ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

04/04/2021
ಚಿಕ್ಕೋಡಿ: ಒಂದೂವರೆ ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಗಟೊಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
31 ವರ್ಷ ವಯಸ್ಸಿನ ಶಕುಂತಲಾ ಬ್ಯಾಳಿ ಹಾಗೂ ಅವರ ಪುತ್ರ ಸಾವಿಗೀಡಾದವರಾಗಿದ್ದಾರೆ. ಮನೆಯ ಬಳಿಯೇ ಇದ್ದ ಬಾವಿಗೆ ತಾಯಿ ಹಾಗೂ ಮಗು ಹಾರಿದ್ದು, ನೀರಲ್ಲಿ ಮುಳುಗಿ ಇಬ್ಬರು ಕೂಡ ಮೃತಪಟ್ಟಿದ್ದಾರೆ.
ಇನ್ನೂ ಬಾವಿಯಿಂದ ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಚಿಕ್ಕೋರಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.