ಆನ್ ಲೈನ್ ಗೇಮ್‌ಗೆ ಬಲಿಯಾದ ಬಾಲಕ: ನಿಗೂಢ ನಕ್ಷೆ ಚಿತ್ರಿಸಿ ಬಾಲಕ ಆತ್ಮಹತ್ಯೆ..!
ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ನಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ವಸತಿ ಕಟ್ಟಡದ 14 ನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮೃತಪಟ್ಟ ಹುಡುಗ “ಲಾಗ್ ಔಟ್ ನೋಟ್” ಎಂಬ ಹೆಸರಿನ ಟಿಪ್ಪಣಿಯನ್ನು ಬರೆದಿದ್ದ. ಇದು ಮಲ್ಟಿಪ್ಲೇಯರ್ ಯುದ್ಧ ಆಟದ ಕಾರ್ಯತಂತ್ರದ ನಕ್ಷೆಯಾಗಿದೆ. ಪೊಲೀಸರು ಅವನ ನೋಟ್ ಬುಕ್ ನಲ್ಲಿ ಚಿತ್ರಿಸಿದ ಹಲವಾರು ರೇಖಾಚಿತ್ರಗಳು ಮತ್ತು ನಕ್ಷೆಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಪಾಸ್ ವರ್ಡ್ ತಿಳಿದಿಲ್ಲದ ಕಾರಣ ಪೊಲೀಸರು ಮತ್ತು ಹುಡುಗನ ಪೋಷಕರು ಅವನ ಲ್ಯಾಪ್ ಟಾಪ್ ಓಪನ್ ಮಾಡಲು ಸಾಧ್ಯವಾಗುತ್ತಿಲ್ಲ. ಪಿಂಪ್ರಿ-ಚಿಂಚ್ವಾಡ್ ಪೊಲೀಸರು ಅವನು ಆಡುತ್ತಿದ್ದ ಆನ್ ಲೈನ್ ಆಟವನ್ನು ಗುರುತಿಸಲು ಸೈಬರ್ ತಜ್ಞರ ಸಹಾಯವನ್ನು ಪಡೆಯಲಿದ್ದಾರೆ.
ಕಳೆದ ಆರು ತಿಂಗಳಲ್ಲಿ ಮಗನ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎಂದು ಬಾಲಕನ ತಾಯಿ ವರದಿ ಮಾಡಿದ್ದಾರೆ. ಮಗ ಇತ್ತೀಚಿಗೆ ಹೆಚ್ಚು ಆಕ್ರಮಣಕಾರಿ ಮತ್ತು ಅಸಹಜವಾಗಿ ವರ್ತಿಸುತ್ತಿದ್ದ ಎಂದು ಹೇಳಿದ್ದಾರೆ. ಚಾಕುವನ್ನು ಕೇಳುವುದು ಮತ್ತು ಬೆಂಕಿಯೊಂದಿಗೆ ಆಟವಾಡುತ್ತಿದ್ದ ಎಂದು ಹೇಳಿದ್ದಾರೆ.
ಹಾನಿಕಾರಕ ವೆಬ್ ಸೈಟ್ ಗಳು ಈ ಘಟನೆಗೆ ಕಾರಣ ಎಂದು ಮೃತ ಬಾಲಕನ ತಾಯಿ ಆರೋಪಿಸಿದ್ದು ಮಕ್ಕಳನ್ನು ರಕ್ಷಿಸಲು ಡಿಜಿಟಲ್ ವಿಷಯವನ್ನು ಸುರಕ್ಷಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬ್ಲೂ ವೇಲ್ ಗೇಮ್ 2016 ರ ಸುಮಾರಿಗೆ ಕಾಣಿಸಿಕೊಂಡಿತ್ತು.
ಇದು ರಷ್ಯಾದಲ್ಲಿ ಹುಟ್ಟಿಕೊಂಡಿದೆ ಎಂದು ವರದಿಯಾಗಿದೆ. ಇದು 50 ದಿನಗಳಲ್ಲಿ ಆಟಗಾರರಿಗೆ ನಿಯೋಜಿಸಲಾದ ಕಾರ್ಯಗಳ ಸರಣಿಯನ್ನು ಒಳಗೊಂಡಿದೆ. ಅಂತಿಮ ಕಾರ್ಯವು ಆತ್ಮಹತ್ಯೆಯಾಗಿದೆ. ಈ ಆಟವು ಹದಿಹರೆಯದವರು ಮತ್ತು ಯುವಕರನ್ನು ಗುರಿಯಾಗಿಸಿಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth