ಮಹಾಶಿವರಾತ್ರಿ: 70 ವರ್ಷದ ಬಳಿಕ ಚಾಮರಾಜೇಶ್ವರನಿಗೆ ವೃಷಭ ವಾಹನ ಸೇವೆ
ಚಾಮರಾಜನಗರ: ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಇಂದು ವಿಶೇಷ ಎನಿಸುವ ವಿಶಿಷ್ಟ ಸೇವೆ ನಡೆದಿದ್ದು ಮಹಾಶಿವರಾತ್ರಿ ಹಬ್ಬದ ಸಡಗರವನ್ನು ದುಪ್ಪಟ್ಟು ಮಾಡಿದೆ.
ಹೌದು…, ಚಾಮರಾಜನಗರದ ಶ್ರೀಚಾಮರಾಜೇಶ್ವರನಿಗೆ ಬರೋಬ್ಬರಿ 70 ವರ್ಷಗಳ ಬಳಿಕ ವೃಷಭ(ನಂದಿ) ವಾಹನ ಸೇವೆ ನಡೆದಿದ್ದು ಒಂದು ಪೀಳಿಗೆ ಬಳಿಕ ಈ ಆಚರಣೆ ನಡೆದಿದ್ದು ಭಕ್ತರು ಶ್ರದ್ಧಾ ಭಕ್ತಿಯಿಂದ ನಂದಿ ವಾಹನ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.
ದೇವಾಲಯದಲ್ಲಿದ್ದ ವೃಷಭ, ಹಂಸ, ಗಜ, ಅಶ್ವ ವಾಹನಗಳು ಧೂಳು ಹಿಡಿದು ಹಾಳಾಗಿದ್ದವು. ಚಾಮರಾಜೇಶ್ವರ ದೇವಾಲಯ ಜೀರ್ಣೋದ್ಧಾರದ ಬಳಿಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಇಚ್ಛಾಶಕ್ತಿಯಿಂದ ವಾಹನಗಳು ದುರಸ್ತಿಗೊಂಡಿದ್ದು 70 ವರ್ಷಗಳ ಬಳಿಕ ಇಂದು ನಂದಿ ವಾಹನ ಸೇವೆ ನಡೆದಿದೆ. ಕೆಂಪನಂಜಾಂಬ ಸಮೇತ
ಚಾಮರಾಜೇಶ್ವರ ದೇವರ ಉತ್ಸವ ಮೂರ್ತಿಯನ್ನು ನಂದಿ ವಾಹನದಲ್ಲಿಟ್ಟು ನಗರದ ರಥ ಬೀದಿಯಲ್ಲಿ ಉತ್ಸವ ನಡೆಸಲಾಗಿದೆ.
ತಾತನ ಕಾಲದಲ್ಲಿ ಆಗಿತ್ತು:
ನಂದಿ ವಾಹನ ಉತ್ಸವ ನಡೆದಿರುವುದು ತಮಗೇ ಗೊತ್ತೇ ಇಲ್ಲಾ, ಆ ರೀತಿ ಆಗಿತ್ತು ಈ ರೀತಿ ಆಗುತ್ತಿತ್ತು ಎನ್ನುವುದಷ್ಟೇ ನಮಗೆ ಗೊತ್ತು, ಭಕ್ತರ ಆಸೆಯಂತೆ ಉತ್ಸವ ವಾಹನಗಳು ದುರಸ್ತಿಗೊಂಡು 70 ವರ್ಷದ ಬಳಿಕ ಈಗ ಸೇವೆ ನಡೆಯುತ್ತಿದೆ, ಅದನ್ನು ಕಾಣುತ್ತಿರುವುದು ನಮ್ಮ ಭಾಗ್ಯ ಎಂದು ಚಾಮರಾಜನಗರ ಉಪ್ಪಾರ ಮುಖಂಡ ಹಾಗೂ ಚಾಮರಾಜೇಶ್ವರನ ಭಕ್ತರಾದ ಜಯಕುಮಾರ್ ಸಂತಸ ವ್ಯಕ್ತಪಡಿಸಿದರು.
ಯಾವುದೇ ದೇವಾಲಯಕ್ಕೂ ಚಾಮರಾಜೇಶ್ವರನ ದೇವಾಲಯ ಕಡಿಮೆ ಇಲ್ಲಾ, ಸಾಲುಗುಡಿಯಲ್ಲಿನ ಮೂರ್ತಿಗಳು, ಶಿವಲೀಲೆಯ ವಿಗ್ರಹಗಳು ಅದ್ಭುತವಾಗಿದೆ ರಾಜತ್ವ ಮತ್ತು ದೈವತ್ವ ಎರಡೂ ಇರುವ ಏಕಮಾತ್ರ ದೇವಾಲಯ ನಮ್ಮದಾಗಿದ್ದು ಪ್ರವಾಸಿಗಳನ್ನು ಸೆಳೆಯುವ ಕಾರ್ಯ ಆಗಬೇಕಿದೆ ಎಂದರು.
ವಿಶೇಷ ಪೂಜೆ, ಉತ್ಸವ, ಜನಸಾಗರ:
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜೇಶ್ವರನಿಗೆ ಪಂಚಾಮೃತ ಅಭಿಷೇಕ, ಅಷ್ಟ ಮಂಗಳಾರತಿ, ಶಾಲ್ಯನ್ಯ ಅಭಿಷೇಕ, ಬಿಲ್ವಾರ್ಚನೆ ನಡೆದಿದ್ದು ವಿಶೇಷ ಎಂಬಂತೆ 70 ವರ್ಷಗಳ ಬಳಿಕ ದೇವರಿಗೆ ನಂದಿ ವಾಹನ ಸೇವೆ ನಡೆಯುತ್ತಿದ್ದೆ ಎಂದು ಅರ್ಚಕ ಅನಿಲ್ ದೀಕ್ಷಿತ್ ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw