ಮಹಿಳಾ ಸಿಬ್ಬಂದಿಗಳೊಂದಿಗೆ ಆರೋಗ್ಯಾಧಿಕಾರಿ ಚೆಲ್ಲಾಟ: ವಿಡಿಯೋ ವೈರಲ್ - Mahanayaka
8:13 PM Wednesday 11 - December 2024

ಮಹಿಳಾ ಸಿಬ್ಬಂದಿಗಳೊಂದಿಗೆ ಆರೋಗ್ಯಾಧಿಕಾರಿ ಚೆಲ್ಲಾಟ: ವಿಡಿಯೋ ವೈರಲ್

viral video
26/11/2021

ಮಂಗಳೂರು: ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್, ಕಚೇರಿ ವೇಳೆಯಲ್ಲಿ ತನ್ನ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದ್ದು,  ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆರೋಗ್ಯಾಧಿಕಾರಿ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಯೊಂದಿಗೆ ಪ್ರತಿ ನಿತ್ಯ ಅಸಭ್ಯ ವರ್ತನೆ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.

ಈ ಅಯೋಗ್ಯ ಅಧಿಕಾರಿ ಕೇವಲ ಆರೋಗ್ಯಾಧಿಕಾರಿ ಮಾತ್ರವಲ್ಲದೇ ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿದ್ದ ಎನ್ನಲಾಗಿದೆ. ಮಹಿಳಾ ಸಿಬ್ಬಂದಿಯನ್ನು ಟ್ರಿಪ್ ಗೆ ಕರೆದುಕೊಂಡು ಹೋಗುತ್ತಿದ್ದ ರತ್ನಾಕರ್, ತನ್ನ ಚೆಲ್ಲಾಟಕ್ಕೆ ಸಹಕರಿಸದಿರುವ ಸಿಬ್ಬಂದಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ರತ್ನಾಕರ್ ನನ್ನು  ಹಿರಿಯ ಅಧಿಕಾರಿಗಳು ಸದ್ಯ ಅಮಾನತು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರಿನಂತಹ ಪ್ರದೇಶದಲ್ಲಿ ಹಾಡಹಗಲೇ ಇಂತಹ ಘಟನೆ ನಡೆದಿರುವ ಬಗ್ಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತೀವ್ರ ಎದೆ ನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅಣ್ಣಾ ಹಜಾರೆ

ಇಬ್ಬರ ಪ್ರಾಣ ಬಲಿ ಪಡೆದ ದುಬಾರಿ ಟೊಮೆಟೋ!

“ಓ ಮಾರಿಕೊಂಡ ಮಾಧ್ಯಮಗಳೇ, ಹಂಸಲೇಖ ನೀಡಿದ್ದು ‘ವಿವಾದಾತ್ಮಕ ಹೇಳಿಕೆ’ ಅಲ್ಲ” | ಚಾಟಿ ಬೀಸಿದ ಖ್ಯಾತ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ

ಬ್ರಾಹ್ಮಣರು ಕದ್ದು ಮುಚ್ಚಿ ಮಾಂಸ ಸೇವಿಸುತ್ತಾರೆ ಎಂದಿದ್ದ ಪೇಜಾವರ ಶ್ರೀ ಮೇಲೆ ಯಾಕೆ ಕೇಸು ಹಾಕಲಿಲ್ಲ? | ಹಂಸಲೇಖ ಬೆಂಬಲಿಗರ ಪ್ರಶ್ನೆ

ಶಾಕಿಂಗ್ ನ್ಯೂಸ್: ಕೈಯ ಮಣಿಕಟ್ಟು ಕೊಯ್ದುಕೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬೆದರಿಕೆ: ಹಿಂದೂ ಜಾಗರಣ ವೇದಿಕೆಯ ಮುಖಂಡನ ವಿರುದ್ಧ ಪ್ರಕರಣ ದಾಖಲು

ಇತ್ತೀಚಿನ ಸುದ್ದಿ