ಮಗುವನ್ನು ಹತ್ಯೆಗೈದು ಶ್ವಾಸಕೋಶ ಕಳವು | ತನಿಖೆಯ ವೇಳೆ ಬೆಳಕಿಗೆ ಬಂತು ವಿಲಕ್ಷಣ ಘಟನೆಯ ಸತ್ಯಾಂಶ
ಉತ್ತರಪ್ರದೇಶ: ಆರು ವರ್ಷದ ಬಾಲಕಿಯ ಮೃತದೇಹ ಛಿದ್ರವಾಗಿ ದೊರೆತ ನಂತರ, ಬಾಲಕಿಯನ್ನು ವಾಮಾಚಾರಕ್ಕಾಗಿ ಬಳಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂತಹ ಘಟನೆಗಳು ಕೇವಲ ಯೋಗಿ ಆದಿತ್ಯನಾಥ್ ಆಡಳಿತದಲ್ಲಿರುವ ಉತ್ತರಪ್ರದೇಶದಲ್ಲಿ ಮಾತ್ರವೇ ನಡೆಯಲು ಸಾಧ್ಯ.
ಕಾನ್ಪುರದ ಮಗು ದೀಪಾವಳಿಯಂದು ನಾಪತ್ತೆಯಾಗಿದ್ದಳು. ಆ ಬಳಿಕ ಆಕೆಯ ಮೃತದೇಹ ಇಲ್ಲಿನ ಕಾಡೊಂದರಲ್ಲಿ ಪತ್ತೆಯಾಗಿದೆ. ಮಗುವಿನ ಹೊಟ್ಟೆಯನ್ನು ಛಿದ್ರಗೊಳಿಸಿ ಶ್ವಾಸಕೋಶವನ್ನು ತೆಗೆಯಲಾಗಿತ್ತು.
ಈ ಪ್ರಕರಣವನ್ನು ತನಿಖೆ ಮಾಡುತ್ತಾ ಹೋದ ಪೊಲೀಸರಿಗೆ, ದಂಪತಿ ಸೇರಿದಂತೆ ನಾಲ್ವರು ಆರೋಪಿಗಳು ಶಾಮೀಲಾಗಿರುವುದು ಪತ್ತೆಯಾಗಿದೆ. ಮಕ್ಕಳಿಲ್ಲದ ದಂಪತಿ ಮಕ್ಕಳನ್ನು ಪಡೆಯಬೇಕು ಎನ್ನುವ ಕಾರಣಕ್ಕಾಗಿ ಮಗುವಿನ ಶ್ವಾಸಕೋಶವನ್ನು ಮಂತ್ರವಾದಿ ಹೇಳಿದಂತೆ ತಂದುಕೊಟ್ಟಿದ್ದಾರೆ. ದೀಪಾವಳಿಯಂದು ಆಟವಾಡುತ್ತಿದ್ದ ಮಗುವನ್ನು ವ್ಯಕ್ತಿಯೋರ್ವ ಅಪಹರಿಸಿ ದಂಪತಿಗೆ ಒದಗಿಸಿದ್ದಾನೆ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಮಗು ನಾಪತ್ತೆಯಾದ ಬಳಿಕ ಸ್ಥಳೀಯರು ಸೇರಿಕೊಂಡು ತೀವ್ರ ಹುಡುಕಾಟ ನಡೆಸಿದ್ದರು. ಈ ವೇಳೆ ಹಳ್ಳಿಯಿಂದ ಒಂದು ಕಿ.ಮೀ. ದೂರದಲ್ಲಿರುವ ಕಾಡಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.