ಮತ್ತು ಬರುವ ಔಷಧಿ ನೀಡಿ ಮಹಿಳಾ ಪೊಲೀಸ್ ಮೇಲೆ ಸಬ್ ಇನ್ಟ್ ಪೆಕ್ಟರ್ ನಿಂದ ಅತ್ಯಾಚಾರ - Mahanayaka
10:44 PM Thursday 18 - December 2025

ಮತ್ತು ಬರುವ ಔಷಧಿ ನೀಡಿ ಮಹಿಳಾ ಪೊಲೀಸ್ ಮೇಲೆ ಸಬ್ ಇನ್ಟ್ ಪೆಕ್ಟರ್ ನಿಂದ ಅತ್ಯಾಚಾರ

women police
08/08/2021

ನವದೆಹಲಿ:  ಮಹಿಳಾ ಪೊಲೀಸ್ ನ್ನು ಸಬ್ ಇನ್ಸ್ ಪೆಕ್ಟರ್ ವೋರ್ವ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಅತ್ಯಾಚಾರದ ಬಳಿಕ ಸಂತ್ರಸ್ತೆಯ ನಗ್ನ ಚಿತ್ರಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ್ದಾನೆ ಎಂದು ದೂರಲಾಗಿದೆ.

ಕೆಲಸದ ಸಮಯದಲ್ಲಿ ಮಹಿಳಾ ಪೊಲೀಸ್ ಹಾಗೂ ಸಬ್ ಇನ್ಸ್ ಪೆಕ್ಟರ್ ಭೇಟಿಯಾಗಿದ್ದು,  ಒಂದು ದಿನ ಸಬ್ ಇನ್ಸ್ ಪೆಕ್ಟರ್ ಮುನ್ರಿಕಾ ಪ್ರದೇಶದ ರೂಮ್ ಗೆ ಮಹಿಳಾ ಪೊಲೀಸ್ ನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಮತ್ತು ಬರುವ ಔಷಧಿಯನ್ನು ತಂಪು ಪಾನೀಯದಲ್ಲಿ ಬೆರೆಸಿ ನೀಡಿದ್ದಾನೆ.

ಮತ್ತೌಷಧಿಯ ಪರಿಣಾಮ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದು, ಈ ವೇಳೆ ಆರೋಪಿ ಸಬ್ ಇನ್ಸ್ ಪೆಕ್ಟರ್ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು, ಬಳಿಕ ಆಕೆಯ ನಗ್ನ ಚಿತ್ರಗಳನ್ನು ತೆಗೆದುಕೊಂಡಿದ್ದಾನೆ. ಈ ವಿಚಾರವನ್ನು ತಿಳಿಸಿದರೆ, ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಮಹಿಳಾ ಪೊಲೀಸ್ ಆರೋಪಿಸಿದ್ದಾರೆ.

ಘಟನೆಯ ಬಳಿಕ ಫೋಟೋಗಳನ್ನು ಬಳಸಿಕೊಂಡು ನಿರಂತರವಾಗಿ ಹಿಂಸೆ ನೀಡಿದ್ದು, ಲೈಂಗಿಕ ಕಿರುಕುಳ ನೀಡಿದ್ದ ಎಂದು ಮಹಿಳಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದರೂ, ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್

ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮದ್ಯವ್ಯಸನಿ ತಂದೆ!

ವಿದ್ಯಾರ್ಥಿನಿ ಜೊತೆಗೆ ರಾಸಲೀಲೆ ನಡೆಸುತ್ತಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದ ಪ್ರಾಧ್ಯಾಪಕ! | “ರೇಪ್ ಮಾಡ್ದ” ಎಂದಿದ್ದ ವಿದ್ಯಾರ್ಥಿನಿ ಯೂಟರ್ನ್!?

403 ಕ್ಷೇತ್ರಗಳಲ್ಲಿಯೂ ASP ಸ್ಪರ್ಧೆ | ಮಾಯಾವತಿಗೆ ಅಸುರಕ್ಷಿತ ಭಾವನೆ ಇದೆ- ಚಂದ್ರಶೇಖರ್ ಆಜಾದ್

ಡಾಮಿನೊಸ್ ಪಿಜ್ಜಾ ಮಳಿಗೆಯಲ್ಲಿ ಯುವತಿಗೆ ಹಲ್ಲೆ ನಡೆಸಿದ ಮ್ಯಾನೇಜರ್ ಅರೆಸ್ಟ್

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ  ಕಿರುಕುಳ | ಆರೋಪಿ ಅರೆಸ್ಟ್

ಇತ್ತೀಚಿನ ಸುದ್ದಿ