ಮಹಿಳೆಯ ನಗ್ನ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಆರೋಪಿಯ ಬಂಧನ
ಬೆಂಗಳೂರು: ಮಹಿಳೆಯ ನಗ್ನ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ವಿಜಯಪುರ ಮೂಲದ ಪ್ರಶಾಂತ್ ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನ ಮಹಿಳೆಯೊಬ್ಬರಿಗೆ ಆರೋಪಿ ಪ್ರಶಾಂತ್ ಮೆಸೇಜ್ ಮಾಡಿದ್ದಾನೆ. ಅಪರಿಚಿತನ ಮೆಸೇಜ್ಗೆ ಮಹಿಳೆ ರಿಫ್ಲೇ ಮಾಡಿದ್ದು, ದಿನ ಕಳೆದಂತೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ.
ಈ ನಡುವೆ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ ಅಸಾಮಿ ಆಗಾಗ ವಿಡಿಯೋ ಕಾಲ್ ನಲ್ಲಿ ಮಹಿಳೆ ಜೊತೆ ಮಾತನಾಡುತ್ತಿದ್ದ .ಈ ವೇಳೆ ನಗ್ನ ವಿಡಿಯೋ ಮತ್ತು ಫೋಟೋ ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಆರೋಪಿ ಮಾತು ನಂಬಿದ ಮಹಿಳೆ ನಗ್ನ ಪೋಟೋ ಮತ್ತು ವಿಡಿಯೋ ಕಳಿಸಿದ್ದಾರೆ.
ಬಳಿಕ ಆರೋಪಿ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಬ್ಲ್ಯಾಕ್ ಮೇಲ್ ಗೆ ಹೆದರಿದ ಮಹಿಳೆ 50ಸಾವಿರ ರೂ. ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಬಳಿಕ ಮತ್ತಷ್ಟು ಹಣಕ್ಕೆ ಡಿಮಾಂಡ್ ಮಾಡಿದ್ದಾನೆ.ಈ ಘಟನೆ ಸಂಬಂಧ ಮಹಿಳೆ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೀವ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಸಹಾಯ ಮಾಡಿ: ಭಾರತೀಯ ವೈದ್ಯ ಕುಟುಂಬದ ಮನವಿ
ಉಕ್ರೇನ್: ನವೀನ್ ಬಲಿಯಾದ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಸಿಲುಕಿದ್ದಾರೆ ಉಜಿರೆ ವಿದ್ಯಾರ್ಥಿನಿ!
ನವೀನ್ ಸಾವಿಗೆ ನೀಟ್ ವ್ಯವಸ್ಥೆಯೇ ಕಾರಣ: ನೀಟ್ ರದ್ದುಗೊಳಿಸಲು ಬೃಹತ್ ಅಭಿಯಾನ
ಉಕ್ರೇನ್ ಒಳಗಡೆ ನಮಗೆ ಸರ್ಕಾರ ಯಾವುದೇ ರಕ್ಷಣೆ ನೀಡಲಿಲ್ಲ | ಕೇಂದ್ರ ಸರ್ಕಾರದ ನಡೆಯ ಬಗ್ಗೆ ವಿದ್ಯಾರ್ಥಿಗಳಿಂದ ಬೇಸರ
ಉಕ್ರೇನ್ ಒಳಗಡೆ ನಮಗೆ ಸರ್ಕಾರ ಯಾವುದೇ ರಕ್ಷಣೆ ನೀಡಲಿಲ್ಲ | ಕೇಂದ್ರ ಸರ್ಕಾರದ ನಡೆಯ ಬಗ್ಗೆ ವಿದ್ಯಾರ್ಥಿಗಳಿಂದ ಬೇಸರ