ಮಹಾರಾಷ್ಟ್ರಕ್ಕೆ ಸಿಎಂ ಸಿಗುತ್ತಾರ.?ಶಿವಸೇನೆಯ ‘ಅಧಿಕಾರದ ಆಟ’ ಇನ್ನು ಎಷ್ಟು ದಿನ?
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರನ್ನು ಅಂತಿಮಗೊಳಿಸಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಭಾನುವಾರ ತಡರಾತ್ರಿ ದೃಢಪಡಿಸಿದ್ದಾರೆ.
ಡಿಸೆಂಬರ್ 2 ಅಥವಾ 3 ರಂದು ನಡೆಯಲಿರುವ ಸಭೆಯಲ್ಲಿ ಫಡ್ನವೀಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗುವುದು. ನಿರ್ಗಮಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಹಿಂದೆ ಬಿಜೆಪಿಯ ಹೊಸ ಸಿಎಂ ಆಯ್ಕೆಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಆದರೆ, ಗೃಹ ಖಾತೆಯ ಬಗ್ಗೆ ಎದ್ದ ಅಸಮಾಧಾನದಿಂದಾಗಿ ಅವರು ಸೈಲೆಂಟ್ ಆಗಿದ್ರು.
ಹಂಗಾಮಿ ಸಿಎಂ ಏಕನಾಥ್ ಶಿಂಧೆ ಅವರು ಸಿಎಂ ಹುದ್ದೆಯನ್ನು ತ್ಯಜಿಸಿದ ನಂತರ ಬಿಜೆಪಿಯೊಂದಿಗಿನ ಒಪ್ಪಂದದ ಭಾಗವಾಗಿ ಗೃಹ ಇಲಾಖೆ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಪೊಲೀಸರ ಮೇಲ್ವಿಚಾರಣೆ ನಡೆಸುವ ಪೋರ್ಟ್ಫೋಲಿಯೊದಲ್ಲಿ ಶಿಂಧೆ ಅವರ ಆಸಕ್ತಿ ಶಿವಸೇನೆ ವಲಯದಲ್ಲಿ ಚಿರಪರಿಚಿತವಾಗಿದೆ. 2019 ರಲ್ಲಿ, ಉದ್ಧವ್ ಠಾಕ್ರೆ ಎಂವಿಎ ಸರ್ಕಾರದ ಮುಖ್ಯಮಂತ್ರಿಯಾದಾಗ, ಶಿಂಧೆ ಗೃಹ ಸಚಿವ ಹುದ್ದೆಯ ಬಯಕೆಯನ್ನು ವ್ಯಕ್ತಪಡಿಸಿದ್ದರು, ಆದರೆ ಅವರು ಆಗ ರಾಜಿ ಮಾಡಿಕೊಳ್ಳಬೇಕಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj