ಈ ಬಾರಿಯೂ ಸಿಗಲಿಲ್ಲ ಬಿಜೆಪಿ ಟಿಕೆಟ್: ಮಹತ್ವದ ತೀರ್ಮಾನ ಕೈಗೊಂಡ ಪ್ರಮೋದ್ ಮುತಾಲಿಕ್
ದಾವಣಗೆರೆ: ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರು ಟಿಕೆಟ್ ವಂಚಿತರಾಗಿದ್ದರು. ಇದೀಗ ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿಯೂ ಮುತಾಲಿಕ್ ಅವರಿಗೆ ಟಿಕೆಟ್ ದೊರಕಿಲ್ಲ. ಈ ನಡುವೆ ಮುತಾಲಿಕ್ ಮಹತ್ವದ ಹೇಳಿಕೆ ನೀಡಿದ್ದಾರೆ.
ನನಗೆ ರಾಜಕೀಯದ ಸಹವಾಸವೇ ಬೇಡ. ಇರುವಷ್ಟು ದಿನ ಹಿಂದುತ್ವ ಹೋರಾಟ ಮಾಡುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಅವರು ಹೇಳಿದ್ದು, ಸದ್ಯಕ್ಕೆ ನನಗೆ ರಾಜಕೀಯ ಸಹವಾಸ ಬೇಡ. ಉಪಚುನಾವಣೆಯಲೂ ಸ್ಪರ್ಧಿಸಲ್ಲ. ಭ್ರಷ್ಟ ರಾಜಕಾರಣಕ್ಕೆ ನಾನು ಫಿಟ್ ಆಗಿಲ್ಲ. ಇರುವಷ್ಟು ದಿನ ಹಿಂದುತ್ವಕ್ಕಾಗಿ ಹೋರಾಡುತ್ತೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕರು, ಹೋರಾಟಗಾರರು ರಾಜಕೀಯಕ್ಕೆ ಬೇಡವಾಗಿದ್ದಾರೆ. ಜಾತಿವಾದಿಗಳು, ಗೂಂಡಾಗಳು, ಲೂಟಿಕೋರರು ಬೇಕಾಗಿದ್ದಾರೆ. ಹಾಗಾಗಿ ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ. ಯಾವ ರಾಜಕೀಯವೂ ನನಗೆ ಬೇಡ ಎಂದು ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಅಕ್ಟೋಬರ್ 5ರಂದು ಮೈಸೂರಿನಲ್ಲಿ ‘ಮಹಿಷ ದಸರಾ’ | ಅನುಮತಿ ನೀಡದ ಜಿಲ್ಲಾಡಳಿತ!
ಬಿಜೆಪಿ ತನ್ನ ತಾಲಿಬಾನಿ ಮನಸ್ಥಿತಿಯನ್ನು ಬೆತ್ತಲು ಮಾಡಿಕೊಂಡಿದೆ | ಯೋಗಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗು
ಜ್ಯೂಸ್ ಎಂದು ಭಾವಿಸಿ ತಾತನ ಬ್ರಾಂಡಿ ಕುಡಿದ 5 ವರ್ಷದ ಬಾಲಕ, ತಾತ ಇಬ್ಬರೂ ಸಾವು
ಮನೆಗೆ ನುಗ್ಗಿ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ಬಿಜೆಪಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಬ್ರಿಟಿಷರು ಕೂಡ ಮಾಡಿರಲಿಲ್ಲ | ಅಖಿಲೇಶ್ ಯಾದವ್
ರೈತರ ಹತ್ಯಾಕಾಂಡ: ಬೇಡಿಕೆ ಈಡೇರದ ಹೊರತು ಮೃತ ರೈತರ ಅಂತ್ಯಸಂಸ್ಕಾರ ಮಾಡಲ್ಲ | ರಾಕೇಶ್ ಟಿಕಾಯತ್ ಪಟ್ಟು
ಲಿಖಿಂಪುರ ರೈತರ ಹತ್ಯಾಕಾಂಡ: ಬಿಎಸ್ ಪಿ ನಾಯಕರನ್ನೂ ಗೃಹ ಬಂಧನದಲ್ಲಿರಿಸಲಾಗಿದೆ | ಮಾಯಾವತಿ