ಮಹಾರಾಷ್ಟ್ರ ಚುನಾವಣಾ ಕಾವು: ಮುಸ್ಲಿಂ ಸಮುದಾಯದ ಮತಗಳ ವಿಭಜನೆ? ವರದಿ ಏನ್ ಹೇಳುತ್ತೆ?
ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತಗಳು ವಿಭಜನೆಯತ್ತ ಸಾಗುತ್ತಿದೆ ಎಂದು ವರದಿಯಾಗಿದೆ. ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಮುಸ್ಲಿಂ ಮತಗಳ ವಿಭಜನೆ ಯಾಗುವ ಸಾಧ್ಯತೆಯನ್ನು ತೆರೆದಿಟ್ಟಿದೆ.
ಮಹಾವಿಕಾಸ್ ಅಘಾಡಿ 11 ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಜಿತ್ ಪವಾರ್ ಅವರ ಎನ್ ಸಿಪಿ ನಾಲ್ಕು ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಓವೈಸಿ ಅವರ ಪಕ್ಷದಿಂದ 11 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ವಂಚಿತ ಬಹುಜನ್ ಅಘಾಡಿಯಿಂದ 12ಕ್ಕಿಂತಲೂ ಅಧಿಕ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಹಾಗೆಯೇ ಸಣ್ಣ ಸಣ್ಣ ಪಾರ್ಟಿಗಳಿಂದ ಮತ್ತು ಪಕ್ಷೇತರರಾಗಿಯೂ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ನಾಲ್ಕರಿಂದ ಐದು ಮುಸ್ಲಿಂ ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಸುಮಾರು 25 ಕ್ಷೇತ್ರಗಳಿದ್ದು ಇಲ್ಲಿ ಮತಗಳು ವಿಭಜನೆ ಆಗಬಹುದು ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಮುಸ್ಲಿಮರು 40 ಶೇಕಡಕ್ಕಿಂತಲೂ ಅಧಿಕ ಇರುವ ಒಂಬತ್ತು ಕ್ಷೇತ್ರಗಳಿವೆ. ಸುಮಾರು 15 ರಷ್ಟು ಕ್ಷೇತ್ರಗಳಲ್ಲಿ ಮುಸ್ಲಿಮರು ಮೂವತ್ತು ಶೇಕಡಕ್ಕಿಂತ ಅಧಿಕ ಇದ್ದಾರೆ. ಹಾಗೆಯೇ 10 ರಿಂದ 20 ಶೇಕಡಾದಷ್ಟು ಮುಸ್ಲಿಮರಿರುವ 38 ಕ್ಷೇತ್ರಗಳಿವೆ. ಇಂಥ ಕ್ಷೇತ್ರಗಳಲ್ಲಿ ಮುಸ್ಲಿಮರ ನಡುವೆಯೇ ಮತ ವಿಭಜನೆಯಾಗಿ ಗೆಲ್ಲಬಾರದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj