ಅಮೃತ ಭಾರತಿ ವಿದ್ಯಾಲಯ ಹೆಬ್ರಿಯ ಕನ್ನಡ ಶಿಕ್ಷಕ  ಮಹೇಶ ಹೈಕಾಡಿ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ - Mahanayaka
10:36 AM Thursday 12 - December 2024

ಅಮೃತ ಭಾರತಿ ವಿದ್ಯಾಲಯ ಹೆಬ್ರಿಯ ಕನ್ನಡ ಶಿಕ್ಷಕ  ಮಹೇಶ ಹೈಕಾಡಿ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ

mahesh hikady
24/10/2021

ಉಡುಪಿ: ಅಮೃತ ಭಾರತಿ ವಿದ್ಯಾಲಯ ಹೆಬ್ರಿಯ ಕನ್ನಡ ಶಿಕ್ಷಕ  ಮಹೇಶ ಹೈಕಾಡಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ (ರಿ ).ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ) ನೀಡುವ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಪಿ.ಆರ್.ಎನ್.ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದ ಉಪಮುಖ್ಯೋಪಾಧ್ಯಾಯರಾದ ಮಹೇಶ್ ಹೈಕಾಡಿ ಆಯ್ಕೆಯಾಗಿದ್ದಾರೆ

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ (ರಿ).ರಾಜ್ಯ ಮಟ್ಟದಲ್ಲಿ ಪ್ರಥಮ ಬಾರಿಗೆ ಆರಂಭಿಸಿದ ಶಿಕ್ಷಕ ರತ್ನ ಪ್ರಶಸ್ತಿ ಆಗಿದೆ. ಈ ಪ್ರಶಸ್ತಿಗೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ಶಾಲೆಯ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ ಗಳಿಂದ ಒಟ್ಟು  35 ಶಿಕ್ಷಕರು ಆಯ್ಕೆ ಆಗಿರುತ್ತಾರೆ. ಉಡುಪಿ ಜಿಲ್ಲೆಯಿಂದ ಇಬ್ಬರು ಶಿಕ್ಷಕರು ಆಯ್ಕೆಯಾಗಿರುತ್ತಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 26 ರಂದು ಹಾಸನದ ಕಲಾಭವನದಲ್ಲಿ ನಡೆದಿದೆ

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ (ರಿ )(ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ)ಖಾಸಗಿ ಶಿಕ್ಷಕರ ಇತಿಹಾಸದಲ್ಲೆ ಮೊದಲ  ಬಾರಿಗೆ ಆರಂಭಿಸಿದ ರಾಜ್ಯ ಮಟ್ಟದ ‘ ಶಿಕ್ಷಕ ರತ್ನ ಪ್ರಶಸ್ತಿ’. ಇದಾಗಿದೆ.

ಭಾನುವಾರ ಹಾಸನ ನಗರದಲ್ಲಿನ ಕಲಾಭವನದಲ್ಲಿ ಖಾಸಗಿ ಶಿಕ್ಷಕರ ಹಾಗೂ ಉಪನ್ಯಾಸಕರ ಬಳಗದ ವತಿಯಿಂದ ಡಾ.ಎಸ್ ರಾಧಾಕೃಷ್ಣನ್ ಸ್ಮರಣೆಯ ಶಿಕ್ಷಕ ದಿನಾಚರಣೆ ಸಂಬಂಧ ರಾಜ್ಯ ಮಟ್ಟದಶಿಕ್ಷಕ ರತ್ನ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ  ಅಮೃತ ಭಾರತಿ ವಿದ್ಯಾಲಯ ಹೆಬ್ರಿಯ ಕನ್ನಡ ಶಿಕ್ಷಕ ಶ್ರೀ.ಮಹೇಶ ಹೈಕಾಡಿ ಇವರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಒಬ್ಬೊಬ್ಬ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡು ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಯನ್ನು 35 ಅರ್ಹ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷ ಪ್ರಾಮಾಣಿಕ ಅಧಿಕಾರಿ ರವಿ.ಡಿ.ಚೆನ್ನಣ್ಣರವರ್  ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದೆ. ಕೊರೊನ ಸಂದರ್ಭದಲ್ಲಿ ಶಿಕ್ಷಕರು ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ.  ಮತ್ತೆ ಶಾಲೆಗಳು ಆರಂಭವಾಗುತ್ತಿವೆ ಮತ್ತೆ ತನ್ನ ವೃತ್ತಿಗೆ ಗೌರವ ನೀಡಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾನು ಈ ಸಂದರ್ಭದಲ್ಲಿ ಈ ಒಂದು ಉನ್ನತ ಸ್ಥಾನದಲ್ಲಿರಲು ನನ್ನ ಶಿಕ್ಷಕರು ಮೂಲಕಾರಣ. ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಮುಂದೆ ಅವರು ಏನಾಗಬೇಕು ಎಂಬುವುದರ ಪರಿಕಲ್ಪನೆ ಮೂಡಿಸಬೇಕು. ಮುಂದೆ ಆ ವಿದ್ಯಾರ್ಥಿಗಳು ಉನ್ನತ ಕೆಲಸಕ್ಕೆ ಸೇರಿ ತಮ್ಮಂತೆಯೇ ಉತ್ತಮ ಪ್ರಜೆಗಳನ್ನು ರೂಪಿಸಬೇಕು ಎಂದರು. ಎಲ್ಲಾ ಮಕ್ಕಳಲ್ಲೂ ಕಲಿಯುವ ಗುಣ ಇದ್ದೆ ಇರುತ್ತದೆ . ಅಲ್ಲದೆ ಅವರಲ್ಲಿ ತನ್ನದೇ ಆದ ಅನೇಕೆ ಕೌಶಲ್ಯಗಳು ಅಡಗಿರುತ್ತವೆ ಅನಂತಹ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರಿಗೆ ಉತ್ತಮ ದಾರಿಯನ್ನು ತೋರಿಸುವ ಜವಾಬ್ದಾರಿ ಈ ಶಿಕ್ಷಕರಲ್ಲಿದೆ. ಇಂದು ಈ ಹಾಸನದ ಕಲಾಭವನದಲ್ಲಿ ಇಂತಹ ಸುಂದರವಾದ ಶಿಕ್ಷಕರನ್ನು ಗೌರವಿಸುವ ಈ ಸಮಾರಂಭ ನಡೆಯುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಈ ಕಾರ್ಯಕ್ರಮ ಉತ್ತಮವಾಗಿ ನಡೆಯಲು ಸಹಕರಿಸಿದಂತಹ ಖಾಸಗಿ ಶಾಲಾ ಶಿಕ್ಷಕರ ಹಾಗೂ ಉಪನ್ಯಾಸಕರ ಬಳಗದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾದ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ಹಾಸನ ಅಧ್ಯಕ್ಷ ಸಿ ಎನ್ ನಾಗೇಶ್, ಮುಖ್ಯ ಅತಿಥಿಗಳಾಗಿ ಪಿ ಜಿ ಆರ್ ಸಿಂಧ್ಯಾ ರವರು, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ಜಿಲ್ಲಾಧ್ಯಕ್ಷ ಕೋಲಾರದವರಾದ ಆರ್ ಎ ಮಂಜುನಾಥ್, ರಾಜ್ಯ ಕಮಿಟಿ ಪದಾಧಿಕಾರಿಗಳಾದ ಆರ್ ರಂಜನ್, ಮನೋಜ್ ಸ್ವಾಮಿ ಹಿರೇಮಠ, ಎಚ್ ಎನ್ ಅಮರೇಂದ್ರ, ಎಚ್ ಡಿ ಡಾ: ವೆಂಕಟೇಶ್ ಪ್ರಸಾದ್, ಗಣೇಶ್ ಪ್ರಸಾದ್, ಗಾದಿ ಲಿಂಗಪ್ಪ, ಅವಿನಾಶ್, ಮದನ್ ಗೌಡ, ವೆಂಕಟಾಚಲಪತಿ, ಹಾಗೂ ಅನೇಕ ಗಣ್ಯನೂ ಗಣ್ಯ ವ್ಯಕ್ತಿಗಳು, ವಿವಿಧ ಜಿಲ್ಲೆಗಳಿಂದ ಶಿಕ್ಷಕರು ಭಾಗವಹಿಸಿದ್ದರು.

JCI ಕುಂದಾಪುರ ಸಿಟಿ ಆಶ್ರಯದಲ್ಲಿ ಸೆಲ್ಯೂಟ್ ದ ಸೈಲೆಂಟ್  ವರ್ಕರ್ಸ್ ಕಾರ್ಯಕ್ರಮದಲ್ಲಿ ಸನ್ಮಾನ :

ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಸೆಲ್ಯೂಟ್ ದ ಸೈಲೆಂಟ್  ವರ್ಕರ್ಸ್ ಕಾರ್ಯಕ್ರಮ ದಡಿಯಲ್ಲಿ ಕುಂದಾಪುರ  ಯುವ ಜನ ಕ್ರೀಡಾಂಗಣ  ಸಂಕೀರ್ಣ ದ ಹೆಲ್ಪ್ ಲೈನ್ ಕಚೇರಿ ಯಲ್ಲಿ       ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ವಿಜೇತ ಮಹೇಶ್ ಹೈಕಾಡಿ ಯವರನ್ನು ತಾಲೂಕು ಕ್ರೀಡಾಂಗಣ ಸಮಿತಿಯ ಯೋಜನಾಧಿಕಾರಿ ಕುಸುಮಾಕರ ಶೆಟ್ಟಿ  ಯವರು ಸನ್ಮಾನಿಸಿದರು.

ಸನ್ಮಾನ ಪಡೆದು ಮಾತನಾಡಿ, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ ರಿ.ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ ಮೊದಲ ಬಾರಿಗೆ ಖಾಸಗಿ ಶಿಕ್ಷಕರಿಗೆ ಪ್ರಶಸ್ತಿ  ನೀಡುವ ಪರಂಪರೆಯನ್ನು ಆರಂಭಿಸಿದೆ. ಉಡುಪಿ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ನಾನು ಆಯ್ಕೆ ಆಗಿರುವುದು ಸಂತೋಷ ತಂದಿದೆ. ಜೆಸಿಐ ಕುಂದಾಪುರ ಸಿಟಿ ಆಶ್ರಯದ ” ಸೆಲ್ಯೂಟ್ ದ ಸೈಲೆಂಟ್ ವರ್ಕರ್ಸ್ ” ಕಾರ್ಯಕ್ರಮದಡಿ  ಗುರುತಿಸಿ ಸನ್ಮಾನ ಮಾಡುವುದು ಅತೀವ ಸಂತಸ ನೀಡುತ್ತದೆ. ಖಾಸಗಿ ಶಾಲೆಗಳ ಶಿಕ್ಷಕರ  ಪ್ರತಿಭೆ ,ಅವರ ಕಾರ್ಯದಕ್ಷತೆಯನ್ನು ಸರ್ಕಾರ  ಗುರುತಿಸುವುದಿಲ್ಲ.ಸರ್ಕಾರ ಕೊಡುವ ಪ್ರಶಸ್ತಿಯಿಂದ  ವಂಚಿತರನ್ನಾಗಿ ಮಾಡಿದೆ.ಅಂತಹ ಸಂದರ್ಭದಲ್ಲಿ ರಾಜ್ಯ ಮಟ್ಟದ ಖಾಸಗಿ ಶಿಕ್ಷಕರ ಉಪನ್ಯಾಸರ ಬಳಗ ಪ್ರಶಸ್ತಿ ನೀಡುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿದೆ.ಕೊರೊನಾ ಕಾಲ ಘಟ್ಟದ ಎರಡು ವರ್ಷಗಳು ಶಿಕ್ಷಕ ಜೀವನ ದುರ್ಭರವಾಗಿದೆ. ಮೂಲವೇತನ‌ ,ಸೇವಾಭದ್ರತೆ  ನಮ್ಮ ಮೊದಲ ಆದ್ಯತೆ. ಅದನ್ನು ಜಾರಿಗೊಳಿಸುವಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಕಾಣುತಿದೆ.ನಮ್ಮ ಹೋರಾಟದಲ್ಲಿ ನಿಮ್ಮ ಸಹಭಾಗಿತ್ವವನ್ನು  ಸಹಕಾರವನ್ನು ಅಪೇಕ್ಷೆ ಪಡುತ್ತೇವೆ. ಜೆಸಿಐ ಕುಂದಾಪುರ ದ ಸಮಾಜಮುಖಿ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಮೂಡಿಬರಲಿ ಎಂದು ಮಹೇಶ್ ಹೈಕಾಡಿ ಹೇಳಿದರು

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಶಶಿಧರ ಶೆಟ್ಟಿ ಸಾಲಗದ್ದೆ ಜೆಸಿಐ ಕುಂದಾಪುರ ಸಿಟಿ ಯಾ  ಅಧ್ಯಕ್ಷ ವಿಜಯ ಭಂಡಾರಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಚರಣ್ ನಾವಡ ಜಯಚಂದ್ರ ಶೆಟ್ಟಿ ಕಾರ್ಯದರ್ಶಿ ಗುರುರಾಜ್ ಕೊತ್ವಾಲ್ ಉಪಾಧ್ಯಕ್ಷ ಅಭಿಲಾಶ್ ಜೇಸಿರೇಟ್ ಅಧ್ಯಕ್ಷೆ ಡಾ ಸೋನಿ ಕಾರ್ಯದರ್ಶಿ ಡಾ ಅಶ್ವತಿ ಇನ್ನಿತರರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ