ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿರೋದು ಪಕ್ಕಾ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ‘ದಿ ವೈರ್’
ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಈಗಾಗಲೇ ಪ್ರತಿಪಕ್ಷಗಳು ಆರೋಪಿಸಿರುವುದರ ನಡುವೆಯೇ ‘ದಿ ವೈರ್’ ಅಂತರ್ಜಾಲ ಪತ್ರಿಕೆಯು ಪ್ರಕಟಿಸಿರುವ ವರದಿ ಈ ಕುರಿತಂತೆ ಮತ್ತೊಮ್ಮೆ ಅನುಮಾನವನ್ನು ದೃಢಪಡಿಸಿದೆ. ಮತ ಚಲಾವಣೆಯ ಲೆಕ್ಕಾಚಾರದಲ್ಲಿ ಭಾರಿ ವ್ಯತ್ಯಾಸವಾಗಿರುವುದನ್ನು ದ ವಯರ್ ವರದಿ ಬಹಿರಂಗಪಡಿಸಿದೆ. ಮತದಾನದ ನಿರ್ದಿಷ್ಟ ಸಮಯ ಮುಗಿದ ಬಳಿಕವೂ ಎಂಟು ಶೇಕಡಾದಷ್ಟು ಮತ ಚಲಾವಣೆಯಾಗಿದೆ ಎಂದು ದ ವಯರ್ ತನ್ನ ವರದಿಯಲ್ಲಿ ತಿಳಿಸಿದೆ.
ಈ ಕಾರಣದಿಂದ 76 ಲಕ್ಷಕ್ಕಿಂತ ಅಧಿಕ ಮತ ಚಲಾವಣೆಯಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ ಅವರು ಈ ಮಾಹಿತಿಯನ್ನು ಖ್ಯಾತ ಟಿವಿ ನಿರೂಪಕ ಕರಣ್ ಥಾಪರ್ ಅವರ ಜೊತೆಗಿನ ಮಾತುಕತೆಯ ವೇಳೆ ಬಹಿರಂಗಪಡಿಸಿದ್ದಾರೆ.
ಚುನಾವಣಾ ಆಯೋಗವು ಬಿಡುಗಡೆಗೊಳಿಸಿರುವ ಮತದಾನದ ಲೆಕ್ಕಾಚಾರಗಳನ್ನು ವಿಶ್ಲೇಷಿಸುತ್ತಾ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನವಂಬರ್ 20ರಂದು ಸಂಜೆ 5 ಗಂಟೆ ವೇಳೆಗೆ ಮಹಾರಾಷ್ಟ್ರ ಚುನಾವಣಾ ಆಯೋಗವು ಹೇಳಿಕೊಂಡಂತೆ 58.22 ಶೇಕಡಾ ಮತದಾನವಾಗಿತ್ತು. ಅದೇ ದಿನ ರಾತ್ರಿ 11:30ಕ್ಕೆ ಚುನಾವಣಾ ಆಯೋಗ ಬಿಡುಗಡೆಗೊಳಿಸಿದ ಮತದಾನದ ಲೆಕ್ಕಾಚಾರದ ಪ್ರಕಾರ 65.2 ಶೇಕಡ ಮತದಾನವಾಗಿದೆ.
ಮತ ಎಣಿಕೆಯ ದಿನವಾದ ನವೆಂಬರ್ 23ರಂದು ಮತ ಎಣಿಕೆ ಗಿಂತ ಮೊದಲು ನೀಡಲಾದ ಲೆಕ್ಕಾಚಾರದ ಪ್ರಕಾರ 66.5% ಮತದಾನ ವಾಗಿದೆ ಎಂದು ಹೇಳಲಾಗಿದೆ. ಅಂದರೆ ಮತದಾನವು 7.83% ವಾಗಿ ಹೆಚ್ಚಳವಾಗಿದೆ . ಇದು ಮತದಾನದಲ್ಲಿ ಕೃತ್ರಿಮ ನಡೆದಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಪರಕಾಲ ಪ್ರಭಾಕರ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj