ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಾಗಲಿದ್ದಾರೆಯೇ? | ಧೋನಿ ಹೇಳಿದ್ದೇನು?

ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ ಸೀಸನ್ –18ರಲ್ಲಿ ಆಟವಾಡುತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಎಂ.ಎಸ್.ಧೋನಿ ಅವರ ಪೋಷಕರು ಕಾಣಿಸಿಕೊಂಡಿದ್ದರು. ಹೀಗಾಗಿ ಧೋನಿ ಐಪಿಎಲ್ ವೃತ್ತಿ ಕೊನೆಗೊಳಿಸಲಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡುತ್ತಿದೆ.
ಈ ನಡುವೆ ಪಾಡ್ ಕಾಸ್ಟ್ ವೊಂದರಲ್ಲಿ ಮಾತನಾಡಿರುವ ಮಹೇಂದ್ರ ಸಿಂಗ್ ಧೋನಿ, ತಾನು ಸದ್ಯಕ್ಕೆ ನಿವೃತ್ತಿ ನೀಡುವ ಯೋಚನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಇನ್ನೂ ಕೂಡ ಐಪಿಎಲ್ ನಲ್ಲಿ ಆಟವಾಡಲಿದ್ದೇನೆ. ನಿವೃತ್ತಿ ವಿಚಾರವನ್ನು ಬಹಳ ಸರಳವಾಗಿ ನಾನು ತೆಗೆದುಕೊಂಡಿದ್ದೇನೆ ಅಂತ ಹೇಳಿದ್ದಾರೆ.
ನನಗೆ ಈಗ 43 ವರ್ಷ ವಯಸ್ಸು, 2025ರ ಐಪಿಎಲ್ ಮುಗಿಯುವ ಹೊತ್ತಿಗೆ 44 ವರ್ಷವಾಗಲಿದೆ. ನಂತರ ನಾನು ಆಟವಾಡಬೇಕೇ? ಬೇಡವೇ ಎನ್ನುವುದನ್ನು ನಿರ್ಧರಿಸಲು ನನಗೆ 10 ತಿಂಗಳಿವೆ. ಸದ್ಯ ನಿವೃತ್ತಿ ಬಗ್ಗೆ ಯೋಚಿಸುತ್ತಿಲ್ಲ ಎಂದು ಎಂಎಸ್ ಡಿ ತಿಳಿಸಿದ್ದಾರೆ.
ನನ್ನ ನಿವೃತ್ತಿಯನ್ನ ನಿರ್ಧರಿಸುವುದು ನನ್ನ ದೇಹ. ಆದ್ಧರಿಂದ ಒಂದೊಂದೇ ವರ್ಷ ಕಳೆಯಲಿ, ಬಳಿಕ ಅದರ ಬಗ್ಗೆ ಯೋಚಿಸೋಣ ಎಂದಿದ್ದಾರೆ. ಹೀಗಾಗಿ ಆತಂಕದಲ್ಲಿದ್ದ ಎಂ.ಎಸ್.ಧೋನಿ ಅಭಿಮಾನಿಗಳು ನಿರಾಳರಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD