"ನೀನು ಒಪ್ಪಿಕೊಂಡರೆ, ಕೇಳಿದ್ದು ಕೊಡುತ್ತೇನೆ" | ಆಸ್ಪತ್ರೆ ಟೆಕ್ನೀಷಿಯನ್  ಆಡಿಯೋ ವೈರಲ್ | ಸಂತ್ರಸ್ತ ಮಹಿಳೆಯಿಂದ ದೂರು - Mahanayaka
1:46 AM Thursday 12 - December 2024

“ನೀನು ಒಪ್ಪಿಕೊಂಡರೆ, ಕೇಳಿದ್ದು ಕೊಡುತ್ತೇನೆ” | ಆಸ್ಪತ್ರೆ ಟೆಕ್ನೀಷಿಯನ್  ಆಡಿಯೋ ವೈರಲ್ | ಸಂತ್ರಸ್ತ ಮಹಿಳೆಯಿಂದ ದೂರು

23/02/2021

ಹಾವೇರಿ: ಸರ್ಕಾರಿ ಆಸ್ಪತ್ರೆಯ ಟೆಕ್ನೀಷಿಯನ್ ವೋರ್ವನ ವಿರುದ್ಧ  ಆಸ್ಪತ್ರೆಯ ಮಹಿಳಾ ಕ್ಲೀನರ್ ಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪಿ ಮಾನಸಿಕವಾಗಿ ಪದೇ ಪದೇ ಹಿಂಸೆ ನೀಡಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.

ಎಕ್ಸರೆ ಟೆಕ್ನೀಷಿಯನ್​ ಕಬೇರ ಸಾವಂತ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಈತ ಪದೇ ಪದೇ ಆಸ್ಪತ್ರೆಯ ಮಹಿಳಾ ಕ್ಲೀನರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸುತ್ತಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸುವಾಗ “ಮಜಾ ಮಾಡುವ ಬಾ,  ನೀನು ಏನು ಕೇಳಿದರೂ ಕೊಡುತ್ತೇನೆ“ಎಂದು ಪೀಡಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಕೆಲಸದ ಜಾಗದಲ್ಲಿ ಈತನ ಹಿಂಸೆಯಿಂದ ಬೇಸತ್ತ ಮಹಿಳೆ ಕೊನೆಗೆ ದೂರು ನೀಡಿದ್ದಾರೆ. ತನ್ನ ತಂಟೆಗೆ ಬರಬೇಡ ಎಂದು ಎಷ್ಟು ಸಲ ಹೇಳಿದರೂ, ಆತ ಕೇಳಿರಲಿಲ್ಲ.  “ನೀನು ಒಪ್ಪಿಕೊಂಡರೆ, ಕೇಳಿದ್ದು ಕೊಡುತ್ತೇನೆ” ಎಂದು ಆಮಿಷ ಒಡ್ಡುತ್ತಿದ್ದ ಎಂದು ಮಹಿಳೆ ದೂರಿದ್ದಾರೆ.

ಈತನ ವಿರುದ್ಧ ಮಹಿಳೆ ದೂರು ನೀಡಿರುವುದು ತಿಳಿಯುತ್ತಿದ್ದಂತೆಯೇ ಆರೋಪಿ ಕುಬೇರ ಸಾವಂತ ತಲೆಮರೆಸಿಕೊಂಡಿದ್ದಾನೆ. ಇನ್ನೂ ಆರೋಪಿಯು ಮಹಿಳೆಯ ಜೊತೆಗೆ ಅಸಭ್ಯವಾಗಿ ಮಾತನಾಡುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆತನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈತನ ವಿರುದ್ಧ ಮಹಿಳೆ ದೂರು ನೀಡಿರುವುದನ್ನು ಸ್ವಾಗತಿಸಿದ್ದು, ಇಂತಹ ಕಾಮುಕರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಮಹಾನಾಯಕ ಅಂತರ್ಜಾಲ ಮಾಧ್ಯಮದ ಸುದ್ದಿಗಳಿಗಾಗಿ 6363101317 ನಂಬರ್ ನನ್ನು ನಿಮ್ಮ ಗ್ರೂಪ್ ಗಳಿಗೆ ಸೇರಿಸಿಕೊಳ್ಳಿ.  ಕ್ಷಣ ಕ್ಷಣದ ಮಾಹಿತಿಗಳಿಗಾಗಿ ಫೇಸ್ ಬುಕ್ ಪೇಜ್ ಗೆ ಲೈಕ್ ಮಾಡಿ.

ಇತ್ತೀಚಿನ ಸುದ್ದಿ