಾರಗಳು ಉಲ್ಟಾಪಲ್ಟಾ ಆಗಿದ್ದು, ಇತ್ತ ಪ್ರಭಾವತಿ  ಮತ್ತು ಆಕೆಯ ಪತಿ ನಾರಾಯಣಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ರಾಮಾಂಜಿ ಕೋಪಗೊಂಡು ಮಗುವಿನ ಕತ್ತು ಹಿಸುಕಿಕೊಂದು ಮೂಟೆಯಲ್ಲಿ ತುಂಬಿಸಿ ಸಾದರ್ಲಹಳ್ಳಿ ಬಳಿಯಲ್ಲಿ ಎಸೆದಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ