125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗುತ್ತಿರುವ ಖ್ಯಾತ ನಟ ಮಹೇಶ್​ ಬಾಬು - Mahanayaka
7:37 AM Thursday 12 - December 2024

125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗುತ್ತಿರುವ ಖ್ಯಾತ ನಟ ಮಹೇಶ್​ ಬಾಬು

mahesh babu
06/03/2022

ಇಂದಿನ ದಿನಗಳಲ್ಲಿ ಹೃದಯದ ಸಮಸ್ಯೆ ಬಗ್ಗೆ ಜನರು ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಹೃದಯದ ಸಮಸ್ಯೆಯಿಂದ ಬಳಲುವ ಪುಟ್ಟ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಖ್ಯಾತ ನಟ ಮಹೇಶ್​ ಬಾಬು ನೆರವಾಗುತ್ತಿದ್ದಾರೆ.

ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುವ ಪುಟ್ಟ ಮಕ್ಕಳಿಗೆ ನೆರವಾಗಲು ಮಹೇಶ್​ ಬಾಬು ಫೌಂಡೇಶನ್ ಪಣ ತೊಟ್ಟಿದೆ. ಮಕ್ಕಳ ಹಾರ್ಟ್​ ಸರ್ಜರಿಗೆ ಈ ಸಂಸ್ಥೆ ನೆರವು ನೀಡಲಿದೆ. ಈ ಕಾರ್ಯದಿಂದಾಗಿ ಸೂಪರ್ ಸ್ಟಾರ್ ಮಹೇಶ್​ ಬಾಬು ಅವರು ಹೃದಯವಂತ ಎಂಬುದು ಮತ್ತೊಮ್ಮೆ ಸಾಬೀತು ಆದಂತಾಗಿದೆ.

ಇಂದಿನ ದಿನಗಳಲ್ಲಿ ಹೃದಯದ ಸಮಸ್ಯೆ ಬಗ್ಗೆ ಜನರು ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಯುವ ಜನರು ಹೃದಯಾಘಾತದಿಂದ ಮೃತರಾಗುತ್ತಿರುವ ಘಟನೆ ಪದೇಪದೇ ವರದಿ ಆಗುತ್ತಿದೆ. ಇನ್ನು, ಚಿಕ್ಕ ಮಕ್ಕಳಲ್ಲಿಯೂ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹುಟ್ಟುವಾಗಲೇ ಅನೇಕ ಮಕ್ಕಳಿಗೆ ಈ ರೀತಿಯ ತೊಂದರೆ ಇರುತ್ತದೆ. ಬಡ ಕುಟುಂಬದ ಮಕ್ಕಳಿಗೆ ಇಂಥ ಸಮಸ್ಯೆಗಳಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಲು ‘ಮಹೇಶ್​ ಬಾಬು ಫೌಂಡೇಶನ್​’ ಸಹಾಯ ಮಾಡಲಿದೆ.

ಖ್ಯಾತ ನಟ ಮಹೇಶ್​ ಬಾಬು ಅವರು ಈಗ ‘ಸರ್ಕಾರು ವಾರಿ ಪಾಟ’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರು ಬಗೆಬಗೆಯ ಸಿನಿಮಾಗಳ ಮೂಲಕ ಜನರನ್ನು ರಂಜಿಸುತ್ತಾರೆ. ಪ್ರತಿ ಸಿನಿಮಾಗೆ ಮಹೇಶ್​ ಬಾಬು ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಲ್ಲಿ ನಟಿಸಿದರೂ ಅವರಿಗೆ ಕೈ ತುಂಬ ಹಣ ಸಿಗುತ್ತದೆ. ಹೀಗೆ ಕೋಟ್ಯಂತರ ರೂಪಾಯಿ ಗಳಿಸುವ ಅವರು ಸಮಾಜಮುಖಿ ಕೆಲಸಗಳಿಗಾಗಿಯೂ ತಮ್ಮ ಆದಾಯದ ಒಂದು ಪಾಲನ್ನು ಮೀಸಲು ಇರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೋರ್ಟ್ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ: ಆರೋಪಿಯ ಸೆರೆ

ಕ್ವಾರಿಯಲ್ಲಿ ಗುಡ್ಡ ಕುಸಿತ: 4 ಗಂಟೆಗೂ ಹೆಚ್ಚು ಕಾಲ ಬಂಡೆಯಡಿ ಸಿಲುಕಿ ಬದುಕುಳಿದ ಕಾರ್ಮಿಕ

ಟ್ಯಾಟೂ ಹಾಕುವ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ: ಕಲಾವಿದ ಅರೆಸ್ಟ್

ಎಸ್ಪಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ ಎ ಎಸ್ ಐ ಕುಸಿದುಬಿದ್ದು ಸಾವು

ದೇವಸ್ಥಾನಕ್ಕೆ ಆಗಮಿಸಿದ್ದ ಗರ್ಭಿಣಿ ಕುಸಿದು ಬಿದ್ದು ಸಾವು

ಇತ್ತೀಚಿನ ಸುದ್ದಿ