ಬಿಜೆಪಿ ನಾಯಕನ ಹೆಸರು ಬರೆದಿಟ್ಟು ಮಹಿಳಾ ಮೂರ್ಚಾದ ನಾಯಕಿ ಆತ್ಮಹತ್ಯೆ
![sharanya](https://www.mahanayaka.in/wp-content/uploads/2022/07/sharanya.jpg)
ಪಾಲಕ್ಕಾಡ್: ಬಿಜೆಪಿ ನಾಯಕನ ಹೆಸರು ಬರೆದಿಟ್ಟು ಮಹಿಳಾ ಮೋರ್ಚಾದ ನಾಯಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.
ಮಹಿಳಾ ಮೋರ್ಚಾ ಪಾಲಕ್ಕಾಡ್ ಕ್ಷೇತ್ರದ ಖಜಾಂಚಿ ಶರಣ್ಯ ಆತ್ಮಹತ್ಯೆಗೆ ಶರಣಾದವರಾಗಿದ್ದು, ಶರಣ್ಯ ಡೆತ್ ನೋಟ್ ನಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ಪ್ರಜೀವ್ ಹೆಸರು ಪ್ರಸ್ತಾಪ ಮಾಡಲಾಗಿದ್ದು, ಪ್ರಜೀವ್ ತನ್ನನ್ನು ಬಳಸಿಕೊಂಡಿದ್ದಾನೆ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಹೇಳಲಾಗಿದೆ.
ಮೃತಳ ಮನೆಯಲ್ಲಿ 5 ಪುಟಗಳ ಡೆತ್ ನೋಟ್ ದೊರಕಿದ್ದು, ಪತ್ರದಲ್ಲಿ ಬಿಜೆಪಿ ಮುಖಂಡನ ಹೆಸರನ್ನು ಬರೆಯಲಾಗಿದೆ. ಈ ಬಗ್ಗೆ ಬಿಜೆಪಿ ನಾಯಕತ್ವಕ್ಕೆ ದೂರು ನೀಡಲಾಗಿದ್ದು, ಸೂಕ್ತ ಕ್ರಮವನ್ನು ನಿರೀಕ್ಷಿಸಿದ್ದೇವೆ ಎಂದು ಮೃತಳ ಸಹೋದರ ಮಣಿಕಂಡನ್ ತಿಳಿಸಿದ್ದಾರೆ.
ನಿನ್ನೆ ಸಂಜೆ ಈ ಘಟನೆ ನಡೆದಿದೆ. ಶರಣ್ಯಾ ಸಾವು ಬಿಜೆಪಿ ಕಾರ್ಯಕರ್ತರಲ್ಲಿ ಆಘಾತ ತಂದಿದೆ. ಘಟನೆ ಕುರಿತು ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka