ಚೈತ್ರಾ ವಂಚನೆ ಪ್ರಕರಣ: ವಿಶ್ವನಾಥ್ ಜೀಯನ್ನು ಭೇಟಿ ಮಾಡಿದ್ದ ಸ್ಥಳ ಮಹಜರು
19/09/2023
ಚಿಕ್ಕಮಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದ ಬಾಬು ಪೂಜಾರಿ ವಿಶ್ವನಾಥ್ ಜೀಯನ್ನು ಭೇಟಿ ಮಾಡಿದ್ದ ಪ್ರವಾಸಿ ಮಂದಿರಕ್ಕೆ ಗಗನ್ ಕಡೂರುನನ್ನು ಸಿಸಿಬಿ ಪೊಲೀಸರು ಕರೆ ತಂದು ಸ್ಥಳ ಮಹಜರು ಮಾಡಿದರು.
ಚಿಕ್ಕಮಗಳೂರು ಐಬಿಯಲ್ಲಿ ಗೋವಿಂದ ಬಾಬು ಪೂಜಾರಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ವಿಶ್ವನಾಥ್ ಜೀಯನ್ನು ಪರಿಚಯ ಮಾಡಲಾಗಿತ್ತು ಎಂದು ಗೋವಿಂದ ಬಾಬು ಪೂಜಾರಿ ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜಾರಿಗೆ ಗಗನ್ ಕಡೂರುನನ್ನು ಪೊಲೀಸರು ಕರೆತಂದಿದ್ದಾರೆ. ಪ್ರವಾಸಿ ಮಂದಿರದ ಬಳಿಕ ಗಗನ್ ಕಡೂರುನನ್ನು ಆತನ ಮನೆಗೆ ಕೂಡ ಸಿಸಿಬಿ ಪೊಲೀಸರು ಕರೆದೊಯ್ಯಲಿದ್ದಾರೆ.