ಮಹಾನಾಯಕ" ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ:  ಮಹಾಸಂಚಿಕೆ(ಎಪಿಸೋಡ್):62 - Mahanayaka

ಮಹಾನಾಯಕ” ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ:  ಮಹಾಸಂಚಿಕೆ(ಎಪಿಸೋಡ್):62

09/02/2021

ವಾರ :ಶನಿವಾರ

ದಿನಾಂಕ :06/02/2021

61ನೇ ಸಂಚಿಕೆಯಲ್ಲಿ  ರಾಮಜೀಯವರಿಗೆ ಅವರು ಕೆಲಸ ಮಾಡಿಸಿಕೊಳ್ಳುತ್ತಿರುವ ಮಾಲೀಕರು ಉನ್ನತ, ಹುದ್ದೆಗೆ ಹಾಗೂ ದುಪ್ಪಟ್ಟು ಸಂಬಳ ಪಡೆಯುವ ಅವಕಾಶ ಕೊಟ್ಟಿದ್ದಾರೆ, ಇನ್ನೊಂದು ಖುಷಿಯ ವಿಚಾರವಾದರೆ ಭೀಮ ಅಕ್ಕ ಮಾದ್ವಿ ಹಾಗೂ ಇನ್ನೊಬ್ಬಳು ಹೆಣ್ಣುಮಗಳಿಗೆ ಪುನಾಗೆ ಆಶ್ರಮಕ್ಕೆ ಕಳುಹಿಸಿ ಅವರಿಗೆ ಮರುಜೀವ ಕಲ್ಪಿಸಿಕೊಟ್ಟರೂ ಕೂಡ, ಅವರ ವರ್ಗದವರೇ ಆದ ಇನ್ನಿತರ ವಿಧವೆಯರು ಭೀಮನಿಗೆ ಕಪ್ಪು ಮಸಿ ಹಾಕಿ ಖುಷಿ ಪಡುತ್ತಾರೆ. ಮನುವಾದಿಗಳು ಭೀಮರಾವನ ಮನೆಗೆ ಬಂದು ಗಲಾಟೆ ಮಾಡುವಾಗ ಮತ್ತೊಮ್ಮೆ ಪುರಂಜನ ಪೊಲೀಸರೊಡನೆ  ಆಗಮಿಸಿ ಆಗುವ ಅನಾಹುತ ತಪ್ಪಿಸುತ್ತಾರೆ. ಈಗ  ಸಹಸ್ರಪತಿ ಎಂಬ ಆಗರ್ಭ್ ಶ್ರೀಮಂತರ ಮನೆಗೆ ಸಂಗೀತ ಪ್ರಸ್ತುತ ಪಡಿಸಲು ಹೋಗಿರುವ ಬಾಲಾ ಹಾಗೂ ದೃವ ಇಬ್ಬರೂ ಅಲ್ಲಿಗೆ ಬಂದಿರುವ ಬ್ರಿಟಿಷ್ ಅಧಿಕಾರಿಗಳಿಗೆ ಮೆಚ್ಚುಗೆಯಾಗುತ್ತಾರೆ. ಬ್ರಿಟಿಷ್ ಬ್ರಾಂಡ್ ಕಂಪನಿಗೆ ಒಬ್ಬರು ಮಾತ್ರ ಬೇಕು ಹಾಗಾಗಿ ಇಬ್ಬರಲ್ಲಿ ಒಬ್ಬರನ್ನು  ನಾಳೆಯೇ ಸ್ಪರ್ಧೆ ಮಾಡಿ ಆಯ್ಕೆ ಮಾಡೋಣ ಎಂದು ಹೇಳುವಲ್ಲಿಗೆ ಧಾರಾವಾಹಿ ಮುಗಿದಿತ್ತು. ಬನ್ನಿ ಹಾಗಾದ್ರೆ ಇವತ್ತಿನ ಸಂಚಿಕೆಯ ಬಗ್ಗೆ ತಿಳಿದುಕೊಳ್ಳೋಣ.

ಧಾರಾವಾಹಿ ಪ್ರಾರಂಭವಾಗುತ್ತಿದ್ದಂತೆ ದೃವ ಬಲರಾಮನಿಗೆ “ನೀನೇ ಆಯ್ಕೆಯಾಗ್ತಿಯ ಬಾಲಣ್ಣ, ನೀನು ನನಗಿಂತ ಚನ್ನಾಗಿ ಸಂಗೀತ ನುಡಸ್ತೀಯ”. ಎಂದು ಹೇಳುತ್ತಾನೆ.  ರಾಮಜೀಯವರು “ನೀನು ಚನ್ನಾಗಿ ಸಂಗೀತ ನುಡಿಸುವುದನ್ನು ಅಭ್ಯಾಸ ಮಾಡು ಆಯ್ಕೆಯಾದರೆ ಖಂಡಿತ ಹೋಗುವಿಯಂತೆ, ಅವಕಾಶ ಬಂದಾಗ ಕೈ ಕಟ್ಟಿ ಕುಳಿತುಕೊಳ್ಳಬಾರದು” ಎಂದು ಹೇಳುತ್ತಾರೆ. ಈಗ ಬಾಲಾ “ಅಂದ್ರೇ ನಾನು ಆಯ್ಕೆಯಾಗಿ ಹೋಗುವುದು ಅಪ್ಪನಿಗೆ ಇಷ್ಟವಿಲ್ಲ.  ನಾನು ಸರಿಯಾಗಿ ಸಂಗೀತ ನುಡಿಸುವುದಿಲ್ಲ ಎಂದು ನೀವೂ ಹೇಳುತ್ತಿದ್ದೀರಿ”.  ಎಂದು ತಪ್ಪಾಗಿ ಅರ್ಥಯಿಸಿಕೊಂಡು ಹೇಳುತ್ತಾನೆ.

 

ಈಗ ಮಂಗೇಶ ಶೇಡಜಿಗೆ ತಲೆ ತುಂಬುತ್ತಿದ್ದಾನೆ  ತಲೆಯಲ್ಲಿ ಹುಳ ಬಿಡುತ್ತಿದ್ದಾನೆ. ಅದೇನೆಂದರೆ “ಆಚಾರ್ಯರೇ, ನಿಮ್ಮ ಮಗ ದೃವ ಬ್ರಿಟಿಷ್ ಬ್ರಾಂಡ್ ಕಂಪನಿಯಲ್ಲಿ ಆಯ್ಕೆಯಾಗುವಂತೆ ಮಾಡಿ. ಅವಾಗ ನಿಮಗೂ ಹೆಚ್ಚಿನ ಗೌರವ ಸಿಗುತ್ತದೆ. ನಿಮಗೂ ಇನ್ನಷ್ಟು  ಮರ್ಯಾದೆ, ನಿಮ್ಮ ಹವಾ ಹೆಚ್ಚುತ್ತದೆ. ಇಷ್ಟೆಲ್ಲ ಹೇಳಿದರೂ ಶೇಡಜಿ “ಏನೇ ಆದ್ರೂ ಡೋಲು ಬಡಿಯುವ ಕೆಲಸ ಕೀಳೇ ಅಲ್ಲ್ವಾ..?” ಎಂದು ಕೇಳುತ್ತಾನೆ. “ಅಯ್ಯೋ ಅದೂ ಹಾಗಲ್ಲ. ಬ್ರಿಟಿಷ ಕಂಪನಿಯಲ್ಲಿ ನಿಮ್ಮ ಮಗ ಆಯ್ಕೆ ಆಗುವುದೆಂದರೆ ಅದಕ್ಕೆ ಸಿಗುವ ತೂಕವೇ ಬೇರೆ, ನಿಮಗೂ  ಕೂಡ ಆಗಾಗ ಬ್ರಿಟಿಷರ ಜೊತೆಗೆ ಹೋಗಿ ಬರಲು ಅವಕಾಶ ಸಿಕ್ಕಂತಾಗುತ್ತದೆ. ಅದೂ ಅಲ್ಲದೆ ಬ್ರಿಟಿಷ ಬ್ರಾಂಡ್ ನಮ್ಮಗಳ ವಾದ್ಯಗಳ ತರಹ ಅಲ್ಲ. ಅವುಗಳಿಗೆ ತುಂಬಾ ಡಿಮ್ಯಾಂಡ್ ಇದೆ. ಈಗ ಸಾವಿರಾರು ವಿಧದ ಹೂವುಗಳಿರುತ್ತವೆ. ಅವುಗಳಲ್ಲಿ ಶುದ್ದವಾಗಿರುವುದನ್ನು  ಮಾತ್ರ ದೇವರ ಪಾದಕ್ಕೆ ಇಡುತ್ತೇವೆ. ಹಂಗೆನೇ ಇದೂ ಕೂಡ.ಅರ್ಥ ಮಾಡಿಕೊಳ್ಳಿ ಏನಾದ್ರೂ ಮಾಡಿ ನಿಮ್ಮ ಮಗ ಆಯ್ಕೆಯಾಗುವಂಗೆ ನೋಡಿಕೊಳ್ಳಿ”.  ಹೀಗೆ ಹೇಳಿದಾಗ ಶೇಡಜಿ  ಈಗ ತನ್ನ ಮಗನನ್ನು ಬ್ರಿಟಿಷ್ ಬ್ರಾಂಡ್ಗೆ ಸೇರಿಸಬೇಕೆಂದು ಯೋಚಿಸುತ್ತಾನೆ.

ಇತ್ತ ಮನೆಯಲ್ಲಿ ಎಲ್ಲರೂ ಇದ್ದಾರೆ.ಬಾಲಾ ಯೋಚನೆಯಲ್ಲಿ ಇದ್ದಾನೆ. ರಾಮಜೀಯವರು ಅವನಲ್ಲಿ ಬಂದು “”ನಿನ್ನಲ್ಲಿ ನಿನಗೆ ಆತ್ಮವಿಶ್ವಾಸ ಇದ್ದರೆ ಕೂಡಲೇ ಕಾರ್ಯಗತನಾಗು ನಾಳೇನೇ ಸ್ಪರ್ಧೆ ಇದೆ. ಚನ್ನಾಗಿ ಅಭ್ಯಾಸ ಮಾಡು. ನನಗೆ ನಿನ್ನ ಆಯ್ಕೆಯ ಮೇಲೆ ಕೋಪ ಇದೆ. ಆದ್ರೆ  ನಿನ್ನ ಮೇಲೆ ಅಲ್ಲ “.ಎಂದು ಹೇಳುತ್ತಾರೆ. ಈಗ ಬಾಲಾ “ಆಯಿತು ಅಪ್ಪ ನಾನು ನಾಳೆ ಗೆದ್ದು ತೋರಿಸ್ತೀನಿ. ದೃವ ನೀನು ಕೂಡ ಚನ್ನಾಗಿ ಸ್ಪರ್ಧೆ ಮಾಡು “ಎನ್ನುತ್ತಾನೆ. ಈಗ ದೃವ “ಆಯ್ತು ಬಾಲಣ್ಣ”. ಎಂದು  ಹೇಳುತ್ತಾನೆ. ಈಗ ಭೀಮರಾವ “ದೃವ  ಕೂಡ ಗೆಲ್ಲೋಕೆ ಅಂತಾ ಹಾಡಬೇಕು. ಆವಾಗಲೇ ಅಪ್ಪನಿಗೆ ಖುಷಿಯಾಗುತ್ತದೆ. ನೋಡೋಣ ನನ್ನ ಮೇಲೆ ಪ್ರಮಾಣ ಮಾಡಿ ಹೇಳು “ಎನ್ನುತ್ತಾನೆ. ಈಗ ದೃವ ಭೀಮನ ತಲೆ ಮುಟ್ಟಿ “ಆಯಿತು ಭೀಮ್ ನಾನು ಚನ್ನಾಗಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ “. ಎನ್ನುತ್ತಾನೆ. ಮನೆಯಲ್ಲಿ ಇಬ್ಬರೂ ಸಂಗೀತ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಅದನ್ನೂ ರಾಮಜೀಯವರು ಕೂಡ ನೋಡುತ್ತಿದ್ದಾರೆ. ಭೀಮಾಭಾಯಿ “ಇಷ್ಟು ಆಸಕ್ತಿಯಿಂದ ಈಗ ನೋಡುತ್ತಿದ್ದವ್ರು ಅವಾಗ ಸಮಾರಂಭದಲ್ಲಿ ಬಂದು ನೋಡಿದ್ದರೆ ಬಾಲಾ ಇನ್ನೂ ಖುಷಿ ಪಡುತ್ತಿದ್ದನು. ನೋಡಿ ಈಗ ಎಷ್ಟು ಆಸಕ್ತಿ ತೋರಿಸುತ್ತಿದ್ದಾರೆ.”. ಎಂದು ಮೀರಾಬಾಯಿಗೆ ಹೇಳುತ್ತಾರೆ. ಮೀರಾ ಕೂಡ “ಇದನ್ನೇ ಪುತ್ರ ವಾತ್ಸಲ್ಯ ಎಂದು ಕರೆಯುತ್ತಾರೆ. ಎಷ್ಟೇ ಆಗಲಿ ಅಪ್ಪ ಮಾಡುವ ಕೆಲಸ ಇದು “ಎನ್ನುವರು. ಈಗ ಅಮ್ಮನ ಮಡಿಲಲ್ಲಿ ಕುಳಿತಿರುವ ಭೀಮ “ಅಮ್ಮ ನಿಮಗೊಂದು ವಿಷಯ ಹೇಳಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಅಪ್ಪ ಕೂಡ ಬಂದಿದ್ದರು”. ಎಂದು ಹೇಳುತ್ತಾನೆ. ಈಗ ಭೀಮಾಬಾಯಿಯವರು “ಮದುವೆಯಾಗಿ ಇಷ್ಟು ವರ್ಷ ಆದರೂ ಅವರನ್ನು ಅರ್ಥ ಮಾಡಿಕೊಳ್ಳೋಕೆ ಆಗಲಿಲ್ಲ ನನಗೆ. ಅವರು ಮಕ್ಕಳ ಬಗ್ಗೆ ಹಾಗೂ ನನ್ನ ಬಗ್ಗೆಯೂ ಯಾವಾಗಲೂ ಚಿಂತೆ ಮಾಡುತ್ತಾರೆ. ಎಂದು ಹೇಳುತ್ತಾರೆ.

ಈಗ ಬಾಲನೊಂದಿಗೆ ಅಭ್ಯಾಸ ಮುಗಿಸಿದ ದೃವ ತನ್ನ ಮನೆಗೆ ಹೋಗಿ “ನಾಳೆ ಬೇಗ ಎದ್ದೇಳಬೇಕು.”. ಎಂದುಕೊಳ್ಳುತ್ತಿರುವಾಗ, ಅವನ ಹಿಂದಿನಿಂದಲೇ, ನಿದಾನವಾಗಿ, ಸದ್ದು ಮಾಡದೇ ಮಂಗೇಶ್ ಹಾಗೂ ಅಪ್ಪ ಶೇಡಜಿ ಬರುತ್ತಾರೆ. ಶೇಡಜಿ “ದೃವ ನಾಡಿದ್ದು ಹುಟ್ಟುವ ಸೂರ್ಯನನ್ನು ನೀನು ಇಲ್ಲಿ ನೋಡಬಾರದು ಬಾಂಬೆಯಲ್ಲಿ ನೋಡಬೇಕು. ಇಲ್ಲಿಯವರೆಗೂ ನಾನು ನಿನಗೆ ಮಾಡಿರುವ ಎಲ್ಲ ತಪ್ಪುಗಳಿಗೆ ಕೈ ಮುಗಿದು ಕ್ಷಮೆ ಕೇಳುತ್ತೇನೆ. ನೀನು ಬದುಕಿರುವಾಗಲೇ ನಿನ್ನ ಶ್ರದ್ದಾ ಕಾರ್ಯ ಮಾಡಿದವನೂ ನಾನು ಅದಕ್ಕೆ ನೀನು ಕೂಡ ನಾಳೆ ಬೆಳಿಗ್ಗೆ ಎದ್ದು ನನ್ನ ಶ್ರದ್ದಾ ಮಾಡಿ ಆಮೇಲೆ ಡೋಲು ಬಾರಿಸಲು ಹೋಗು. ಆದ್ರೆ ನೀನು ಗೆಲ್ಲಲೇಬೇಕು. ನೀನು ಗೆದ್ದ ಮೇಲೆ ನೀನು ಹೇಗೆ ಹೇಳುತ್ತಿಯೋ ಹಾಗೇ ನಾನು ಕೇಳುತ್ತೇನೆ” ಎಂದು ಹೇಳುತ್ತಾನೆ. ಈಗ ದೃವ “ಆಯಿತು ಅಪ್ಪ ಹಾಗೆಯೇ ಮಾಡುತ್ತೇನೆ “ಎಂದು ಹೇಳುತ್ತಾನೆ. ಮಂಗೇಶ್ ಹತ್ತಿರ ಬಂದು “ದೃವ ನೀನು ನಾಳೆ ಗೆಲ್ಲಬೇಕಾದ್ರೆ ನಿನಗಿಂತ ಚನ್ನಾಗಿ ಡೋಲು ಬಾರಿಸುವ ಬಾಲಾನಿಗೆ ಈ ಔಷದಿ ಕುಡಿಸು, ಆಮೇಲೆ ಎರಡು ದಿವಸ ಆತ ಎದ್ದೇಳುವುದಿಲ್ಲ. ಆಮೇಲೆ ಬ್ರಿಟಿಷ್ ಬ್ರಾಂಡ್ ಗೆ ನೀನೇ ಆಯ್ಕೆಯಾಗುತ್ತೀಯಾ”. ಎಂದು ಹೇಳಿ ಔಷದಿ  ಕೊಡುತ್ತಾನೆ. ಈಗ ಔಷದಿ  ಪಡೆದ ದೃವ ತಾನೇ ಅದನ್ನೂ ಎತ್ತಿಕೊಂಡು ಗಟಗಟನೆ ಕುಡಿದು ಬಿಡುತ್ತಾನೆ. ಮಂಗೇಶ್ ಶೇಡಜಿ ಗಾಬರಿಯಾಗುತ್ತಾರೆ. “ಇದೇನೂ ಮಾಡಿದೆ ದೃವ ನಡೆ ವೈದ್ಯರಲ್ಲಿ ಹೋಗೋಣ”.  ಎನ್ನುತ್ತಾರೆ. ಈಗ ದೃವ ಹೊರಗೆ ಓಡಿ “ರಾಮಜಿ ಚಿಕ್ಕಪ್ಪ, ಭೀಮ, ಬಾಲಾ..”ಎಂದೆಲ್ಲ ಕೂಗುತ್ತ ಅವರ ಮನೆಯ ಒಳಗೆ ಓಡುತ್ತಾನೆ. ಈಗ ರಾಮಜೀಯವರೂ ಹಾಗೂ ಎಲ್ಲರೂ ಏನಾಯಿತು ಎಂದು ದೃವನನ್ನು ಕೇಳಿದಾಗ ನಡೆದ ಎಲ್ಲ ವಿಷಯ ಹೇಳುತ್ತಾನೆ., ಸುಸ್ತು ಆಗಿದ್ದಾನೆ. ಕೂಡಲೇ ರಾಮಜೀಯವರು ಹೇಳಿದಂತೆ, ಭೀಮಾಬಾಯಿ ಹಾಗೂ ಎಲ್ಲರೂ ಉಪ್ಪು ನೀರು ಮಾಡಿ ದೃವನಿಗೆ ಕುಡಿಸಿ, ಔಷದಿ ಕೊಡುತ್ತಾರೆ. ಮೊದಲು ದೃವ ಬೇಡ ನನಗೆ ಎಂದು ಹಠ ಮಾಡಿದಾಗ ಭೀಮ “ದೃವ ನೀನು ಕುಡಿಯದಿದ್ದರೆ ನಮ್ಮ ಸ್ನೇಹದ ಮೇಲೆ ಆಣೆ”.ಎಂದು ಹೇಳಿದಾಗ ದೃವ ಕುಡಿಯುತ್ತಾನೆ. ಈಗ ದ್ರುವನನ್ನು ಎಲ್ಲರೂ ಮನೆಯೊಳಗೇ ಕರೆದುಕೊಂಡು ಹೋಗುತ್ತಾರೆ. ಹೊರಗೆ ನಿಂತ ಶೇಡಜಿ “ನನ್ನ ಮಗನಿಗೆ ಏನಾಯಿತು ಹೇಳಿ ಎಂದು ಕಿರುಚುತ್ತಾನೆ. ರಾಮಜೀಯವರು “ಚಿದಾನಂದರೆ ನಿಮಗೆ ಒಂದು ಗಾದೆ ಮಾತು ನೆನಪಿರಬೇಕು ತಾವೂ ತೋಡಿದ ಗುಂಡಿಯಲ್ಲಿ ತಾವೇ ಬಿದ್ದುಕೊಂಡಿದ್ದು. ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕು. ಮತ್ತೂ ನಮ್ಮಲ್ಲಿರುವ ವಿಷವನ್ನು ಮಕ್ಕಳಿಗೆ ತುಂಬಬಾರದು”. ಎಂದೆಲ್ಲ ಹೇಳುವಾಗ ಮಂಗೇಶ್ “ನಿನ್ನ ಬುದ್ದಿವಾದ ನಮಗೆ ಬೇಕಾಗಿಲ್ಲ. ನಮ್ಮ  ದೃವನನ್ನು ನಿನ್ನ ಬಳಿ ಇಟ್ಟುಕೊಂಡು ನಮಗೆ ಆಟ ಆಡಿಸುತ್ತಿದ್ದೀಯ” ಎಂದು ಹೇಳುತ್ತಾನೆ. ಈಗ ರಾಮಜೀಯವರು “ನಾನು ನಿಮಗೆ ಅದನ್ನೇ ಹೇಳುತ್ತೇನೆ ಆದ್ರೂ ನೀವೂ ಅರ್ಥ ಮಾಡಿಕೊಳ್ಳಲಿಲ್ಲ.ನಿಮ್ಮ ಮಗ ಚೇತರಿಸಿಕೊಳ್ಳುತ್ತಾನೆ. ನೋಡಿ ಚಿದಾನಂದರೇ, ಆದರೂ ನನಗೊಂದು ಖುಷಿಯಾಯಿತು ಅದೇನೆಂದರೆ ನೀವೂ ಏನೆಲ್ಲಾ ಮಾಡಿದರೂ ಕೂಡ ಇನ್ನೂ ನಿಮ್ಮಲ್ಲಿ ಪುತ್ರ ವಾತ್ಸಲ್ಯ ಜೀವಂತವಾಗಿದೆಯಲ್ಲ ಅದಕ್ಕೆ ಖುಷಿಯಾಯಿತು”. ಹೀಗೆ ಹೇಳಿ ಅವರು ಒಳಗೆ ಹೋಗುತ್ತಾರೆ. ಈಗ ಮಂಗೇಶ್ “ನೋಡಿದಿರಾ ರಾಮಜೀಗೆ ಎಷ್ಟು ದುರಹಂಕಾರ. ಆದ್ರೆ ಶೇಡಜಿಯವರೇ ನಿಮ್ಮ ಮಗ ಹೇಗಾದ್ರು ಮಾಡಿ ಇದರಲ್ಲಿ ಗೆಲ್ಲುವಂತೆ ನೀವೂ ನೋಡಿಕೊಳ್ಳಬೇಕು “. ಎಂದು ಹೇಳುತ್ತಾರೆ. ಶೇಡಜಿ ಕೂಡ “ಹೌದು ಮಂಗೇಶ್ ನನ್ನ ಮಗನ ಗೆಲುವು ತುಂಬಾನೇ ಮುಖ್ಯ”.  ಎಂದು ಮನಸ್ಸಿನಲ್ಲಿ ಮತ್ತೊಂದು ದುರಾಲೋಚನೆ ಹಾಕಿಕೊಳ್ಳುತ್ತಾನೆ. ಏಕೆಂದರೆ ಮನುವಾದಿ ಅಲ್ಲವೇ.?!!!

ಈಗ ದೃವನಿಗೆ  ಮನೆಯಲ್ಲಿ ಭೀಮಾಭಾಯಿ ಹಾಗೂ ಎಲ್ಲರೂ ಸೇರಿ ಗುಣಮುಖನಾಗಲು ಔಷದಿ ಕುಡಿಸುತ್ತಿದ್ದಾರೆ. ಈಗಾಗಲೇ ದೃವ ಸ್ವಲ್ಪ  ಹುಷಾರಾಗಿದ್ದಾನೆ. ದೃವ ಔಷದಿ ಕುಡಿದು ಕಹಿ ಎಂದು ಹೇಳುತ್ತಾನೆ. ಆಗ ರಾಮಜೀಯವರು “ಔಷದಿ ಯಾವಾಗಲೂ ಕಹಿಯೇ ಆಗಿರುತ್ತದೆ. ಗಟ್ಟಿ ಮನಸ್ಸು ಮಾಡಿ ಕುಡಿ “ಎಂದು ಹೇಳುತ್ತಾರೆ. ಎಲ್ಲರ ಪ್ರೀತಿ ಕಂಡು ದೃವ ಬಾವುಕನಗುತ್ತಾನೆ. ಈಗ ಭೀಮ “ದೃವ ನನ್ನನ್ನು ಕ್ಷಮಿಸಿ ಬಿಡು. ನಿನ್ನೆ ನಿಮ್ಮಪ್ಪ ಮತ್ತೂ ಮಂಗೇಶ್ ನಿನ್ನಲ್ಲಿ ಬಂದು ನಿನಗೆ ಆ ಔಷದಿ ಕೊಟ್ಟಾಗ ನೀನೆಲ್ಲಿ ಬಾಲಣ್ಣನಿಗೆ ಕುಡಿಸ್ತೀಯಾ ಅಂದುಕೊಂಡು, ಈ ವಿಷಯ ಅಪ್ಪ ಹಾಗೂ ಎಲ್ಲರಿಗೂ ಹೇಳೋಣ ಅಂದುಕೊಂಡಿದ್ದೆ. ಇದು ನಾನು ನಿನ್ನ ಮೇಲೆ ಸಂಶಯ ಪಟ್ಟದ್ದು ತಪ್ಪು. ಅದಕ್ಕೆ ನನ್ನ ಮೇಲೆ ನನಗೆ ಬೇಸರ ಆಗುತ್ತಿದೆ”. ಎಂದು ದೃವನ ನಿಜವಾದ ಪ್ರೀತಿಗೆ ಶರಣು ಆಗಿದ್ದಾನೆ ಭೀಮ. ಈಗ ದೃವ “ಹೊಗಲಿ ಬಿಡು ಭೀಮ, ನಿನ್ನ ಜಾಗದಲ್ಲಿ ಯಾರೇ ಇದ್ದರೂ ಹಾಗೇನೇ ಯೋಚನೆ ಮಾಡುತ್ತಿದ್ದರು”. ಎಂದು ಹೇಳುತ್ತಾನೆ. ಆದ್ರೆ ಭೀಮ “ಇಲ್ಲ ನನ್ನ ಜಾಗದಲ್ಲಿ ನಾನೇ ಇದ್ದೇ ಆದರೂ ಹೀಗೆ ನಾನು ಯೋಚಿಸಬಾರದಿತ್ತು”. ಎಂದು ಕಣ್ಣೀರು ಹಾಕುತ್ತಾನೆ. ಈಗ ದೃವ “ಚಿಕ್ಕಪ್ಪ ನೀವಾದ್ರೂ ಭೀಮನಿಗೆ ಹೇಳಿ, ಎಲ್ಲ ತಲೆಯಲ್ಲಿ ಹಾಕಿಕೊಳ್ಳುತ್ತಾನೆ. ಇದು ಕಡಿಮೆಯಾಗುವ ಔಷದಿ ಇದ್ದರೆ ಇವನಿಗೆ ಕೊಡಿ ಎಂದು ಹೇಳುತ್ತಾನೆ. ಈಗ ರಾಮಜೀಯವರು “ಭೀಮ, ಇದರಿಂದ ನಿಮ್ಮ ಗೆಳೆತನ ಮತ್ತಷ್ಟು ಗಟ್ಟಿಯಾಗಿದೆ. ನಿಮ್ಮಿಬ್ಬರಲ್ಲಿನ ಅವಿಶ್ವಾಸಗಳು ದೂರಾದರೆ ಗೆಳೆತನ ಇನ್ನಷ್ಟು ಗಾಡವಾಗುತ್ತದೆ”. ಎಂದು ಹೇಳಿದಾಗ ಈಗ ಭೀಮರಾವ್ ದೃವನನ್ನು ಹೋಗಿ ತಬ್ಬಿಕೊಳ್ಳುತ್ತಾನೆ. ಅವರ ಸ್ನೇಹ ವಾತ್ಸಲ್ಯ ಕಂಡು ಎಲ್ಲರೂ ಮೂಕವಿಸ್ಮಿತರಾಗುತ್ತಾರೆ.

 

ಸ್ಪರ್ಧೆಗೆ ಸಂಗೀತ ಕಾರ್ಯಕ್ರಮ ನಡೆಸಲು ಎಲ್ಲ ತಯಾರಿ ನಡೆಯುತ್ತಿದೆ. ಸಹಸ್ರಪತಿ ಮನೆಯಲ್ಲಿ ಸಂಗೀತ ಸ್ಪರ್ಧೆ ಕಾರ್ಯಕ್ರಮದ ಎಲ್ಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇನ್ನಷ್ಟು ಜನಗಳನ್ನು ಸೇರಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.

ಈಗ ರಾಮಜೀಯವರ ಮನೆಯಲ್ಲಿ ಎಲ್ಲರೂ ಇದ್ದಾರೆ ದೃವ ಹಾಗೂ ಬಾಲನಿಗೆ,ಭೀಮಾಭಾಯಿ ಆಶೀರ್ವಾದ ಮಾಡುತ್ತ “ಇಬ್ಬರೂ ಚನ್ನಾಗಿ ಸಂಗೀತ ನುಡಿಸಿ ಎಂದು ಹಾರೈಸುತ್ತಾರೆ. ಸಿಹಿ ಕೂಡ ತಿನ್ನಿಸುತ್ತ ಈಗ ಅಳುತ್ತಿದ್ದಾರೆ. ದೃವ “ಯಾಕೆ ಚಿಕ್ಕಮ್ಮ ಕಣ್ಣೀರು ಹಾಕುತ್ತಿದ್ದೀರಿ ಏನಾಯಿತು..?” ಎಂದು ಕೇಳುತ್ತಾನೆ. ತಾಯಿ “ಏನಿಲ್ಲ ಮಕ್ಕಳೇ ನಾಳೆ ನಿಮ್ಮೊಬ್ಬರೊಳಗೆ ಯಾರಾದ್ರೂ ಒಬ್ಬರು ನಮ್ಮನೆಲ್ಲ ಬಿಟ್ಟು ಹೋಗುತ್ತಿರುವುದಕ್ಕೆ ದುಃಖವಾಗುತ್ತಿದೆ “. ಎಂದು ಅಳುತ್ತಾರೆ. ಈಗ ರಾಮಜೀಯವರು “ತಾಯಂದಿರು ಕಣ್ಣೀರು ಹಾಕುವುದರಿಂದ ಮಕ್ಕಳ ಮನಸ್ಸು ಕುಗ್ಗುತ್ತದೆ. ಗೆಲವಿನ ಓಟ ಬೆಳೆಸಲೇಬೇಕು ಅನ್ನುವುದಾದ್ರೆ ಮಕ್ಕಳು ಹೆತ್ತವರಿಂದ ದೂರ ಇರಬೇಕಾಗುತ್ತದೆ”. ಭೀಮರಾವ “ಹೌದು ಅಮ್ಮ ಬಾಲಣ್ಣ ಮತ್ತೂ ದೃವ ಯಾರೇ ಗೆದ್ದರೂ ಗೆಲವು ನಿಂದೆ ಆಗಿರುತ್ತದೆ”. ಈಗ ರಾಮಜಿಯವರು ಸಹಿತ ಎಲ್ಲರೂ ಆಶೀರ್ವಾದ ಮಾಡಿ ಇಬ್ಬರನ್ನು ಕಳಿಸಿ ಕೊಡುತ್ತಾರೆ. ಮತ್ತೂ ಅದೇ ಸಮಯಕ್ಕೆ ಪುರಂಜನ ಎರಡು ಹಾರಗಳೊಂದಿಗೆ ಅಲ್ಲಿಗೆ ಬಂದು “ನಿಮ್ಮಿಬ್ಬರ ಸಾಧನೆಗೆ ನಮ್ಮದು ಒಂದು ಸಣ್ಣ ಗೌರವ”. ಎಂದು ಹೇಳಿ ಇಬ್ಬರಿಗೂ ಹಾರ ಹಾಕುತ್ತಾರೆ.

ಈಗ ಮಂಗೇಶ್ ಹಾಗೂ ಶೇಡಜಿ ಮತ್ತೂ ಕಳ್ಳ ಪಂಡಿತ್, ದಾರಿಯಲ್ಲಿ ನಿಂತು ಸಹಸ್ರಪತಿ ಮನೆಗೆ ಹೋಗುವ ಮುನ್ನ ಯೋಚಿಸುತ್ತಿದ್ದಾರೆ. ಅಲ್ಲಿಗೆ ಪರೇಶ್ ಕೂಡ ಬರಿತಿದ್ದಾನೆ. ಮೋಹನ ಎಂಬಾತ ಬಂದು “ಆಚಾರ್ಯರೆ, ಸಹಸ್ರಪತಿ ಮನೆಯಲ್ಲಿ ಎಲ್ಲ ಜನರು ಸೇರುತ್ತಿದ್ದಾರೆ. ಇನ್ನೇನೂ ಬ್ರಿಟಿಷ್ ದೊರೆಗಳು ಬರುತ್ತಿದ್ದಾರಂತೆ. ಅದಕ್ಕೆ ಈ ಹಾರ ತಂದಿದೀನಿ ಬನ್ನಿ ಹೋಗೋಣ “.ಎನ್ನುತ್ತಾನೆ.  ಪರೇಶ್ “ಕೆಳಗೇರಿಯವರ ನೆರಳು ಕಂಡರೂ ಅಷ್ಟೂ ದೂರ ಹೋಗುತ್ತಿದ್ದವ್ರು ಈಗ ಅವರ ಜತೆಗೆ ನಿಮ್ಮಗಳ ತುಲನೆ ಮಾಡುತ್ತಿದ್ದೀರಿ ನಿಜಕ್ಕೂ ಖುಷಿಯಾಗುತ್ತಿದೆ, ಮತ್ತೂ ಹೇಗೂ ಮನಸ್ಸಿನಲ್ಲಿ ದುರಾಲೋಚನೆ ತುಂಬಿ ಕೊಂಡು ಹೋಗುತ್ತಿದ್ದೀರಿ. ಹಾಗಾಗಿ ಮುಖವನ್ನಾದರೂ ಚನ್ನಾಗಿ ಇಟ್ಟುಕೊಂಡು ಹೋಗಿ “ಎಂದು ವೆಂಗೆವಾಗಿ ಹೇಳುತ್ತಾನೆ. ಈಗ ಮೂವರು ಅವನನ್ನು ದುರುಗುಟ್ಟಿ ನೋಡುತ್ತಿದ್ದಾರೆ. ಮಂಗೇಶ್, ಪರೇಶ್ ನ ಕಡೆಗೆ ನೋಡುತ್ತಾ “ಆಚಾರ್ಯರೆ ನಿಯಮ ಮಾಡುವವರಿಗೆ ನಿಯಮ ಮುರಿಯುವುದು ಗೊತ್ತು ಎಂದು ಹೇಳಿ  ಅವರನ್ನು ಕರೆದುಕೊಂಡು ಅಲ್ಲಿಗೆ ಹೋಗುತ್ತಾನೆ.

ಸಹಸ್ರಪತಿ ಮನೆಯಲ್ಲಿ ಈಗ ಬ್ರಿಟಿಷ್ ದೊರೆಗಳು ಬಂದಿದ್ದಾರೆ.  ದೃವ ಹಾಗೂ ಬಾಲಾನನ್ನು ಕರೆದುಕೊಂಡು ರಾಮಜೀಯವರು ಹಾಗೂ ಎಲ್ಲರೂ ಅಲ್ಲಿಗೆ ಬರುತ್ತಾರೆ. ಈಗ ಸಹಸ್ರಪತಿ ಮನೆಯೊಳಗೇ ಇವರು ಬರುವುದನ್ನು ಮಂಗೇಶ್ ಹಾಗೂ ಇತರರು ತಡೆಯುತ್ತಾರೆ . ಪುರಂಜನ ನಾವು ಬ್ರಿಟಿಷ್ ಅಧಿಕಾರಿಗಳಿಗೆ ಸ್ವಾಗತ ಮಾಡಲು ಹಾರ ತಂದಿದೀವಿ”ಎಂದು ಹೇಳುತ್ತಾರೆ. ಹಾರ ಹಾಕೋಕೆ ನಾವು ಬಿಡೋದಿಲ್ಲ ಎನ್ನುತ್ತಾರೆ.ಮತ್ತೂ  ಬ್ರಿಟಿಷ್ ಅಧಿಕಾರಿ “ಏಕೆ  what happen..?” ಎಂದು ಕೇಳುತ್ತಾರೆ ಮಂಗೇಶ್ “ಏನಿಲ್ಲ ಸಾಹೇಬರೇ ಇವರು ಕೆಳಗೇರಿಯವರು ಡರ್ಟಿ ಪೀಪಲ್ ಎಂದು ಅರ್ಧ ಇಂಗ್ಲಿಷ್ ನಲ್ಲಿ ಹೇಳುತ್ತಾನೆ. ಆಗ ಭೀಮರಾವ “we are poor but not dirty sir “. ಎಂದು ಹೇಳುತ್ತಾನೆ. ಶೇಡಜಿ ಬಾಯಿ ಹಾಕಿ “ಸಾಹೇಬ್ರೆ ಇವರು ಒಳಗೆ ಬಂದ್ರೆ ನಮ್ಮವರು ಇಲ್ಲಿಂದ ಹೊರಗೆ ಹೋಗುತ್ತಾರೆ “. ಎಂದು ಹೇಳುತ್ತಾನೆ. ಈಗ ಬ್ರಿಟಿಷ್ ಅಧಿಕಾರಿ ಅವರು ತಂದಿರುವ ಹಾರಗಳನ್ನು ತನ್ನಲ್ಲಿ ತರಲು ಹೇಳುತ್ತಾನೆ. ಮತ್ತೂ ದೃವ ಹಾಗೂ ಬಾಲಾನನ್ನು ಮಾತ್ರ ಒಳಗೆ ವೇದಿಕೆಯ ಕಡೆಗೆ ಬಿಡುತ್ತಾರೆ.

 

ಬ್ರಿಟಿಷ್ ದೊರೆಯ ಆದೇಶದಂತೆ ಈಗ ಸ್ಪರ್ಧೆ ಶುರುವಾಗುತ್ತದೆ. ಬಾಲಾ ತುಂಬಾನೇ ಚನ್ನಾಗಿ ನುಡಿಸುತ್ತಿದ್ದಾನೆ. ರಾಮಜೀಯವರು ನಮ್ಮ ಬಾಲಾ ಅದರಲ್ಲಿಯೇ ಮುಳುಗಿ ಹೋಗಿದ್ದಾನೆ “ಎನ್ನುತ್ತಾರೆ. ಭೀಮ ಕೂಡ “ಅಪ್ಪ ನಾಳೆಯಿಂದ ನಾವು ಇಬ್ಬರೇ ಗಂಡು ಮಕ್ಕಳು ಮನೆಯಲ್ಲಿ ಇರಬೇಕು. ಬಾಲಾ ಗೆದ್ದೂ ಬಾಂಬೆಗೆ ಹೋಗುತ್ತಾನೆ “ಎಂದು ಹೇಳುತ್ತಾನೆ. ಆದರೆ ರಾಮಜೀಯವರು “ತೀರ್ಪಿಗೆ ಮುನ್ನ ನಾವೇ ಹೀಗೆ ಯೋಚಿಸಬಾರದು”. ಎಂದು ಹೇಳುತ್ತಾರೆ. ಈಗ ಸ್ಪರ್ಧೆ ಮುಗಿಯುತ್ತದೆ. ಮತ್ತೂ ಬ್ರಿಟಿಷ್ ಅಧಿಕಾರಿ ಇಬ್ಬರನ್ನು ಹತ್ತಿರ ಕರೆದು “ನೀವಿಬ್ಬರು ತುಂಬಾ ಚನ್ನಾಗಿ ಸಂಗೀತ ನುಡಿಸಿದ್ದೀರಿ. ಆದ್ರೆ ನಾವು ದೃವನನ್ನು ಆಯ್ಕೆ ಮಾಡಿದ್ದೇವೆ “ಎಂದು ಹೇಳುತ್ತಾರೆ. ಈಗ ರಾಮಜೀ ಸಕ್ಪಾಲ್ ಹಾಗೂ ಮನೆಯವರಿಗೆ ಅಚ್ಚರಿಯಾದರೂ, ದೃವನ ಗೆಲುವಿಗೆ ಖುಷಿ ಪಡುತ್ತಾರೆ.  ಈಗ ಬೇಸರವಾಗಿ ದೃವ ಅಲ್ಲಿಂದ ಹೊರಗೆ ಹೋಗುತ್ತಾನೆ. ಮಂಗೇಶ್ ಹಾಗೂ ಶೇಡಜಿ ನಮ್ಮ ಕೇರಿಯ ಹುಡುಗ ಗೆದ್ದನೆಂದು ಕುಣಿದು ಕುಪ್ಪಳಿಸುತ್ತಾರೆ. ಬ್ರಿಟಿಷ್ ದೊರೆ  ದೃವನಿಗೆ” ಬಟ್ಟೆ ಬರೆ ತಯಾರು ಮಾಡಿಕೊಂಡು ಈಗಲೇ ತಯಾರಾಗು”.ಎಂದು ಹೇಳುತ್ತಾನೆ.  ಈಗ ರಾಮಜೀಯವರು ಎಲ್ಲರನ್ನೂ ಕರೆದುಕೊಂಡು ಮನೆಗೆ ಹೋಗುತ್ತಾರೆ.  ಬ್ರಿಟಿಷ್ ದೊರೆಗೆ ಶೇಡಜಿ “ಸಾಹೇಬ್ರೆ ತುಂಬಾ ಧನ್ಯವಾದಗಳು. ತಾವೂ ನನ್ನ ಮಾತನ್ನು ನಡೆಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು”.  ಎಂದು ಹೇಳುತ್ತಾನೆ. ಏಕೆಂದರೆ ಸ್ಪರ್ಧೆಗೂ ಮುನ್ನ ಶೇಡಜಿ, ಮಂಗೇಶ್ ಹಾಗೂ ಪಂಡಿತ ಎಲ್ಲರೂ ಸೇರಿ “ಸಾಹೇಬ್ರೆ ನಮ್ಮ ದೃವನನ್ನೇ ಆಯ್ಕೆ ಮಾಡಿ, ಬಾಲಾ ಕೆಳಗಿನ ಜಾತಿಯವ. ಅವನನ್ನು ಆಯ್ಕೆ ಮಾಡಿದರೆ ನಿಮಗೂ ಅಲ್ಲಿ ಅವಮಾನ ಆಗುತ್ತದೆ “ಹೀಗೆ ಇನ್ನೂ ಏನೇನೋ ಹೇಳಿ ಬ್ರಿಟಿಷ್ ಅಧಿಕಾರಿಯ ತಲೆ ತುಂಬಿ ದೃವ ಗೆಲ್ಲುವಂತೇ ಮಾಡಲು ಯಸ್ಸೇಸ್ವಿಯಾಗುತ್ತಾರೆ. ಈದಿಗ ಮತ್ತೊಂದು ಕುತಂತ್ರ ಹೂಡಿದ್ದಾನೆ. ಅದೇನೆಂದರೆ ಶೇಡಜಿ ಬ್ರಿಟಿಷ್ ಅಧಿಕಾರಿಗೆ ಹೇಳುವ ಹಾಗೆ “ಸಾಹೇಬ್ರೆ ದೃವನನ್ನು ಇನ್ನೂ ಯಾವತ್ತಿಗೂ ಇತ್ತ ಕಳಿಸಬೇಡಿ. ಅವನಿಗೆ ಯಾವತ್ತೂ ರಜೆ ಕೊಡಬೇಡಿ. ಬೇಕಾದರೆ ನಾನೇ ಅಲ್ಲಿಗೆ ಆಗಾಗ ಬರುತ್ತೇನೆ “ಎಂದು ಹೇಳಿ ಅವನನ್ನು ಒಪ್ಪಿಸುತ್ತಾನೆ. ಅಬ್ಬಾ! ನೋಡಿ ಎಂತಾ ಮನುವಾದಿಗಳ ಕುತಂತ್ರ ಇದು.?!!

ಮನೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಬಾಲಾ ಅಳುತ್ತಿದ್ದಾನೆ. ತಂದೆ “ಬಾಲಾ ಬ್ರಿಟಿಷ ಅಧಿಕಾರಿಯೇ  ದೃವನನ್ನು ಆಯ್ಕೆ ಮಾಡಿರುತ್ತಾರೆ. ಸಂತೋಷದಿಂದ ಅವನನ್ನು ಕಳಿಸಿಕೊಡು”.  ಎನ್ನುತ್ತಾರೆ. ಈಗ ದೃವ “ಬಾಲಣ್ಣ ನೀನು ಬೇಸರ ಮಾಡಿಕೊಳ್ಳಬೇಡ. ಬೇಕಾದರೆ ನಾನು ಬಾಂಬೆಗೆ ಬರುವುದಿಲ್ಲ ಎಂದು ಬ್ರಿಟಿಷ್ ಅಧಿಕಾರಿಗೆ ಹೇಳಿ ಬರುತ್ತೇನೆ”. ಎಂದು ಹೇಳುತ್ತಾನೆ. ಆದ್ರೆ ಭೀಮ “ಇಲ್ಲ ದೃವ ನೀನೇ ಹೋಗಬೇಕು. ನೀನೇ ಗೆದ್ದಿದ್ದೀಯ “ಎನ್ನುತ್ತಾನೆ. ಬಾಲಾ “ದೃವ ನಾವೆಲ್ಲರೂ ನಿನಗೆ ಎಷ್ಟೊಂದು ಉಪಕಾರ ಮಾಡಿದ್ದೀವಿ.ಆದ್ರೂ ನೀನು ಮರೆತು ಬಿಟ್ಟೆ ದೃವ “ಎಂದಾಗ, ಈಗ ಭೀಮರಾವ “ಬಾಲಣ್ಣ ದೃವನೂ ನಿನಗೆ ಮಾಡಿರುವ ಸಹಾಯ ಮರೆತು ಬಿಟ್ಟೆಯಾ..? ಅವನು ನಿನಗಾಗಿ ವಿಷ ಕುಡಿದಿದ್ದಾನೆ ಗೊತ್ತಾ..? ಅವನು ಮನಸ್ಸು ಮಾಡಿದ್ದರೆ ನಿನಗೆ ಕುಡಿಸಬಹುದಿತ್ತು. ಆದ್ರೆ ಹಾಗೆ ಮಾಡಲಿಲ್ಲ “. ಹೀಗೆ ಹೇಳಿ ಭೀಮ ದೃವನನ್ನು ಬಾಂಬೆಗೆ ಹೋಗುವಂತೆ ಹೇಳಿ ತಯಾರಿ ಮಾಡಲು ಕರೆದುಕೊಂಡು ಹೋಗುತ್ತಾನೆ. ಇಲ್ಲಿಗೆ ಇವತ್ತಿನ ಸಂಚಿಕೆ ಮುಗಿಯುತ್ತದೆ.

ನಿಮ್ಮ ವಾಟ್ಸಾಪ್ ಗ್ರೂಪ್ ಗೆ ಈ ನಂಬರ್ ಸೇರಿಸಿ: 6363101317

ಇವತ್ತಿನ ಸಂಚಿಕೆಯೂ ದೃವ ಹಾಗೂ ಬಾಲಾನ ಸಂಗೀತ ಸ್ಪರ್ಧೆಯ ಸುತ್ತ ನಡೆಯುತ್ತದೆ. ಅದೂ ಅಲ್ಲದೇ, ತಮ್ಮ ಹಠ ಸಾಧನೆಗಾಗಿ ಎಂಥಾ ಕೆಟ್ಟ ಕೆಲಸಕ್ಕೂ ಜಾತಿವಾದಿಗಳು ಇಳಿದು ಬಿಡುತ್ತಾರೆ ಎಂಬ ಸತ್ಯವನ್ನು ಶೇಡಜಿ ಹಾಗೂ ಮಂಗೇಶ್ ಬೆಂಬಲಿಗರಿಂದ ಗೊತ್ತಾಗುತ್ತದೆ.  ಏಕೆಂದರೆ ಅವರು ಕೊಳಗೇರಿಗೆ ಯಾವತ್ತೂ ಕಾಲಿಡುವುದಿಲ್ಲ ಎಂದು ಹೇಳುತ್ತಿದ್ದವರು, ಆದರೆ ಇವತ್ತು ತಮ್ಮ ಕಾರ್ಯಸಾದನೆಗೆ ಬದುಕಿರುವ ಮಗನನ್ನು ಸತ್ತನೆಂದು ಪೂಜೆ ಪುನಸ್ಕಾರ ಮಾಡಿದವರು ಇವತ್ತು ಅದೇ ಮಗ ದೃವನ ಮನೆಯೊಳಗೇ ಬರುತ್ತಾರೆ. ನನ್ನ ಮಗ ಎಂದು ಅಪ್ಪಿ ಮುದ್ದಾಡುತ್ತಾರೆ. ಇದಕ್ಕೆಲ್ಲ ಕಾರಣ ದೃವ ಮಗನೆಂಬ ಅಭಿಮಾನದಿಂದಲ್ಲ, ಬದಲಾಗಿ ಅವರ ದೃಷ್ಟಿಯಲ್ಲಿ ಬಾಲಾ ಕೇಳಜಾತಿಯವ ಹಾಗಾಗಿ ಅವನು ಬ್ರಿಟಿಷ್ ಬ್ರಾಂಡ್ ನಲ್ಲಿ ಸೇರಿಕೊಂಡು ಅವರ ಜೊತೆಗೆ ಕುಳಿತುಕೊಂಡರೆ ಇಲ್ಲಿ ಅವರಿಗೆ ಅವಮಾನವಾಗುತ್ತದೆ..?! ಸಂಸ್ಕೃತಿ ನಾಶವಾಗುತ್ತದೆ. ಹೀಗಾಗಿ ದೃವನನ್ನು ದೂರ ಕಳಿಸಿ ಬಿಡೋದು. ದೃವ ಇಲ್ಲಿದ್ದರೆ ನಮ್ಮ ಮಾನ ಮರ್ಯಾದೆ ತೆಗಿಯುತ್ತಾನೆ ಎಂಬ ಭ್ರಮೆ ಅವರದು. ಹೀಗೆ ಒಟ್ಟಿನಲ್ಲಿ ಮನುವಾದಿಗಳು ಇಲ್ಲೂ ತಮ್ಮ ಮೂಗು ತೂರಿಸಿ ಈಗ ಗೆದ್ದಿದ್ದೇವೆ ಎಂದು ಬೀಗುತ್ತಾರೆ.  ಹಾಗಾದ್ರೆ ಬಾಲಾನ ಮುಂದಿನ ನಡೆ ಏನೂ..?  ರಾಮಜೀ ಸಕ್ಪಾಲ್ ರ ಮನೆಯಲ್ಲಿ ಬಾಲಾನ ಸೋಲನ್ನು ಅದೇಗೆ ಅರಗಿಸಿಕೊಳ್ಳುತ್ತಾರೆ..? ರಾಮಜೀ ಕುಟುಂಬಕ್ಕಾಗಿ ಪ್ರಾಣವನ್ನೇ ಕೊಡಲು ಮುಂದಾಗಿರುವ ದೃವ ಈ ಅಗ್ನಿ  ಪರೀಕ್ಷೆಯಲ್ಲಿ ಏನೂ ಮಾಡುತ್ತಾನೆ..? ಇವೇ ಮುಂತಾದ ನೈಜ ದೃಶ್ಯಗಳಿಗಾಗಿ ಮುಂದಿನ ಸಂಚಿಕೆಯಲ್ಲಿ ನೋಡೋಣ.

 

ಅಲ್ಲಿಯವರಿಗೂ

… ಜೈಭೀಮ್

… ಮುಂದುವರೆಯುವುದು

ಗಣಪತಿ ಚಲವಾದಿ(ಗಗೋಚ)

ಬಿಎಂಟಿಸಿ ನಿರ್ವಾಹಕರು

ಕಸಾಪ ಮಯೂರವರ್ಮ

ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

ನಿಮ್ಮ ವಾಟ್ಸಾಪ್ ಗ್ರೂಪ್ ಗೆ ಈ ನಂಬರ್ ಸೇರಿಸಿ: 6363101317

ಇತ್ತೀಚಿನ ಸುದ್ದಿ