ಮಹಿಳೆಯರು ಹಾಕುವ ಬಟ್ಟೆಯಿಂದ ಪುರುಷರು ಉದ್ರೇಕವಾಗುತ್ತಾರೆ: ರೇಣುಕಾಚಾರ್ಯ
ಬೆಂಗಳೂರು: ಮಹಿಳೆಯರು ಹಾಕುವ ಬಟ್ಟೆಯಿಂದ ಪುರುಷರು ಉದ್ರೇಕವಾಗುತ್ತಾರೆ. ಮಹಿಳೆಯರ ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಕಿನಿಯಾಗಿರಲಿ, ಮುಸುಕು, ಜೀನ್ಸ್ ಆಗಿರಲಿ ಅಥವಾ ಹಿಜಬ್ ಆಗಿರಲಿ, ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು ಎಂದು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಕ್ಷಮೆ ಕೇಳಬೇಕು. ಅವರು ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ. ಅವರ ತಾಯಿ ಹೇಳಿ ಕೇಳಿ ಇಟಲಿಯವರು. ಅವರು ಯಾರನ್ನ ಮದುವೆಯಾಗಿದ್ದಾರೆ ಎನ್ನುವುದು ಅವರ ವಯಕ್ತಿಕ ವಿಚಾರವಾಗಿದೆ. ಆದರೆ ಮಹಿಳೆಯರು ಹಾಕುವ ಬಟ್ಟೆಯಿಂದ ಕೆಲವರು ಉದ್ರೇಕವಾಗುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಇದು ಒಳ್ಳೆಯದಲ್ಲ. ಅತ್ಯಾಚಾರ ಹೆಚ್ಚಾಗಲು ಮಹಿಳೆಯರ ಧರಿಸಿನಿಂದ ಪುರುಷರು ಉದ್ವೇಗಕ್ಕೆ ಒಳಗಾಗುವುದೇ ಕಾರಣ. ಮಹಿಳೆಯರು ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ. ಪ್ರಿಯಾಂಕಾ ಗಾಂಧಿ ಬಿಕಿನಿ ಪದ ಬಳಸಬಾರದಿತ್ತು. ಸಮವಸ್ತ್ರ ವಿಷಯದ ನಡುವೆ ಬಿಕಿನಿ ಪದ ಬಳಕೆ ತಪ್ಪು. ಪ್ರಿಯಾಂಕಾ ಗಾಂಧಿ ಅವರು ಕ್ಷಮೆ ಕೇಳಬೇಕು. ದೇಶದ ಧರ್ಮ, ಸಂಸ್ಕೃತಿ, ಪರಂಪರೆ ಅವರಿಗೆ ಗೊತ್ತಿಲ್ಲ. ಕೇಸರಿ ನಮ್ಮ ಪರಂಪರೆಯಾಗಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ದೇವಸ್ಥಾನದಲ್ಲಿ ಭಕ್ತರು ಬ್ರಾಹ್ಮಣರ ಕಾಲು ತೊಳೆಯುವ ಪದ್ಧತಿ: ಕೇರಳ ಹೈಕೋರ್ಟ್ನಿಂದ ಸುಮೋಟೋ ಕೇಸ್ ದಾಖಲು
ಎಟಿಎಂಗೆ ಹಾನಿ ಮಾಡಿ ಹಣ ಕಳವಿಗೆ ಯತ್ನ: ಆರೋಪಿಯ ಬಂಧನ
ಪ್ರಿಯಾಂಕ್ ಖರ್ಗೆ ಪತ್ನಿಯ ಮೊಬೈಲ್ ಕಳವು: ದೂರು ದಾಖಲು
ಮೃತ ಗಂಡನ ನಕಲಿ ದಾಖಲೆ ಸಲ್ಲಿಸಿ ಮೂರು ಕೋಟಿ ರೂ. ವಂಚಿಸಿದ ಪತ್ನಿ
ಇಂಟರ್ವ್ಯೂ ಮುಗಿಸಿ ಬರುತ್ತಿದ್ದವನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ: ಯುವಕನ ಕುತ್ತಿಗೆಗೆ ಗಾಯ