ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಜೀವಂತವಾಗಿ ಪತ್ತೆ!
ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ಮಲಪ್ರಭಾ ನದಿಗೆ ಮಕ್ಕಳ ಜತೆ ನದಿಗೆ ಹಾರಿದ್ದ ಮಹಿಳೆ ಉಮಾದೇವಿ ಎಂಬವರು ಸಾವಿನಂಚಿನಿಂದ ಪಾರಾಗಿ ಬಂದಿದ್ದು, ಅಸ್ವಸ್ಥಗೊಂಡಿರುವ ಸ್ಥಿತಿಯಲ್ಲಿದ್ದ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿದ್ದ ಮಹಿಳೆ ಮುಳ್ಳಿನ ಪೊದೆಯೊಂದರಲ್ಲಿ ಸಿಲುಕಿದ್ದು, ಇದರಿಂದಾಗಿ ಅವರು ಸಾವಿನಿಂದ ಪಾರಾಗಿದ್ದಾರೆ. ಆದರೆ ಮಗು ನೀರು ಪಾಲಾಗಿದ್ದು, ಮಗುವಿಗಾಗಿ ಶೋಧ ನಡೆಸಲಾಗುತ್ತಿದೆ.
ರಾತ್ರಿಯಿಡಿ ನಡುಗುವ ಚಳಿಯಲ್ಲಿ ಗಿಡದಲ್ಲಿ ಸಿಲುಕಿದ್ದ ಉಮಾದೇವಿ ಎಂಟು ಗಂಟೆ ಹೋರಾಟದ ಬಳಿಕ ಬದುಕಿ ಬಂದಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆರು ಗಂಟೆ ಕಾರ್ಯಾಚಾರಣೆ ನಡೆಸಿ ಮಹಿಳೆಗಾಗಿ ಶೋಧ ಮಾಡಿದ್ದರು
ಇಂದು ನಸುಕಿನ ಜಾವ ಮಗುವಿನೊಂದಿಗೆ ನದಿಗೆ ಹಾರಿದ್ದ ತಾಯಿ ಕುರುವಿನಕೊಪ್ಪ ಗ್ರಾಮದ ಬಳಿ ಮುಳ್ಳಿನ ಗಿಡದಲ್ಲಿ ಸಿಲುಕಿದ್ದರು. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ನಿಮಗಿದು ಗೊತ್ತೇ? ಬೆಳ್ಳುಳ್ಳಿಯ ಬಳಕೆಯಿಂದ ನಮ್ಮ ದೇಹಕ್ಕೆ ಏನೇನು ಪ್ರಯೋಜನಗಳಿವೆ ?
ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದರೆ, ಮಹಿಳೆಯರ ಸಾಲ ಮನ್ನಾ | ಅನಿತಾ ಕುಮಾರಸ್ವಾಮಿ
ಆಟವಾಡುತ್ತಿದ್ದ ಮಗುವಿನ ಮೇಲೆ ಹತ್ತಿದ ಕಾರು: ಮಗುವಿನ ದಾರುಣ ಸಾವು
ರಸ್ತೆ ಕಾಮಗಾರಿಯ ಗುಂಡಿಗೆ ಬಿದ್ದು ಬಿಜೆಪಿ ಮುಖಂಡ ದಾರುಣ ಸಾವು
ವ್ಯಕ್ತಿಗೆ ಕೊವಿಡ್ ಲಸಿಕೆಯ ಬದಲು ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡಿದ ನರ್ಸ್!
“ದೇವಸ್ಥಾನ ತೆರವಿಗೆ ಆದೇಶ ನೀಡಿದ್ದು ಜಿಲ್ಲಾಧಿಕಾರಿ, ವರ್ಗಾವಣೆಯಾಗಿದ್ದು ತಹಶೀಲ್ದಾರ್!”